ಮೂಡಿಗೆರೆ, ಬಣಕಲ್ ಮುಂತಾದ ಕಡೆಗಳಲ್ಲಿ ಹೆದ್ದಾರಿಗಳಲ್ಲಿ, ಮುಖ್ಯ ರಸ್ತೆ ಯಲ್ಲಿ ಅಲ್ಲಲ್ಲಿ ವೇಗದ ನಿಯಂತ್ರಣ ಕ್ಕಾಗಿ ಹಂಪ್ ಗಳು ಅಳವಡಿ ಸಲಾಗಿದೆ ಆದರೆ ಹಂಪ್ ಗೆ ಹಾಕಿರುವ ಬಣ್ಣ ಮಾಸಿದ್ದು ವಾಹನ ಸವಾರರಿಗೆ ಹಂಪ್ ಎಲ್ಲಿ ಎಂದು ಗೊತ್ತಾಗದೆ ತೊಂದರೆಯಾಗುತ್ತಿದೆ.
ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರನ್ನು, ಸಣ್ಣ ಮಕ್ಕಳನ್ನು ಕೂರಿಸಿಕೊಂಡು ಬರುವ ಸವಾರರಿಗೆ ಹಂಪ್ ಇರುವ ವಿಚಾರ ಗಮನಕ್ಕೆ ಬಾರದೆ ಹಿಂಬದಿ ಕುಳಿತವರು ಗಾಡಿಯಿಂದ ಬೀಳುವ ಸಾಧ್ಯತೆ ಇದೆ. ಕೆಲವೊಮ್ಮೆ ದಿಢೀರನೆ ಬ್ರೇಕ್ ಹಾಕಿದಾಗ ಅವಘಡ ಸಂಭವಿಸುವ ಸಾಧ್ಯತೆಯು ಇದೆ.

ಆದ್ದರಿಂದ ಎಲ್ಲಾ ಕಡೆ ಹಂಪ್ ಗೆ ಬಣ್ಣ ಬಳಿಯಬೇಕು ಹಾಗೂ ರಿಪ್ಲ ಕ್ಟರ್ ಗಳನ್ನು ಅಳವಡಿಸಬೇಕು ಸಾಮಾಜಿಕ ಕಾರ್ಯಕರ್ತ ಸಾಜೀದ್ ಬಣಕಲ್ ಆಗ್ರಹಿಸಿದ್ದಾರೆ.


