k venkatesh

 

 

ಮೂಡಿಗೆರೆ ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಕಾಂಗ್ರೇಸ್ ನ ಹಿರಿಯ ಸದಸ್ಯ ಕೆ. ವೆಂಕಟೇಶ್ ಆಯ್ಕೆಯಾಗಿದ್ದಾರೆ.

ಇಂದು ಪಟ್ಟಣ ಪಂಚಾಯಿತಿಯಲ್ಲಿ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದಿಂದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಕೆ. ವೆಂಕಟೇಶ್ ಒಂದು ಮತದ ಅಂತರದಿಂದ ಗೆಲುವು ಪಡೆದಿದ್ದಾರೆ.

ಕಾಂಗ್ರೇಸ್ ನಿಂದ ಕೆ. ವೆಂಕಟೇಶ್ ಮತ್ತು ಬಿಜೆಪಿಯಿಂದ ಆಶಾ ಮೋಹನ್ ನಾಮಪತ್ರ ಸಲ್ಲಿಸಿದ್ದರು. ಮತದಾನದ ನಂತರ ಕೆ.ವೆಂಕಟೇಶ್ 7 ಮತಗಳನ್ನು ಮತ್ತು ಆಶಾ ಮೋಹನ್ 6 ಮಗಳನ್ನು ಪಡೆದರು.

ಮೂಡಿಗೆರೆ ಪಟ್ಟಣ ಪಂಚಾಯಿತಿಯ 11 ವಾರ್ಡುಗಳಲ್ಲಿ 6 ಬಿಜೆಪಿ, 4 ಕಾಂಗ್ರೆಸ್, ಮತ್ತು 1 ಜೆಡಿಎಸ್ ಸದಸ್ಯರು ಇದ್ದರು. ಜೆಡಿಎಸ್ ಸದಸ್ಯೆ ಗೀತಾ ಅಜಿತ್ ಅವರು ಕಾಂಗ್ರೆಸ್ ಗೆ ಸೇರಿ ಅಧ್ಯಕ್ಷರಾಗಿದ್ದರು, ಬಿಜೆಪಿ ಸದಸ್ಯ ಜಿ.ಬಿ. ಧರ್ಮಪಾಲ್ ಕಾಂಗ್ರೇಸ್ ಗೆ ಬೆಂಬಲಿಸಿದ್ದರು. ಶಾಸಕಿ ನಯನಾ ಮೋಟಮ್ಮ ಸೇರಿ ಕಾಂಗ್ರೇಸ್ ಪಕ್ಷ 7 ಮತಗಳೊಂದಿಗೆ ಅಧ್ಯಕ್ಷ ಸ್ಥಾನದಲ್ಲಿ ಗೆಲುವು ಪಡೆದಿದೆ.

ಧರ್ಮಪಾಲ್ ಹೊರತುಪಡಿಸಿ ಬಿಜೆಪಿ 5 ಸದಸ್ಯರು, ಸಂಸದ ಕೋಟಾ ಶ್ರೀನಿವಾಸ ಪೂಜಾರಿಯವರು ಮತ್ತು ವಿಧಾನಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಅವರ ಮತಗಳು ಸೇರಿ 7 ಸದಸ್ಯ ಬಲವನ್ನು ಹೊಂದಿತ್ತು. ಚುನಾವಣೆಯಲ್ಲಿ ಎಲ್ಲಾ ಸದಸ್ಯರು ಹಾಜರಾಗಿದ್ದರೆ  ತಲಾ 7 ಮತಗಳ ಎರಡೂ ಪಕ್ಷಗಳಿಗೆ ದೊರೆತು ಲಾಟರಿ ಮೂಲಕ ಅಧ್ಯಕ್ಷರ ಆಯ್ಕೆ ನಡೆಯಬೇಕಾಗಿತ್ತು. ಆದರೆ ಬಿಜೆಪಿ ಸದಸ್ಯ ಮಾಜಿ ಅಧ್ಯಕ್ಷ ಪಿ.ಜಿ.ಅನುಕುಮಾರ್ (ಪಟ್ಟದೂರು ಪುಟ್ಟಣ್ಣ) ಮತದಾನಕ್ಕೆ ಗೈರಾಗಿದ್ದರಿಂದ ಕಾಂಗ್ರೇಸ್ ಅಭ್ಯರ್ಥಿ 7-6 ಮತಗಳ ಅಂತರದಿಂದ ಗೆಲುವು ಪಡೆದರು.

ಈ ಸೋಲಿಗೆ   ಬಿಜೆಪಿ ಸದಸ್ಯ ಧರ್ಮಪಾಲ್ ಅವರು ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದು, ಮತ್ತೊಬ್ಬ ಸದಸ್ಯ ಅನುಕುಮಾರ್ ಅವರು ಕುಂಭಮೇಳಕ್ಕೆ ತೆರಳಿ ಮತದಾನದಲ್ಲಿ ಭಾಗವಹಿಸದಿರುವುದು ಕಾರಣವಾಗಿದೆ.

ಈ ಘಟನೆಗಳು ಬಿಜೆಪಿ ಪಕ್ಷದ ಆಂತರಿಕ ಭಿನ್ನಮತ ಮತ್ತೊಮ್ಮೆ ಬಹಿರಂಗಗೊಂಡಿದೆ. ಮೂಡಿಗೆರೆ ಪಟ್ಟಣ ಪಂಚಾಯಿತಿಯಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು ಬಿಜೆಪಿ ಪಕ್ಷಕ್ಕೆ ತೀವ್ರ ಮುಖಭಂಗವನ್ನುಂಟುಮಾಡಿವೆ.

ಕೆ. ವೆಂಕಟೇಶ್ ಅವರು ಈ ಹಿಂದೆ ಅನೇಕ ಬಾರಿ ಮೂಡಿಗೆರೆ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿದ್ದು, ಇದೀಗ ಮತ್ತೊಮ್ಮೆ ಅಧ್ಯಕ್ಷರಾಗುವ ಮೂಲಕ ಪಟ್ಟಣ ಪಂಚಾಯಿತಿಯಲ್ಲಿ ತಮ್ಮ ಪ್ರಾಬಲ್ಯ ಸಾಧಿಸಿದ್ದಾರೆ.

ನೂತನ ಅಧ್ಯಕ್ಷ ಕೆ.ವೆಂಕಟೇಶ್ ಅವರನ್ನು ಶಾಸಕಿ ನಯನಾ ಮೋಟಮ್ಮ, ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ, ಕಾಂಗ್ರೇಸ್ ಜಿಲ್ಲಾಧ್ಯಕ್ಷ ಡಾ. ಅಂಶುಮಂತ್ ಸೇರಿದಂತೆ ಪಕ್ಷದ ಹಿರಿಯ ನಾಯಕರು, ಪದಾಧಿಕಾರಿಗಳು, ಕಾರ್ಯಕರ್ತರು, ಹಿತೈಷಿಗಳು ಅಭಿನಂದಿಸಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ