ಚಿಕ್ಕಮಗಳೂರು ತಾಲ್ಲೂಕಿನ ಆಲ್ದೂರು ಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ್ದ ಶ್ರೀ ಕೆಂಚರಾಯ ಸ್ವಾಮಿ ದೇವಾಲಯದ ಪುನರ್ ಪ್ರತಿಷ್ಠಾಪನೆ ಮತ್ತು ಲೋಕಾರ್ಪಣ ಕಾರ್ಯ ಮಾರ್ಚ್ 7 ಮತ್ತು 8 ರಂದು ನಡೆಯಿತು.

ಶ್ರೀ ಕೆಂಚರಾಯ ಸೇವಾ ಸಮಿತಿ ವತಿಯಿಂದ ಸಮಸ್ತ ಗ್ರಾಮಸ್ಥರ ಸಹಕಾರದೊಂದಿಗೆ ನಿರ್ಮಾಣವಾಗಿರುವ ದೇವಸ್ಥಾನದಲ್ಲಿ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ದೇವಸ್ಥಾನ ನಿರ್ಮಾಣದಲ್ಲಿ ಊರಿನ ಗ್ರಾಮಸ್ಥರು, ಊರಿನಿಂದ ಕೊಟ್ಟ ಹೆಣ್ಣುಮಕ್ಕಳ ಕುಟುಂಬದವರು, ಸುತ್ತಮುತ್ತಲಿನ ಗ್ರಾಮಸ್ಥರು ಸಹಕಾರ ನೀಡಿರುತ್ತಾರೆ.

ಸಮಿತಿಯ ಗೌರವ ಅಧ್ಯಕ್ಷರಾಗಿ ಅಪ್ಪಣ್ಣಗೌಡ ಪಿ.ಇ, ಅಧ್ಯಕ್ಷರಾಗಿ ರಾಜೀವ ಪಿ.ಆರ್., ಕಾರ್ಯದರ್ಶಿ ವಿನುತ್ ಪಿ.ಸಿ., ಖಜಾಂಚಿ ಮಹೇಶ್ ಪಿ.ಎಂ, ಸದಸ್ಯರುಗಳಾಗಿ ಮನು ಪಿ.ಡಿ, ಸುಧೀರ್ ಪಿ.ಎಸ್, ನಾಗೇಶ್ ಪಿ.ಆರ್., ಸುಪ್ರಿತ್ ಪಿ.ಡಿ., ಮಹೇಶ್ ಪಿ.ಪಿ., ಪ್ರಭಾಕರ ಇವರುಗಳು ಕಾರ್ಯನಿರ್ವಹಿಸಿದ್ದರು.



