January 15, 2026

 

 

ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ ಐವರು ಬಿಜೆಪಿ ಮುಖಂಡರಿಗೆ ಬಿಜೆಪಿ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಿದೆ. ಎಸ್‌ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಬಿ.ಪಿ ಹರೀಶ್, ರೇಣುಕಾಚಾರ್ಯಗೆ ಶೋಕಾಸ್ ನೋಟಿಸ್ ನೀಡಿದೆ. ಪದೇ ಪದೇ ಪಕ್ಷದ ಶಿಸ್ತು ಉಲ್ಲಂಘನೆ ಹಿನ್ನೆಲೆಯಲ್ಲಿ ಸ್ಪಷ್ಟೀಕರಣ ಕೇಳಿ ಶೋಕಾಸ್ ನೊಟೀಸ್ ಜಾರಿ ಮಾಡಿ 72 ಗಂಟೆಯೊಳಗೆ ಉತ್ತರಿಸುವಂತೆ ಸೂಚನೆ ನೀಡಿದೆ.

ಯಾರ್ಯಾರಿಗೆ ನೋಟಿಸ್‌?
ಎಸ್ ಟಿ ಸೋಮಶೇಖರ್/ಶಿವರಾಂ ಹೆಬ್ಬಾರ್: ಪದೇ ಪದೇ ಕಾಂಗ್ರೆಸ್ ನಾಯಕತ ಜತೆ, ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ಗುರುತಿಸಿಕೊಳ್ಳುತ್ತಿರುವುದು. ಕಾಂಗ್ರೆಸ್ ನಾಯಕರನ್ನು ಹೊಗಳಿ ಬಿಜೆಪಿ ನಾಯಕರ ಟೀಕೆ. ಬಿಜೆಪಿ ಕಾರ್ಯಕ್ರಮಗಳಿಗೆ ಸರಣಿ ಗೈರು, ಪಕ್ಷದ ಸೂಚನೆಗಳ ಉಲ್ಲಂಘನೆ

ರೇಣುಕಾಚಾರ್ಯ:
ಬಹಿರಂಗ ಹೇಳಿಕೆಗಳನ್ನು ಕೊಟ್ಟಿರುವುದು. ಯತ್ನಾಳ್ ಟೀಮ್ ವಿರುದ್ಧ ಪಕ್ಷದ ವೇದಿಕೆ ಬಿಟ್ಟು ಬಹಿರಂಗವಾಗಿ ಚರ್ಚೆ. ಪಕ್ಷದಲ್ಲಿ ಗುಂಪುಗಾರಿಕೆ ನಡೆಸುತ್ತಿರುವುದು. ವಿಜಯೇಂದ್ರ, ಯಡಿಯೂರಪ್ಪ ಪರ ಪ್ರತ್ಯೇಕ ಸಭೆಗಳ ಆಯೋಜನೆ. ಲಿಂಗಾಯತ ಮುಖಂಡರ ಸಭೆಗಳ ಆಯೋಜನೆ ಮಾಡಿ ಪಕ್ಷದಲ್ಲಿ ಗೊಂದಲ ಮೂಡಿಸುತ್ತಿರುವುದು.

ಕಟ್ಟಾ ಸುಬ್ರಹ್ಮಣ್ಯ ನಾಯ್ಡು
ತಮ್ಮ ಮನೆಯಲ್ಲೇ ಯತ್ನಾಳ್ ತಂಡ್ ವಿರುದ್ಧ ಪ್ರತ್ಯೇಕ ಸಭೆಗಳ ಆಯೋಜನೆ. ಬಹಿರಂಗ ಹೇಳಿಕೆಗಳನ್ನು ಪಕ್ಷದ ಸೂಚನೆ, ಶಿಸ್ತು ಮೀರಿ ಕೊಟ್ಟಿರುವುದು.

ಬಿ ಪಿ ಹರೀಶ್
ಪಕ್ಷದ ನಾಯಕತ್ವ ವಿರುದ್ಧ ಬಹಿರಂಗ ಹೇಳಿಕೆ. ಯತ್ನಾಳ್ ಜತೆ ಸೇರಿಕೊಂಡು ಪ್ರತ್ಯೇಕ ಸಭೆಗಳಲ್ಲಿ ಭಾಗಿ. ಪಕ್ಷದ ಚೌಕಟ್ಟು ಮೀರಿ ಬಹಿರಂಗ ಹೇಳಿಕೆಗಳನ್ನು ನೀಡಿರುವುದು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ