gdmo

 

 

ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿದ ಭಾರತೀಯ ಸೇನೆ, ಪಾಕಿಸ್ತಾನಕ್ಕೆ ನುಗ್ಗಿ 8 ವಾಯುನೆಲೆಗಳನ್ನು ಧ್ವಂಸಗೊಳಿಸಿದೆ..

ಈ ಕುರಿತು ಭಾನುವಾರ ಡಿಜಿಎಂಒ (DGMO) ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಸಾಕ್ಷಿ ಸಮೇತ ಮಾಹಿತಿ ನೀಡಿದ ವಾಯು ಪಡೆ ಮುಖ್ಯಸ್ಥ ಎಕೆ ಭಾರ್ತಿ, ಪಾಕಿಸ್ತಾನದ ರಫೀಕಿ, ಮುರಿದ್, ಚಕ್ಲಾಲಾ, ರಹೀಂ ಯಾರ್ ಖಾನ್, ಸರ್ಗೋಧಾ ಸೇರಿದಂತೆ 8 ಪ್ರಮುಖ ವಾಯುನೆಲೆಗಳ ಮೇಲೆ ದಾಳಿ ನಡೆಸಿ ಧ್ವಂಸ ಮಾಡಿರುವುದಾಗಿ ತಿಳಿಸಿದರು.

ಭಾರತದ ದಾಳಿಗೆ ಧ್ವಂಸಗೊಂಡ ಪಾಕಿಸ್ತಾನದ ವಾಯು ನೆಲೆಗಳು

  1. ಚುನಿಯನ್ ಏರ್ ಡಿಫೆನ್ಸ್ ರಾಡಾರ್ ಕೇಂದ್ರ  ಪಂಜಾಬ್ ಪ್ರಾಂತ್ಯದಲ್ಲಿರುವ ಈ ಏರ್ ಬೇಸ್, ಲಾಹೋರ್ ನಿಂದ ಸುಮಾರು 70 ಕಿ. ಮೀ ದೂರದಲ್ಲಿದೆ. ಪಾಕಿಸ್ತಾನದ ಪ್ರಮುಖ ವಾಯುನೆಲೆಗಳಲ್ಲಿ ಇದು ಒಂದಾಗಿದೆ.
  2. ಆರಿಫ್ವಾಲಾ ಏರ್ ಡಿಫೆನ್ಸ್ ರಾಡಾರ್ :ಭಾರತವು ನಾಶಪಡಿಸಿದ ವಾಯು ರಕ್ಷಣಾ ರಾಡಾರ್‌ಗಳಲ್ಲಿ ಆರಿಫ್ವಾಲಾ ಏರ್ ಡಿಫೆನ್ಸ್ ರಾಡಾರ್ ಕೂಡ ಸೇರಿದೆ.
  3. ಸರ್ಗೋಧಾ ಏರ್ ಫೀಲ್ಡ್ ಭಾರತ ದಾಳಿ ನಡೆಸಿದ ಪಾಕಿಸ್ತಾನದ ವಾಯು ನೆಲೆಗಳಲ್ಲಿ ಸರ್ಗೋಧಾ ಏರ್ ಫೀಲ್ಡ್ ಒಂದಾಗಿದೆ
  4. ರಹೀಂ ಯಾರ್ ಖಾನ್  ವಾಯುನೆಲೆ: ಇದು ಪಂಜಾಬ್‌ನಲ್ಲಿರುವ ಮತ್ತೊಂದು ಏರ್‌ಬೇಸ್‌. ಇದು ರಾಜಸ್ಥಾನಕ್ಕೆ ಸಮೀಪ ಇರುವ ವಾಯುನೆಲೆ. ಪಾಕಿಸ್ತಾನದ ದಕ್ಷಿಣ ಮತ್ತು ಪೂರ್ವ ಭಾಗದಲ್ಲಿ ಯಾವುದೇ ದಾಳಿ ಎದುರಿಸಲು ಈ ಏರ್‌ಬೇಸ್‌ ಸ್ಥಾಪಿಸಲಾಗಿದೆ.
  5. ಚಕ್ಲಾಲಾ ವಾಯನೆಲೆ ರಾವಲ್ಪಿಂಡಿಯ ಚಕ್ಲಲಾದಲ್ಲಿರುವ ಈ ವಾಯುನೆಲೆ ಈ ಹಿಂದೆ PAF ಬೇಸ್‌ ಎಂದೇ ಕರೆಯಲಾಗುತ್ತಿತ್ತು. ಇದು ಪಾಕಿಸ್ತಾನದ ಏರ್‌ಮೊಬಿಲಿಟಿ ಕಮಾಂಡ್‌ನ ಮುಖ್ಯ ಕೇಂದ್ರವಾಗಿದೆ. ಒಂದು ರೀತಿಯಲ್ಲಿ ಪಾಕಿಸ್ತಾನದ ವೈಮಾನಿಕ ಶಕ್ತಿಯ ಮುಖ್ಯನಾಡಿಯಾಗಿದೆ.

6.ಸುಕ್ಕೂರ್ ಏರ್ಫೀಲ್ಡ್  ಸಿಂಧ್‌ ಪ್ರಾಂತ್ಯದಲ್ಲಿರುವ ಏರ್‌ಬೇಸ್‌. ಈ ಅತ್ಯಾಧುನಿಕ ಏರ್‌ಬೇಸ್‌ ಅನ್ನು ಇತ್ತೀಚೆಗಷ್ಟೇ ಉದ್ಘಾಟಿಸಲಾಗಿದ್ದು, ಎಫ್‌-16ಎ, 15ಎಡಿಎಫ್‌ ವಿಮಾನಗಳನ್ನು ಇಲ್ಲಿ ನೆಲೆಗೊಳಿಸಲಾಗಿದೆ.

  1. ಭೋಲಾರಿ ಏರ್ ಫೀಲ್ಡ್ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಜಮ್‌ಶೋರೊ ಜಿಲ್ಲೆಯ ಭೋಲಾರಿ ಪಟ್ಟಣದ ಸಮೀಪವಿರುವ ಪಾಕಿಸ್ತಾನ್ ವಾಯುನೆಲೆಯಾಗಿದೆ.

8.ಜಾಕೋಬಾಬಾದ್ ಏರ್‌ಫೀಲ್ಡ್  ಇದು ಕರಾಚಿಯಿಂದ ಈಶಾನ್ಯಕ್ಕೆ ಸರಿಸುಮಾರು 500 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಸಿಂಧ್‌ನ ಜಾಕೋಬಾಬಾದ್‌ನಲ್ಲಿರುವ ಹಾಬಾಜ್ ವಾಯುನೆಲೆಯಾಗಿದೆ

ಭಾರತವು ಯಾವುದೇ ಎದುರಾಳಿ ವ್ಯವಸ್ಥೆಯನ್ನು ಗುರಿಯಾಗಿಸುವ ಸಾಮರ್ಥ್ಯವನ್ನು ಹೊಂದಿದೆ ಆದರೆ ಸಂಯಮದಿಂದ ಕಾರ್ಯನಿರ್ವಹಿಸುತ್ತದೆ ಎಂದು DGMO ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಎಚ್ಚರಿಕೆ ನೀಡಿದರು.

https://x.com/ANI/status/1921574575453737033?ref_src=twsrc%5Etfw%7Ctwcamp%5Etweetembed%7Ctwterm%5E1921574575453737033%7Ctwgr%5E5a13af5661bbcb90db04b3f25ce71ffab02aca2a%7Ctwcon%5Es1_c10&ref_url=https%3A%2F%2Fwww.kannadaprabha.com%2Fnation%2F2025%2FMay%2F11%2Fair-marshal-ak-bharti-shows-the-video-of-pak-air-bases-hit-by-india

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ