ಬೌದ್ಧ ವಿಧಿವಿಧಾನದಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಜೋಡಿ ಗಳ ಬದುಕು ಹಸನಾಗಲೀ. ದಾಂಪತ್ಯ ಎರಡು ಮನಸ್ಸನ್ನು ಪರಸ್ಪರ ಬೆಸೆಯುವ ಕೊಂಡಿ. ಅನೋನ್ಯತೆ, ಸಹ ಬಾಳ್ವೆ ದಾರಿಯಲ್ಲಿ ನವಜೋಡಿಗಳು ಹೆಜ್ಜೆಯಿಡಬೇಕು ಎಂದು ನಲಂದ ಬುದ್ಧ ವಿಹಾರದ ಶ್ರೀ ಭಂತೇ ಬೋ ಧಿರತ್ನ ಸ್ವಾಮೀಜಿ ಹೇಳಿದರು.
ಚಿಕ್ಕಮಗಳೂರು ನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಗುರುವಾರ ಕರ್ನಾಟಕ ರಾಜ್ಯ ದಲಿತ ಸಂಘಟನಾ ಸಮಿತಿ ಅಂಬೇಡ್ಕರ್ ಧ್ವನಿ ವತಿಯಿಂದ 135ನೇ ಅಂಬೇಡ್ಕರ್ ಜಯಂತಿ ಪ್ರಯುಕ್ತ ಆಯೋಜಿಸಿದ್ಧ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನವಜೋಡಿಗಳಿಗೆ ಆರ್ಶೀವದಿಸಿ ಅವರು ಮಾತನಾಡಿದರು.
ಬೌದ್ಧ ಧರ್ಮದ ಅನುಸಾರ ಸುಮಾರು 10 ಜೋಡಿಗಳು ಸರಳ, ಸುಂದರ ಹಾಗೂ ಬೌದ್ಧ ಸಂಪ್ರದಾ ಯದಂತೆ ಹೊಸಜೀವನಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚಿನ ಆಡಂಬರದ ಡಿಜೆ, ಮಂಗಳವಾದ್ಯ ಹೊರತಾಗಿ ಅರ್ಥ ಗರ್ಭೀತವಾಗಿ ಸರಳ, ಸುಂದರ ಹಾಗೂ ಬೌದ್ಧ ಸಂಪ್ರದಾಯದಂತೆ ಕಾಲಿಟ್ಟಿರುವ ಜೋಡಿಗಳು ಮುಂದಿನ ಬದುಕನ್ನು ಬುದ್ಧನ ಹಾದಿಯಲ್ಲಿ ಸಾಗುವುದು ರೂಢಿಸಿಕೊಳ್ಳಬೇಕು ಎಂದರು.
ಅಂಬೇಡ್ಕರ್‍ರಂತೆ ಸರಳ ಜೀವನ, ಸಂಸ್ಕಾರಯುತ ಬದುಕಿನ ಆಶಯದಂತೆ ನವಜೋಡಿಗಳು ಹೆಜ್ಜೆ ಯಿಟ್ಟು ಸಮಾಜಕ್ಕೆ ಮಾದರಿಯಾಗಿದ್ದಾರೆ. ವಿಶೇಷವಾಗಿ ಅಂಬೇಡ್ಕರ್ ಜಯಂತಿಯಲ್ಲಿ ಸಾಮೂಹಿಕ ವಿವಾ ಹ ಕಾರ್ಯಕ್ರಮ ಸಮಾಜಕ್ಕೆ ಸ್ಪೂರ್ತಿ ತಂದಿದೆ. ಈ ಕಾರ್ಯಕ್ರಮ ಆಯೋಜಿಸಿರುವ ದಸಂಸ ಸಂಘಟನೆ ಮುಂದೆ ಇನ್ನಷ್ಟು ಸಮಾಜಮುಖಿ ಕಾರ್ಯ ಮಾಡಲಿ ಎಂದು ಆಶಿಸಿದರು.
ದಸಂಸ ರಾಜ್ಯ ಕಾರ್ಯಾಧ್ಯಕ್ಷ ಜೆ.ಆರ್.ರಾಜಾಶಂಕರ್ ಮಾತನಾಡಿ ಸಂಘಟನೇ ರಾಜ್ಯ ಸಮಿತಿ ನೇತೃ ತೃತ್ವದಲ್ಲಿ ಸಾಮೂಹಿಕ ವಿವಾಹ ನಡೆಸಲು ಸರ್ವರ ಒಪ್ಪಿಗೆ ಮೇರೆಗೆ ತೀರ್ಮಾನಿಸಿದ್ದು ಕಳೆದ ಒಂದು ತಿಂಗ ಳಿನಿಂದ ಅರ್ಜಿಗೆ ಅವಕಾಶ ಕಲ್ಪಿಸಿದ್ದು ಅನೇಕ ಅರ್ಜಿಗಳ ಬಳಿಕ ಅಂತಿಮವಾಗಿ 10 ಜೋಡಿಗಳನ್ನು ಆಯ್ಕೆ ಮಾಡಿ ಸಾಮೂಹಿಕ ವಿವಾಹ ಪೂರೈಸಲಾಗಿದೆ ಎಂದರು.
ಅಂಭೇಡ್ಕರ್ ಕನಸಿನಂತೆ ಜಾತಿ ನಿರ್ಮೂಲನೆ, ಅಂತರ್ಜಾತಿ ವಿವಾಹ ಪ್ರೋತ್ಸಾಹ ಹಾಗೂ ಬೌದ್ಧ ಸಂ ಪ್ರದಾಯದಂತೆ ರಾಜ್ಯದಲ್ಲೇ ಪ್ರಥಮ ಬಾರಿಗೆ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ವಿವಾಹ ಕಾರ್ಯ ಕ್ರಮಕ್ಕೆ ಯಾವುದೇ ವಿರೋಧವಿಲ್ಲದೇ, ಸಕುಟುಂಬದ ಒಪ್ಪಿಗೆ ಮೇರೆಗೆ ಕಾರ್ಯಕ್ರಮ ಯಶಸ್ವಿಗೊಳಿಸಲಾಗಿ ದೆ ಎಂದು ತಿಳಿಸಿದರು.
ದಸಂಸ ರಾಜ್ಯಾಧ್ಯಕ್ಷೆ ಎಲ್.ಸಿ.ವಸಂತ್‍ಕುಮಾರ್ ಮಾತನಾಡಿ ಅತಿಯಾದ ಖರ್ಚಿಲ್ಲದೇ ಕುಟುಂಬಕ್ಕೂ ಹೊರೆಯಾಗದೇ ಉಚಿತ ಸಾಮೂಹಿಕ ವಿವಾಹ ನೆರವೇರಿಸಲಾಗಿದೆ. ಒಟ್ಟು 10 ಜೋಡಿಗಳು ಬೌದ್ಧ ಸಂಪ್ರ ದಾಯದಂತೆ ಸುಖಮಯ ಜೀವನಕ್ಕೆ ಕಾಲಿರಿಸಿದ್ದು, ಹತ್ತು ಜೋಡಿಗಳ ಪೈಕಿ ಒಂದು ವಿಕಲಚೇತನ ಹಾಗೂ ಅಂತರ್ಜಾತಿ ಜೋಡಿಗಳಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದಸಂಸ ಜಿಲ್ಲಾಧ್ಯಕ್ಷ ಸುಂದ್ರೇಶ್ ಹೊಯ್ಸಳಲು , ಉಸ್ತುವಾರಿ ಅಧ್ಯಕ್ಷೆ ಗುಲಾಬಿ, ಮಹಿ ಳಾ ಘಟಕದ ಜಿಲ್ಲಾಧ್ಯಕ್ಷೆ ಹೇಮಾವತಿ, ಮಾಜಿ ಶಾಸಕ ಬಿ.ಬಿ.ಲಿಂಗಯ್ಯ, ಮಲೆನಾಡು ಕರಾವಳಿ ಒಕ್ಕೂಟದ ಸಂಚಾಲಕ ಅನಿಲ್ ಹೊಸಕೊಪ್ಪ, ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ, ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎ.ಎನ್.ಶಾಂತಮೂರ್ತಿ, ಮುಖಂಡರುಗಳಾದ ಜಿತೇಂದ್ರ ಬಾಬು, ಆನಂದ್,ಆರ್. ಮೋಹನ್‍ಕುಮಾರ್, ಗಿರೀಶ್, ಹೇಮಾವತಿ ಮತ್ತಿತರರಿದ್ದರು.



