laxmi 1

 

 

ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಗೃಹಲಕ್ಷ್ಮಿ ಯೋಜನೆ ಮೂರು ತಿಂಗಳ ಮೂರು ಕಂತಿನ ಹಣ ಬಾರದೇ ಸಾಕಷ್ಟು ಮಹಿಳೆಯರು ಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ. ಈ ಸಂಬಂಧ   ಖುದ್ದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ಕುರಿತು   ಮಾತನಾಡಿ, ನಾನು ಆಸ್ಪತ್ರೆಯಲ್ಲಿರುವ ಕಾರಣ ಮೂರು ತಿಂಗಳು ವಿಳಂಬವಾಗಿದೆ. ನಾನಿದ್ದಾಗ ಫೈನಾನ್ಸ್ ಇಲಾಖೆಗೆ ನಾನು ಒತ್ತಡ ಹಾಕುತ್ತಿದ್ದೆ. ಜೊತೆಗೆ ಮುಖ್ಯಮಂತ್ರಿ ಗಮನಕ್ಕೆ ತರುತ್ತಿದ್ದೆ. ದುರ್ದೈವ ಅಪಘಾತ ಬಳಿಕ ನಲವತ್ತು ದಿನ ಆಸ್ಪತ್ರೆಯಲ್ಲಿದ್ದ ಕಾರಣ ತಡವಾಗಿದೆ, ಇಷ್ಟು ದಿನ ಇಲಾಖೆಯಿಂದ ಹಣ ಬಿಡುಗಡೆ ಮಾಡ್ತಿದ್ದೇವು. ಈಗ ಬೆಂಗಳೂರು ಸುತ್ತಮುತ್ತಲಿನ ನಾಲ್ಕು ತಾಲೂಕು ಪಂಚಾಯತಿಗೆ ದುಡ್ಡು ಹಾಕಿ, ಅಲ್ಲಿಂದ ಸಿಡಿಪಿಒ ಮುಖಾಂತರ ಸೇಮ್ ಚಾನಲ್ ಹಣ ಬಿಡುಗಡೆ ಮಾಡಲು ಹೆಚ್ಚು ಕಮ್ಮಿ ಆಗಿದೆ . ಇನ್ನೊಂದು ವಾರ ಹತ್ತು ದಿನದಲ್ಲಿ ಖಾತೆಗಳಿಗೆ ಹಣ ಹಾಕುತ್ತೇವೆ ಎಂದು ಸ್ಪಷ್ಟಪಡಿಸಿದರು.

ಇದೇ ಮೊದಲ ಬಾರಿಗೆ ಗೃಹಲಕ್ಷ್ಮಿ ಹಣವನ್ನು ತಾಲೂಕು ಪಂಚಾಯಿತಿ ವತಿಯಿಂದ ಬಿಡುಗಡೆ ಮಾಡುತ್ತೇವೆ. ಇನ್ನೊಂದು ವಾರ ಹತ್ತು ದಿನದಲ್ಲಿ ದುಡ್ಡು ಬರುತ್ತೆ. ಎರಡು ತಿಂಗಳ ಹಣ ಫೈನಾನ್ಸ್ ದವರು ಟ್ರಸರಿಗೆ ಹಾಕಿದ್ದಾರೆ ಎನ್ನುವ ಮಾಹಿತಿ ಇದೆ. ನಾನು ಕೂಡ ಬಜೆಟ್ ಅಧಿವೇಶನಕ್ಕೆ ಹೋಗುತ್ತಿದ್ದೇನೆ. ಅಲ್ಲಿ ಈ ಬಗ್ಗೆ ಚರ್ಚೆ ಮಾಡಿ ಮೂರು ತಿಂಗಳ ದುಡ್ಡನ್ನ ಹಾಕಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಹೊಸ ಪ್ಯಾಟರ್ನ್ ಮಾಡಿದ್ದರಿಂದಲೂ ಹಣ ಬರಲು ವಿಳಂಬವಾಗಿದೆ. ಆದ್ರೆ ಹೊಸ ಪ್ಯಾಟರ್ನ್ ದಿಂದ ಯಾವುದೇ ಗೊಂದಲ ಇಲ್ಲ. ಡೈರೆಕ್ಟ್ ಅವರ ಅಕೌಂಟ್ ಗೆ ಹಣ ಹಾಕುತ್ತೇವೆ. ಎಲ್ಲಾ ಗೃಹಲಕ್ಷ್ಮಿಯರಿಗೆ ನಿಮ್ಮ ಹಣ ಬರುತ್ತೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ.

ಒಟ್ಟಿನಲ್ಲಿ ಮೂರು ತಿಂಗಳ ಕಂತಿನ ಹಣ ಬಂದಿಲ್ಲ ಎಂದು ಕಂಗಾಲಾಗಿದ್ದ ಗೃಹಲಕ್ಷ್ಮಿಯರು ಇದೀಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಭರವಸೆಯಿಂದ ಮೂರು ತಿಂಗಳ ಆರು ಸಾವಿರ ರೂಪಾಯಿ ಒಂದೇ ಸಮಯಕ್ಕೆ ಬರುತ್ತೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಕೊಟ್ಟ ಮಾತಿನಂತೆ ಸಚಿವರು ಹಣ ಹಾಕಲಿ ಎಂದು ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ