ಮೂಡಿಗೆರೆ ತಾಲ್ಲೂಕಿನ ಗುತ್ತಿಹಳ್ಳಿ ಗ್ರಾಮದ (ಪ್ರಸ್ತುತ ಮೂಡಿಗೆರೆ ಹ್ಯಾಂಡ್‌ಪೋಸ್ಟ್ ವಾಸಿ) ಸುಬ್ರಾಯಗೌಡ ಎಚ್.ಜೆ. ಮತ್ತು ಸಾವಿತ್ರಿ ಎಂ. ಅವರ ಪುತ್ರ ಶ್ರೀಕಾಂತ್ ಎಚ್.ಎಸ್. ಅವರು ಹಣ್ಣು ವಿಜ್ಞಾನದಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ.
ಡಾ. ಮನೀಷ್ ಶ್ರೀವತ್ಸವ್, ಪ್ರಧಾನ ವಿಜ್ಞಾನಿ (ಹಣ್ಣು ವಿಜ್ಞಾನ), ICAR-IARI, ನವದೆಹಲಿ, ಅವರ ಮಾರ್ಗದರ್ಶನದಲ್ಲಿ “ಅಮ್ರಪಾಲಿ ಮಾವು ತಾಯಿಯಾರ್ಧ ಸಹೋದರ ಸಂತತಿಯಗಳ ರೂಪಲಕ್ಷಣ, ಜೈವಿಕ ಮತ್ತು ಆಣ್ವಿಕ ಲಕ್ಷಣಗಳ ವಿಶ್ಲೇಷಣೆ ಮೂಲಕ ಉತ್ತಮ ಜನ್ಯವಂತರ ಗುರುತಿಸುವಿಕೆ“ ““Morphological, Biochemical and Molecular Characterization of Maternal Half-Sib Progenies of Amrapali for Identification of Superior Genotypes” ಎಂಬ ಶೀರ್ಷಿಕೆಯ ಮೇಲೆ ಅವರು ಸಂಶೋಧನೆ ನಡೆಸಿದ್ದರು.

ಈ ಸಂಶೋಧನೆಗೆ ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (IARI), ಭಾರತೀಯ ಕೃಷಿ ಸಂಶೋಧನಾ ಪರಿಷತ್ (ICAR) 63ನೇ ಘಟಿಕೋತ್ಸವದಲ್ಲಿ ಪಿಎಚ್.ಡಿ ಪದವಿ ಪ್ರದಾನ ಮಾಡಲಾಯಿತು. ಈ ಪದವಿಯನ್ನು ಕೇಂದ್ರ ಕೃಷಿ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರಿಂದ ಪ್ರದಾನಿಸಲಾಯಿತು.
ಶ್ರೀಕಾಂತ್ ಎಚ್.ಎಸ್. ಪ್ರಸ್ತುತ ಬೆಂಗಳೂರು ಜಿ.ಕೆ.ವಿ.ಕೆ. ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ತಮ್ಮ ತೋಟಗಾರಿಕಾ ಪದವಿಯನ್ನು ಮೂಡಿಗೆರೆ ತೋಟಗಾರಿಕಾ ಮಹಾವಿದ್ಯಾಲಯದಲ್ಲಿ ಮತ್ತು ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಪಡೆದಿರುತ್ತಾರೆ.
ಶ್ರೀಕಾಂತ್ ಅವರ ಸಾಧನೆಗೆ ಕುಟುಂಬ ಸದಸ್ಯರು, ಬಂಧುಗಳು ಮತ್ತು ಸ್ನೇಹಿತರು ಅಭಿನಂದನೆ ಸಲ್ಲಿಸಿದ್ದಾರೆ.



