ಕನ್ನಡ ಸಾಹಿತ್ಯ ಪರಿಷತ್ತು ಬಣಕಲ್ ಹೋಬಳಿ ಘಟಕದ ವತಿಯಿಂದ ಭಾರತೀಬೈಲ್‍ನಲ್ಲಿ ಮನೆಯಂಗಳದಲ್ಲಿ ತಿಂಗಳ ಸಾಹಿತ್ಯ ಮತ್ತು ಸುಗ್ಗಿ ಕಾಲದಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮ ನಡೆಯಿತು.
ಲೋಕೇಶ್ ಬೆಟ್ಟಗೆರೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ದೀಪಕ್ ದೊಡ್ಡಯ್ಯ ಮಾತನಾಡಿ ಜಾನಪದ ಸಾಹಿತ್ಯದ ಬೇರು ಇದ್ದಂತೆ ಹಳ್ಳಿಯ ಜನರ ಜೀವನ ಜಗತ್ತಿಗೆ ಮಾದರಿ. ಬಸವಣ್ಣ .ಸಂತರು. ಶರಣರು ಕನ್ನಡ ಸಾಹಿತ್ಯ ಪರಂಪರೆಯನ್ನು ಶ್ರೀಮಂತ ಮಾಡಿತ್ತ. ವಚನ ಸಾಹಿತ್ಯ. ಚುಟುಕು ಸಾಹಿತ್ಯ ,ನವ್ಯ ಸಾಹಿತ್ಯದ ಬಗ್ಗೆ ತಿಳಿಸಿ ಕೊಟ್ಟರು ಎಂದರು.
ಜಿಲ್ಲಾ ಸಂಚಾಲಕರಾದ ಮಗ್ಗಲಮಕ್ಕಿ ಗಣೇಶ್ ಮಾತನಾಡಿ ದಿವಂಗತ ಮೋಹನ್ ಕುಮಾರ್ ಶೆಟ್ರು ಮಾಜಿ ಅಧ್ಯಕ್ಷರು ಬಣಕಲ್ ಕನ್ನಡ ಸಾಹಿತ್ಯ ಪರಿಷತ್ತು ಘಟಕದ ದೊಡ್ಡ ಶಕ್ತಿ ಆಗಿದ್ದರು ಎಂದು ಅವರ ಕೆಲಸದ ಬಗ್ಗೆ ನೆನಪು ಮಾಡಿದರು.
ಈ ಸಂದರ್ಭದಲ್ಲಿ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕøತರಾದ ನೌಶಿಬ- ಕೊಟ್ಟಿಗೆಹಾರ ಪ್ರೌಢಶಾಲೆ ಶಿಕ್ಷಕಿ ಮತ್ತು ಸಮಾಜ ಸೇವಾಕರಾದ ರಾಮಚಂದ್ರ ಇವರಿಗೆ ಕನ್ನಡ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಯುವ ಸಾಹಿತಿಗಳಾದ ಶಾಲಿನಿ ಜೀವನ್ ಕುಂದೂರು. ಲಕ್ಷ್ಮಣ್ ಹೊಸಳ್ಳಿ. ಮಿನಿ ಒಲಂಪಿಕ್ ಕ್ರೀಡಾಕೂಟದಲ್ಲಿ ಕಬ್ಬಡ್ಡಿ ಆಟದಲ್ಲಿ ಚಿನ್ನದ ಪದಕ ಗೆದ್ದ ಅಂಕಿತ ಮತ್ತು ಶರಣ್ಯ ಅವರಿಗೆ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕಸಾಪ ತಾಲೂಕು ಅಧ್ಯಕ್ಷರಾದ ಡಿ. ಕೆ.ಲಕ್ಷ್ಮಣ್ ಗೌಡ. ಬಕ್ಕಿ ಮಂಜುನಾಥ್. ಮಂಜುನಾಥ್ ರಾಥೋಡ್ ಬಿಜಾಪುರ. ನಾಟ್ಯ ರಂಜಿತ್, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಶಿವಪ್ರಸಾದ್. ಕೃಷ್ಣೇಗೌಡ ಹೆಚ್, ಪಿ. ರವಿ ಗೌಡ, ಹೊರಟ್ಟಿ ರಘು, ರಾಮಚಂದ್ರ. ಶಶಿಕಾಂತ್, ಶ್ರಿಜೀತ್, ದೀಲಿಪ್ ಕನ್ನಗೆರೆ. ಹೆಚ್. ಬಿ. ಶಶಿಧರ್, ಶ್ರೀಮತಿ ಸುಮ, ಲಕ್ಷ್ಮಣ್ ಹೊಸಳ್ಳಿ, ಶ್ರೀಮತಿ ಶಾಲಿನಿ ಜೀವನ್, ಸಂಗಮ್. ಪ್ರಜ್ವಲ್. ಮಹೇಶ್, ವಸಂತ್ ಹಾರ್ಗೋಡ್, ಭಕ್ತೇಶ್, ಚಂದ್ರು ಶಾಲಿಯಾನ ಉಪಸ್ಥಿತರಿದ್ದರು.


