sringeri 1

 

 

ಶೃಂಗೇರಿ ಪಟ್ಟಣಕ್ಕೆ ನೂರು ಬೆಡ್ ಗಳ ಆಸ್ಪತ್ರೆ ಮರೀಚಿಕೆಯಾಗಿಯೇ ಉಳಿದಿದೆ. ಸರ್ಕಾರ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರೂ ಸಹ ಇದುವರೆಗೂ ಅದು ಕೈಗೂಡಿಲ್ಲ. ಇದನ್ನು ಖಂಡಿಸಿ ಸಾರ್ವಜನಿಕರು ವಿನೂತನವಾಗಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಶೃಂಗೇರಿಯ 100 ಬೆಡ್ ಆಸ್ಪತ್ರೆ ಕಾಣೆಯಾಗಿದೆ, ಆಸ್ಪತ್ರೆ ಹುಡುಕಿ ಕೊಟ್ಟವರಿಗೆ ಸರ್ಕಾರದಿಂದ ಸೂಕ್ತ ಬಹುಮಾನ ನೀಡಲಾಗುವುದು ಎಂದು  ಶೃಂಗೇರಿಯಲ್ಲಿ ಅಲ್ಲಲ್ಲೇ ಬ್ಯಾನರ್ ಹಾಕಿ ಸರ್ಕಾರದ ವಿರುದ್ಧ ಲೇವಡಿ ಮಾಡಲಾಗಿದೆ.

ಸರ್ಕಾರದ ವಿರುದ್ಧ ಶೃಂಗೇರಿ ತಾಲೂಕಿನ ಜನ ವ್ಯಂಗ್ಯ ಮಾಡಿದ್ದು,  2007 ರಿಂದ 3 ಬಜೆಟ್ ನಲ್ಲಿ ಘೋಷಣೆಯಾದ್ರು ಆಸ್ಪತ್ರೆ ಕಾಣೆಯಾಗಿದೆ, 27 ಕೋಟಿ ವೆಚ್ಚದ 100 ಬೆಡ್ ಆಸ್ಪತ್ರೆ ಈ ಬಜೆಟ್ ನಲ್ಲೂ ಮಾಯವಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶೃಂಗೇರಿ ಆಸ್ಪತ್ರೆ ಹೋರಾಟ ಸಮಿತಿಯಿಂದ ವಿಭಿನ್ನ ಪ್ರತಿಭಟನೆ, ಶೃಂಗೇರಿ ಆಸ್ಪತ್ರೆಗೆ ಪ್ರಸೂತಿ, ಮೂಳೆ ಹಾಗೂ ಮಕ್ಕಳ ತಜ್ಞರು ಬೇಕಾಗಿದ್ದಾರೆ.

ವೈದ್ಯರು ಬರಲು ಒಪ್ಪಿಕೊಂಡರೆ ಮಾತ್ರ ನೇಮಿಸುತ್ತಾರಂತೆ ಎಂದು ಬ್ಯಾನರ್ ನಲ್ಲಿ ಪ್ರಚಾರ ಮಾಡಲಾಗಿದೆ.

ಶೃಂಗೇರಿಗೆ ಬರುವ ಪ್ರವಾಸಿಗರೇ ನಿಧಾನವಾಗಿ ಎಚ್ಚರಿಕೆಯಿಂದ ವಾಹನ ಚಲಾಯಿಸಿ, ಶೃಂಗೇರಿಯಲ್ಲಿ ಭರವಸೆ ಶೂರರ ನೂರು ಬೆಡ್ ಆಸ್ಪತ್ರೆ ಇನ್ನೂ ಆಗಿಲ್ಲ. ಮೂಳೆ ಮುರಿದರೆ ಡಾಕ್ಟರ್ ಇಲ್ಲ, ಮಕ್ಕಳ ಡಾಕ್ಟರ್ ಇಲ್ಲವೇ ಇಲ್ಲ. ಡೆಲಿವರಿ ಡಾಕ್ಟರ್ ಕಾಣ್ತಾ ಇಲ್ಲ, ಜನಪ್ರತಿನಿಧಿಗಳು ಇದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ, ನಿಮ್ಮ ಬದುಕು ನಿಮ್ಮ ಕೈಯಲ್ಲಿ… ಎಂದೆಲ್ಲಾ ಬ್ಯಾನರ್ ಹಾಕಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಗಾಗಿ ಸರ್ಕಾರದ ವಿರುದ್ಧ ಶೃಂಗೇರಿ ಜನರ ಆಕ್ರೋಶ ಈಗ ಮುಗಿಲುಮುಟ್ಟಿದೆ. ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಜನರು ವಿಭಿನ್ನವಾದ ಪ್ರತಿಭಟನೆ ಹಾದಿ ಹಿಡಿದಿದ್ದಾರೆ.

ವರದಿ : ಮಧುಕರ್ ಕೊಪ್ಪ

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ