ಮಾಸ್ಟರ್ಸ್ ಇನ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ (MHO) ಕೋರ್ಸ್ ಪರೀಕ್ಷೆಯಲ್ಲಿ ಕಾಫಿನಾಡಿನ ವಿದ್ಯಾರ್ಥಿನಿ ಉನ್ನತ ಸಾಧನೆ ತೋರಿದ್ದಾರೆ. ರಾಜ್ಯಮಟ್ಟದಲ್ಲಿ 7ನೇ Rank ಗಳಿಸಿ ಸಾಧನೆ ಮಾಡಿದ್ದಾರೆ.
ಫಾದರ್ ಮುಲ್ಲರ್ಸ್ ಅಲೈಡ್ ಹೆಲ್ತ್ ಸೈನ್ಸ್ ಮಂಗಳೂರು, ರಾಜೀವ್ ಗಾಂಧಿ ವಿಶ್ವವಿದ್ಯಾಲಯದಿಂದ ನಡೆದ ಮಾಸ್ಟರ್ಸ್ ಇನ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ (MHO) ಕೋರ್ಸ್ ಪರೀಕ್ಷೆಯಲ್ಲಿ ರೀಶಲ್ ಶಾಲೆಟ್ ಡೇಸಾ ಇವರು ರಾಜ್ಯಕ್ಕೆ 7ನೇ ರ್ವಾಂಕ್ ಪಡೆದು ಮಹತ್ವದ ಸಾಧನೆಯನ್ನು ದಾಖಲಿಸಿದ್ದಾರೆ.
ರೀಶಲ್ ಮೂಡಿಗೆರೆ ತಾಲೂಕು ಬಾಳೂರು ಹೋಬಳಿ ನಿಡುವಾಳೆಯ ರೋನಾಲ್ಡ್ ಡೇಸಾ ಮತ್ತು ಸಿಲ್ವಿ ಜೆಸಿಂತ ಇವರ ಪುತ್ರಿ. ಇವರ ಪರಿಶ್ರಮ ಮತ್ತು ಸಾಧನೆಗೆ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.



