IMG_20250213_113950

 

 

ಪ್ರಪಂಚ ಕಂಡ ಅನುಕರಣೀಯ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ದಲಿತ ನಾಯಕರಾಗಿ ಬಿಂಬಿಸುವುದು ಸರಿಯೇ ಎಂಬ ಪ್ರಶ್ನೆ ಮುಂದಿಟ್ಟವರು ಎಐಟಿ ಉಪನ್ಯಾಸಕ ಡಾ.ಎಂ.ಎ.ಗೌತಮ್.

ವಿದ್ಯಾನಗರದ ‘ಕಡೂರ್ ನಿವಾಸ’ ಆವರಣದಲ್ಲಿ ರೋಟರಿ ಕಾಫಿಲ್ಯಾಂಡ್ ‘ಕುಟುಂಬ ಮಿಲನ’ ಕಾರ್ಯಕ್ರಮದಲ್ಲಿ ‘ಅಂಬೇಡ್ಕರ್ ಮತ್ತು ಸಂವಿಧಾನ’ ಕುರಿತಂತೆ ನಿನ್ನೆ ಸಂಜೆ ಅವರು ಸಂವಾದಿಸಿದರು.

1891ರ ಏಪ್ರಿಲ್ 14ರಂದು ಮಹಾರಾಷ್ಟ್ರ ರತ್ನಗಿರಿ ಜಿಲ್ಲೆಯ ಖೇಡಾ ತಾಲ್ಲೂಕಿನ ಅಂಬೇವಾಡಿಯಲ್ಲಿ ಭೀಮರಾವ್ ರಾಮಜೀ ಅಂಬೇಡ್ಕರ್ ಜನನ. ತಂದೆ ರಾಮಜೀ ಸತ್ಪಾಲ್, ತಾಯಿ ಭೀಮಾಬಾಯಿಯರ 14ನೆಯ ಮಗು. 1907ರಲ್ಲಿ 10ನೆಯ ತರಗತಿ ತೇರ್ಗಡೆ. 750ಅಂಕಗಳಿಗೆ 282 ಅಂಕ ಗಳಿಕೆ. ಅಸ್ಪøಶ್ಯವರ್ಗದ ಹಿಂದುಳಿದ ಸಮುದಾಯದ ಬಾಲಕ ಇಷ್ಟು ಪಡೆದದ್ದೆ ಆಗ ಹೆಗ್ಗಳಿಕೆ ಆಗಿತ್ತು. ಸಮಾಜ ಸುಧಾರಕ ಎಸ್.ಕೆ.ಬೋಲೆ ಮತ್ತು ನಿವೃತ್ತ ಶಿಕ್ಷಕ ಕೆ.ಎ.ಕಲಸÀ್ಕರ್ ನೇತೃತ್ವದಲ್ಲಿ ಬಾಲಕನನ್ನು ಗುರುತಿಸಿ, ಗೌರವಿಸಿ ಉಡುಗೊರೆಯಾಗಿ ನೀಡಿದ ಪುಸ್ತಕವೇ ಬೌದ್ಧಧರ್ಮ ಸ್ವೀಕಾರಕ್ಕೆ ಮೂಲಪ್ರೇರಣೆ ಎಂದು ಮುಂದೆ ಅಂಬೇಡ್ಕರ್ ಹೇಳಿಕೊಂಡಿದ್ದಾರೆಂದು ಡಾ.ಗೌತಮ್ ವಿವರಿಸಿದರು.

ಶೋಷಿತವರ್ಗದಲ್ಲಿ ಹುಟ್ಟಿದವರಿಗೆ ಅವಮಾನ, ಕ್ರೌರ್ಯ ಸಹಜವಾಗಿಯೆ ಅನುಭವಕ್ಕೆ ಬಂದಿತ್ತು. ಹೊರಗಿನ ಬದಲಾವಣೆ ಸುಲಭ ಆದರೆ ಆಂತರಿಕ ಬದಲಾವಣೆ ಮುಖ್ಯ. ಮನಸ್ಸಿನ ನಿಯಂತ್ರಣ ಸಮೂಹವನ್ನು ಎದುರಿಸುವ ಸತತ ಶಕ್ತಿ, ಮೌಲ್ಯಗಳನ್ನು ದೃಢೀಕರಿಸಿ ಅಛಲವಾಗಿಡುವುದು ಅಂಬೇಡ್ಕರ್ ಅವರ ಗ್ರಹಿಕೆ ಮತ್ತು ಆಲೋಚನೆಯಾಗಿತ್ತು. ಶಿಕ್ಷಣದ ಮಹತ್ವವನ್ನು ಅರಿತವರು.

ಸ್ವಸಾಮಥ್ರ್ಯದ ಬಗ್ಗೆ ಆತ್ಮವಿಶ್ವಾಸ ಹೊಂದಿದ್ದು, ಬಡತನ ಸಾಧನೆಗೆ ಅಡ್ಡಿಅಲ್ಲ ಎಂದು ನಂಬಿದವರು. 1913ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ ಸ್ನಾತಕೋತ್ತರ ಪದವಿ. 1916ರಲ್ಲಿ ಲಂಡನ್‍ನಲ್ಲಿ ಕಾನೂನು ಪದವಿ ಜೊತೆಗೆ ಪಿಎಚ್‍ಡಿ ಮಾಡಿದ್ದ ಅಂಬೇಡ್ಕರ್ 1921ಕ್ಕೆ ಭಾರತಕ್ಕೆ ಹಿಂತಿರುಗಿದವರು. ವಿದೇಶದಲ್ಲೆ ಉತ್ತಮ ಉದ್ಯೋಗದ ಅವಕಾಶವಿದ್ದರೂ ಭಾರತದ ಸ್ಥಿತಿಗತಿ ಸುಧಾರಿಸುವ ಆಶಯ ಹೊಂದಿದ್ದ ಅಂಬೇಡ್ಕರ್ ರಾಷ್ಟ್ರೀಯವಾದಿ. ಅಸ್ಪøಶ್ಯತೆ ಮತ್ತು ಜಾತಿಬೇಧ ನೀತಿಯ ವಿರುದ್ಧ ಮಹತ್ವದ ಹೋರಾಟ ಮಾಡಿದವರೆಂದರು.

ಬರೋಡ ಸರ್ಕಾರದ ರಕ್ಷಣಾ ಕಾರ್ಯದರ್ಶಿ ಮಹತ್ವದ ಹುದ್ದೆಯನ್ನು ಜಾತಿ ಬೇಧ ನೀತಿ ಪ್ರತಿಭಟಿಸಿ ತೊರೆದು ಕೆಲಕಾಲ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಾರೆ. ‘ಮೂಕನಾಯಕ’ ನಿಯತಕಾಲಿಕೆ ಮೂಲಕ ಹಿಂದೂಮೌಢ್ಯದ ವಿರುದ್ಧ ಜನಜಾಗೃತಿಗೆ ತೊಡಗಿದವರು. ಬಹಿಷ್ಕøತ ಹಿತರಕ್ಷಣಾ ಸಭಾ ಸ್ಥಾಪಿಸಿ ಹೋರಾಡಿದವರು. ದಲಿತರಿಗಾಗಿ ಪ್ರತ್ಯೇಕ ಮತದಾನ ಪ್ರತಿಪಾದಿಸಿದವರು. 1932ರಲ್ಲಿ ಪೂನಾ ಒಪ್ಪಂದದ ಮೂಲಕ ದಲಿತರಿಗಾಗಿ ಸ್ಥಾನ ಮೀಸಲಾತಿ ಸೃಷ್ಟಿಸಿದವರೆಂದು ಬಣ್ಣಿಸಿದರು.

21ವರ್ಷ ಪೂರ್ಣಗೊಂಡ ಎಲ್ಲ ಪ್ರಜೆಗಳಿಗೂ ಮತದ ಹಕ್ಕು ಮತ್ತು ಮಹಿಳೆಯರಿಗೆ ಮತದಾನದ ಹಕ್ಕು ಪ್ರತಿಪಾದಿಸಿದ ಅಂಬೇಡ್ಕರ್, ಕಾಗೆ, ಎಮ್ಮೆ, ನಾಯಿ ಬಳಸುವ ಕೆರೆಯನೀರನ್ನು ದಲಿತರು ಬಳಸದಂತೆ ಪ್ರತಿಬಂಧಿಸಿದ ಕ್ರಮವನ್ನು ವಿರೋಧಿಸಿ 7000ಜನರೊಂದಿಗೆ ಹೋರಾಡಿದವರು. ಸಂವಿಧಾನ ಕರಡುಪ್ರತಿ ತಯಾರಿಕೆ ಸಮಿತಿ ಅಧ್ಯಕ್ಷರಾಗಿ ಸತತವಾಗಿ 2ವರ್ಷ, 11ತಿಂಗಳು, 18ಗಂಟೆ ಶ್ರಮವಹಿಸಿ ಒಬ್ಬರೇ ಸಂವಿಧಾನ ರಚಿಸಿದವರೆಂದರು.

ಪಂಚವಾರ್ಷಿಕ ಯೋಜನೆ, ಆರ್‍ಬಿಐ ಸ್ಥಾಪನೆ, ಭಾಕ್ರಾ ಅಣೆಕಟ್ಟು ಅಂಬೇಡ್ಕರ್ ಪ್ರಯತ್ನದ ಫಲ ಎಂದ ಡಾ.ಗೌತಮ್, ಮಹಿಳೆಯರಿಗೆ ಆಸ್ತಿ-ಮೀಸಲು, ದತ್ತು ಸ್ವೀಕಾರದ ನಿಯಮಾವಳಿ ಒಳಗೊಂಡ ಹಿಂದೂ ಕೋಡ್ ಬಿಲ್ ಅನುಷ್ಠಾನಕ್ಕೆ ಅಡ್ಡಿಯಾದಾಗ ಸಚಿವಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೇಸ್ ನೇತೃತ್ವದ ಸರ್ಕಾರದಿಂದ ಹೊರಬಂದವರು. ಸಮಾಜದಲ್ಲಿ ಶೇ.60ರಷ್ಟಿರುವ ದುಡಿಯುವ ವರ್ಗವನ್ನು ಪ್ರತಿನಿಧಿಸುವ ಕಾರ್ಮಿಕರ ಪಕ್ಷ ಸ್ಥಾಪಿಸಿ ಸಮಾನ ಕೆಲಸಕ್ಕೆ ಸಮಾನ ವೇತನ ಜೊತೆಗೆ 8ಗಂಟೆ ಕಾರ್ಯನಿರ್ವಹಣಾ ಪದ್ಧತಿ ಜಾರಿಗೊಳಿಸಿದವರೆಂದರು.

ಎರಡು ಸ್ನಾತಕೋತ್ತರ ಪದವಿ, ನಾಲ್ಕು ಪಿಎಚ್‍ಡಿ, 64ವರ್ಷ ಭಾಷೆಗಳನ್ನು ಅರಿತಿದ್ದ ಅಂಬೇಡ್ಕರ್ 9ಭಾಷೆಗಳಲ್ಲಿ ಪ್ರಾವೀಣ್ಯತೆ ಗಳಿಸಿದ ಮಹಾನ್ ಮೇಧಾವಿ, ಮಹಾನ್ ಮಾನವತಾವಾದಿ. ಆದರೂ ಅವರನ್ನು ಒಂದು ವರ್ಗದ ನಾಯಕರಾಗಿ ಬಿಂಬಿಸಿರುವುದು ರ್ದುದೈವ ಸಂಗತಿ ಎಂದು ಡಾ.ಗೌತಮ್ ವ್ಯಾಖ್ಯಾನಿಸಿದರು.

ಅಧ್ಯಕ್ಷತೆ ವಹಿಸಿದ್ದ ರೋಟರಿ ಕಾಫಿಲ್ಯಾಂಡ್ ಅಧ್ಯಕ್ಷ ತನೂಜ್ ಸ್ವಾಗತಿಸಿ, ಸಹಕಾರ್ಯದರ್ಶಿ ಆನಂದ್ ವಂದಿಸಿದರು. ಮಾಜಿಸಹಾಯಕ ಗೌರ್ನರ್ ಗುರುಮೂರ್ತಿ ಮಾತನಾಡಿದರು. ಇದೇ ಸಂದರ್ಭದಲ್ಲಿ ರುದ್ರೇಶಕಡೂರ್ ಮತ್ತು ಯಶೋಧ ದಂಪತಿಗಳನ್ನು ಕ್ಲಬ್‍ವತಿಯಿಂದ ಸನ್ಮಾನಿಸಲಾಯಿತು. ಸುಂದರಲಕ್ಷ್ಮಿ ಪ್ರಾರ್ಥಿಸಿದರು. ಸಂಗೀತ ಸಂಜೆ ಜನಮನ ಸೆಳೆಯಿತು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ