janapada1

 

 

ಆಧುನಿಕತೆಯ ಭರಾಟೆಯಲ್ಲಿ ನಮ್ಮ ಬದುಕಿನ ಮೂಲ ಸೊಗಡನ್ನು ಮರೆಯುತ್ತಿದ್ದೇವೆ ಎಂದು ಹಿರಿಯ ಜಾನಪದ ತಜ್ಞ ಮತ್ತು ಉಪನ್ಯಾಸಕ ಬಿ. ತಿಪ್ಪೆರುದ್ರಪ್ಪ ಅವರು ಅಭಿಪ್ರಾಯಸಿದರು.

ಅವರು ಶನಿವಾರ ಸಂಜೆ ಮೂಡಿಗೆರೆ ತಾಲೂಕು ಪಂಚಾಯಿತಿ ದಿನದ ಸಭಾಂಗಣದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಮೂಡಿಗೆರೆ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡುತ್ತಿದ್ದರು.

ನಮ್ಮ ಜಾನಪದರು ಈ ನೆಲವನ್ನು, ಪ್ರಕೃತಿಯನ್ನು, ಬದುಕನ್ನು ಆಸ್ವಾದಿಸುತ್ತ ಆರಾಧಿಸುತ್ತಾ ಸಂರಕ್ಷಿಸುತ್ತ ಜೀವನ ಸಾಗಿಸಿದ್ದರು. ಮಣ್ಣಿಗೂ ಜನಪದಕ್ಕೂ ಅವಿನಾಭಾವ ಸಂಬಂಧವಿತ್ತು. ನಮ್ಮ ಜನಪದರು ಮಣ್ಣನ್ನು ಪ್ರೀತಿಸುತ್ತಿದ್ದರು, ಕೃಷಿಯನ್ನು ಆರಾಧಿಸುತ್ತಿದ್ದರು, ಪ್ರಕೃತಿಯಲ್ಲಿ ದೇವರನ್ನು ಕಾಣುತ್ತಿದ್ದರು. ಆದರೆ ಇಂದು ನಾವು ನಮ್ಮ ಜನಪದ ಬದುಕಿನ ಸೊಗಡನ್ನು ಮರೆಯುತ್ತಿದ್ದೇವೆ, ಆಧುನಿಕತೆಯ ಭರಾಟೆಯಲ್ಲಿ ನಾವು ನೈಜವಾದ ನಮ್ಮ ದೇಶೀಯ ಸಂಸ್ಕೃತಿಯಿಂದ ದೂರವಾಗುತ್ತಿದ್ದೇವೆ.

ಜಾನಪದ ಸಂಸ್ಕೃತಿಗೆ ಮತ್ತೆ ಮರಳಲು ಬೇಕಾದ ತಯಾರಿಯನ್ನು ನಾವು ಮಾಡಬೇಕಾಗಿದೆ. ಸಂಘ-ಸಂಸ್ಥೆಗಳು, ಜಾನಪದ ಪರಿಷತ್ತುಗಳು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮತ್ತು ಯುವಜನರಿಗೆ ಜಾಗೃತಿ ಮೂಡಿಸಬೇಕಾಗಿದೆ, ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲ ಮುಂದಡಿ ಇಡಬೇಕಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವೆ ಶ್ರೀಮತಿ ಮೊಟ್ಟಮ್ಮ; ನಮ್ಮ ಹಳ್ಳಿಗಾಡಿನಲ್ಲಿ ಹಿಂದಿನಿಂದಲೂ ಕೃಷಿ ಕಾರ್ಯಗಳಲ್ಲಿ, ಮನೆಯ ಕೆಲಸಗಳಲ್ಲಿ ಜನಪದ ಹಾಡುಗಳನ್ನು ಹಾಡುತ್ತಾ ಆಯಾಸವನ್ನು ಮರೆಯುತ್ತಿದ್ದರು ಮತ್ತು ಸಮೂಹ ಬದುಕಿನ ಸೊಗಡನ್ನು ಆಸ್ವಾದಿಸುತ್ತಿದ್ದರು ಇಂದು ನಮ್ಮ ಯುವಜನರು ನಮ್ಮ ಸಂಸ್ಕೃತಿಯ ಬಗ್ಗೆ ಅಸಡ್ಡೆ ತೋರುತ್ತಿದ್ದು ಮರಳಿ ಜಾನಪದ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು ಎಂದರು.

ಮಾಜಿ ಶಾಸಕ ಎಂ ಪಿ ಕುಮಾರಸ್ವಾಮಿ ಅವರು ಮಾತನಾಡಿ; ನಮ್ಮ ಜನಪದ ಹಾಡುಗಳಲ್ಲಿ ಜೀವನ ಮೌಲ್ಯಗಳು ಅಡಗಿವೆ, ಅಂದಿನ ಜನಪದರು ಯಾವುದೇ ಅಕ್ಷರ ಅಭ್ಯಾಸ ಇಲ್ಲದೆ ಬಾಯಿಂದ ಬಾಯಿಗೆ ಜಾನಪದ ಸಾಹಿತ್ಯವನ್ನು ಪಸರಿಸಿಕೊಂಡು ಬಂದಿದ್ದಾರೆ. ಅವುಗಳನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಜಾನಪದ ಪರಿಷತ್ ವತಿಯಿಂದ ನಾಡಿನದ್ಯಂತ ಜನಪದ ಕಲೆ ಸಂಸ್ಕೃತಿಗಳನ್ನು ಉಳಿಸುವ ಪ್ರೋತ್ಸಾಹಿಸುವ  ಕಾರ್ಯಕ್ರಮಗಳು ಸಮ್ಮೇಳನಗಳನ್ನು ಹಮ್ಮಿಕೊಳ್ಳುವ ಮೂಲಕ ಕಾರ್ಯರೂಪಕ್ಕೆ ತರಲಾಗುತ್ತಿದೆ ಎಂದರು.

ಕರ್ನಾಟಕ ಜಾನಪದ ಪರಿಷತ್ ಮೂಡಿಗೆರೆ ತಾಲೂಕು ಘಟಕದ ಅಧ್ಯಕ್ಷರಾಗಿ ಕುನ್ನಹಳ್ಳಿ ರವಿ ಅವರು ಹಿಂದಿನ ಅಧ್ಯಕ್ಷ ಬಕ್ಕಿ ರವಿಯವರಿಂದ ಅಧಿಕಾರ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮೂಡಿಗೆರೆ ಬೆಳಗಾರರ ಸಂಘದ ಅಧ್ಯಕ್ಷ ಬಿ ಆರ್ ಬಾಲಕೃಷ್ಣ, ಕಾರ್ಯದರ್ಶಿ ಮನೋಹರ್, ಮೂಡಿಗೆರೆ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಸಮಿತಿಯ ಅಧ್ಯಕ್ಷ ಬಿಎಸ್ ಜಯರಾಮ್,  ಪ.ಪಂ. ಉಪಾಧ್ಯಕ್ಷ ಹೊಸಕೆರೆ ರಮೇಶ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಡಿ.ಕೆ ಲಕ್ಷ್ಮಣಗೌಡ, ಜಾನಪದ ಪರಿಷತ್ ಮೂಡಿಗೆರೆ ತಾಲ್ಲೂಕು ಸಮಿತಿ ಗೌರವ ಅಧ್ಯಕ್ಷ ಹಾಲೂರು ಸುಬ್ರಮಣ್ಯ, ಉಪಾಧ್ಯಕ್ಷ ಕೆ.ಎಸ್. ಚಂದ್ರೇಗೌಡ ಕುಂಬರಡಿ, ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ನವೀನ್, ಛಲವಾದಿ ಮಹಾಸಭಾ ಅಧ್ಯಕ್ಷ ಮಂಜುನಾಥ್ ಬೆಟ್ಟಗೆರೆ, ವಕೀಲರಾದ ಚಂದ್ರು ಹಳೇಕೆರೆ, ಹೆಸಗಲ್ ಗಿರೀಶ್, ದಾಕ್ಷಾಯಿಣಿ  ಸೇರಿದಂತೆ ಜಾನಪದ ಪರಿಷತ್ ಪದಾಧಿಕಾರಿಗಳು ಉಪಸ್ಥಿತರಿದ್ದರು

ಕರ್ನಾಟಕ ಸಾಹಿತ್ಯ ಸಂಭ್ರಮ ರಾಜ್ಯಾಧ್ಯಕ್ಷ ಎಂ.ಎಸ್. ನಾಗರಾಜು ಕಾರ್ಯಕ್ರಮ ನಿರೂಪಿಸಿದರು.

ಜಾನಪದ ಕಲಾ ತಂಡಗಳಿಂದ ಜಾನಪದ ನೃತ್ಯಗಳನ್ನು ಏರ್ಡಿಸಲಾಗಿತ್ತು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ