5Mudigere2A

 

 

ಎಸ್ಸೀ ಜನಾಂಗದವರು ಜಾತಿ ಗಣತಿ ಸಂದರ್ಭದಲ್ಲಿ ಉಪ ಜಾತಿ ಕಾಲಂನಲ್ಲಿ ಹೊಲಯ ಎಂದು ನಮೂದಿಸಬೇಕೆಂದು ಹೊಲಯ ಬ್ರಿಗೇಡ್‍ನ ಸದಸ್ಯ ರಾಘವೇಂದ್ರ ಚಿನ್ನಗ ಮಾಡಿದರು.

ಅವರು ಸೋಮವಾರ ಮೂಡಿಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೊಲಯ ಎಂಬುದು ಅಸಂವಿಧಾನಕ ಪದವಲ್ಲ. ಹೊಲಯ ಎಂದರೆ ಹೊಲದ ಒಡೆಯ ಎಂದರ್ಥ. ಹಾಗಾಗಿ ಈ ಪದ ನಮೂದಿಸಲು ಸಂಕೋಚ, ಮುಜುಗರಕ್ಕೀಡಾಗಬಾರದು. ಉಪ ಜಾತಿ ಕಾಲಂನಲ್ಲಿ ಹೊಲಯ ಎಂದು ನಮೂದಿಸದೇ ಹೋದರೆ ನಮ್ಮ ಜನಸಂಖ್ಯೆ ಎಣಿಕೆಯಲ್ಲಿ ಕ್ಷೀಣಿಸುತ್ತದೆ. ಸರಕಾರದಿಂದ ಸಿಗುವ ಮೀಸಲಾತಿಯಿಂದ ವಂಚಿತರಾಗಬೇಕಾಗುತ್ತದೆ. ಹಾಗಾಗಿ ಇಂತಹ ಎಡವಟ್ಟಿಗೆ ಅವಕಾಶ ನೀಡಬಾರದೆಂದು ಮನವಿ ಮಾಡಿದರು.

ಹೊಲಯ ಬ್ರಿಗೇಡ್‍ನ ಸಂಯೋಜಕ ಹೊನ್ನೇಶ್ ಬೆಟ್ಟಗೆರೆ ಮಾತನಾಡಿ, ಮಲೆನಾಡಿನಲ್ಲಿ ಹೆಚ್ಚಾಗಿ ಹೊಲಯ ಸಮುದಾಯದವರೆ ಹೆಚ್ಚಾಗಿದ್ದರಿಂದ ಜಾತಿ ಗಣತಿ ಸಂದರ್ಭದಲ್ಲಿ ಉಪ ಜಾತಿ ನಮೂದಿಸಲು ಗೊಂದಲ ಉಂಟಾಗುತ್ತಿದೆ. ಹಾಗಾಗಿ ಹೊಲಯ ಬ್ರಿಗೇಡ್‍ನಿಂದ ಮೂಡಿಗೆರೆ ತಾಲ್ಲೂಕಿನಾದ್ಯಂತ ಎಸ್ಸೀ ಸಮುದಾಯದ ಮನೆಗಳಿಗೆ ತೆರಳಿ ಕರಪತ್ರ ನೀಡುವ ಮೂಲಕ ಹೊಲಯ ಎಂದು ನಮೂದಿಸಲು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ