ಜಗತ್ತಿನ ಎಲ್ಲ ವರ್ಗದವರನ್ನೂ ಸಮಾನತೆಯಲ್ಲಿ ನಡೆಸಿಕೊಂಡ ಬಸವಣ್ಣನವರು ಒಬ್ಬ ವ್ಯಕ್ತಿಯಲ್ಲ, ಅವರೊಂದು ಶಕ್ತಿ, ಮಹಾನ್ ತತ್ವಜಾನಿ. ಅವರ ನಡೆಯೇ ಒಂದು ಪ್ರಯೋಗಶಾಲೆ. ಸಮಾಜಕ್ಕೆ ಸಿದ್ದಾಂತ ಹೇಳಿಕೊಟ್ಟಿದ್ದ ಬಸವಣ್ಣ ಜಗತ್ತಿನ ಅದ್ಬುತ ಸಾಧಕ ಎಂದು ಪುಷ್ಪಗಿರಿ ಸಾಂಸ್ಕøತಿಕ ಪ್ರತಿಷ್ಟಾನದ ಸಂಸ್ಥಾಪದ ಡಾ.ಮೋಹನ್ ರಾಜಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಪುಷ್ಪಗಿರಿ ಪ್ರತಿಷ್ಟಾನದ ವತಿಯಿಂದ ಬುಧವಾರ ಗೋಣೀಬೀಡಿನಲ್ಲಿ ನಡೆದ ವಿಶ್ವಗುರು ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ ದೇಶದ ಪ್ರತಿಯೊಬ್ಬರು ಬಸವಣ್ಣನವರ ಚಿಂತನೆ, ವಿಚಾರೆಧಾರೆ, ಮತ್ತು ಸಂದೇಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಎಲ್ಲಾ ಧರ್ಮೀಯರನ್ನು ನನ್ನವರೆಂದು ಪ್ರತಿವಾದಿಸಿದ್ದ ಅವರು ಇಂದಿನ ಆಧುನಿಕ ಯುಗಕ್ಕೆ ಅವರ ಜೀವಿತಕಾಲದಲ್ಲಿ ಮಾರ್ಗದರ್ಶನ ನೀಡಿದ್ದರು. ಶಾಂತಿ, ಪ್ರೀತಿ ಸೌಹಾರ್ಧತೆ, ಸಹಬಾಳ್ವೆಯ ಜೀವನ ನಡೆಸುವಂತೆ ಅವರು ತಿಳಿಸಿದ್ದರು. ಅವರು ನುಡಿದಂತೆ ನಡೆದರೆ ಜಗತ್ತು ಪ್ರಶಾಂತವಾಗಿರುತ್ತದೆ. ಅವರಂತಹ ಮಹಾನ್ ಸಾಧಕರನ್ನು ಇತಿಹಾಸದಲ್ಲಿ ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಪ್ರತಿಷ್ಟಾನದ ಅಧ್ಯಕ್ಷೆ ಉಮಾ ಮೋಹನ್ ರಾಜಣ್ಣ ಮಾತನಾಡಿ ಬಸವಣ್ಣನವರು ವಚನಗಳ ಮೂಲಕ ನೀಡಿರುವ ಸಮಾಜ ಸುಧಾರಣಾ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಾವು ಭಸ್ಮಧಾರಣೆಯಂತಹ ಬಹಿರಂಗ ಪ್ರಕ್ರಿಯೆಗಿಂತಲೂ ಬಸವಧಾರಣೆಯಂತಹ ಅಂತರಂಗ ಪ್ರಕ್ರಿಯೆಗೆ ಒಳಗಾಗಬೇಕು ಎಂದು ತಿಳಿಸಿದರು.
ಈ ವೇಳೆ ಪ್ರತಿಷ್ಟಾನ ಟ್ರಸ್ಟಿಗಳಾದ ಸಿ.ಸಿ.ರಾಜಣ್ಣ, ಭಾಂಧವ್ಯ, ಡಿಂಪಲ್, ಪ್ರಸನ್ನ, ಗಂಗಾಧರ್ ಮತ್ತಿತರರಿದ್ದರು.



