ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಾಜ್ಯದಾದ್ಯಂತ ಗ್ರಾಮ ಆಡಳಿತ ಅಧಿಕಾರಿಗಳು ಮುಷ್ಕರ ನಡೆಸುತ್ತಿದ್ದಾರೆ.
ರಾಜ್ಯದ ಎಲ್ಲಾ ತಾಲ್ಲೂಕು ಕೇಂದ್ರಗಳ ಎದುರು ಕಳೆದ ಕೆಲ ದಿನಗಳಿಂದ ಗ್ರಾಮ ಆಡಳಿತ ಅಧಿಕಾರಿಗಳು (ಗ್ರಾಮ ಲೆಕ್ಕಿಗರು) ಪ್ರತಿಭಟನೆ ನಡೆಸುತ್ತಿದ್ದಾರೆ.
ರಾಜ್ಯ ಸಂಘದ ಕರೆಯ ಮೇರೆಗೆ ಮೂಡಿಗೆರೆ ತಾಲೂಕು ತಾಲೂಕು ಕಚೇರಿ ಎದುರು ಗ್ರಾಮ ಆಡಳಿತ ಅಧಿಕಾರಿಗಳು ತಾಲ್ಲೂಕು ಕಛೇರಿ ಎದುರು ಮುಷ್ಕರ ನಡೆಸುತ್ತಿದ್ದಾರೆ.
ನೌಕರರ ಬೇಡಿಕೆ ಏನಂದರೆ ಕನಿಷ್ಠಪಕ್ಷ ಮೂಲಭೂತ ಸೌಕರ್ಯವನ್ನು ನೀಡಿ ಮಹಿಳಾ ಸಿಬ್ಬಂದಿಗಳಿಗೆ ಗ್ರಾಮಗಳಿಗೆ ತೆರಳಿದಾಗ ಶೌಚಾಲಯದ ವ್ಯವಸ್ಥೆ ಇಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗುತ್ತಿದೆ ಎಂದು ತಿಳಿಸಿದರು.
ಕಳೆದ ವರ್ಷ ಇದರ ಬಗ್ಗೆ ಮುಷ್ಕರ ಮಾಡಿದ್ದೆವು ಏನು ಪ್ರಯೋಜನವಾಗಿಲ್ಲ ಈಗಲಾದರೂ ನಮ್ಮ ಬಗ್ಗೆ ಕಾಳಜಿ ತೋರಲಿ ಎಂದು ನಮ್ಮ ಒತ್ತಾಯಿಸಿದ್ದಾರೆ.
ಮಹಿಳಾ ಸಿಬ್ಬಂದಿಗಳು ಮಾತನಾಡುತ್ತಾ ಸಮಯದ ಮಿತಿ ಇಲ್ಲದೆ ನಮ್ಮನ್ನು ದುಡಿಸಿಕೊಳ್ಳುತ್ತಿದ್ದಾರೆ ನಮಗೂ ಸಂಸಾರವಿದೆ. ನಮಗೇನಾದರೂ ತೊಂದರೆಯಾದಲ್ಲಿ ಯಾರು ಹೊಣೆಗಾರರು. ಎಲ್ಲಾ ಕೆಲಸ ಕಾರ್ಯಗಳು ನಮ್ಮ ಮೇಲೆ ಹೇರಿ ಒತ್ತಡ ನೀಡುತ್ತಿದ್ದಾರೆ. ದಯಮಾಡಿ ಇವರ ಬಗ್ಗೆ ಗಮನಹರಿಸಬೇಕೆಂದು ಮಾಧ್ಯಮದ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರದಿಂದ ಜನರಿಗೆ ತುಂಬಾ ತೊಂದರೆಯುಂಟಾಗುತ್ತಿದೆ. ಕಂದಾಯ ಇಲಾಖೆಯ ನಿತ್ಯ ಕೆಲಸಗಳಿಗೆ ಅಡ್ಡಿಯಾಗುತ್ತಿದೆ. ಸರ್ಕಾರ ಆದಷ್ಟು ಬೇಗ ನೌಕರರ ಸಮಸ್ಯೆಗಳಿಗೆ ಸ್ಪಂದಿಸಿ ಸುಗಮ ಕಾರ್ಯನಿರ್ವಹಣೆಗೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.



