ಸಂಸಾರದ ಜಂಜಾಟ ಹಾಗೂ ಖಿನ್ನತೆಯಿಂದ ಹೊರಬರಲು ಮನುಷ್ಯ ದೇವಾಲಯ ಹಾಗೂ ಗುರುಗಳ ಸನ್ನಿಧಿಯಲ್ಲಿ ಪ್ರಾರ್ಥಿಸಿದರೆ ಚಿಂತೆಗಳು ಕಣ್ಮರೆಯಾಗಿ ಮನಸ್ಸಿಗೆ ಶಾಂತಿ ಲಭಿಸಲಿದೆ ಎಂದು ಮಾಚನಗೊಂಡನಹಳ್ಳಿ ಬೃಹ್ನಮಠದ ಶ್ರೀ ರೇಣುಕಾ ಮಹಂತ ಶಿವಾಚಾರ್ಯ ಸ್ವಾಮಿ ಜಿ ಹೇಳಿದರು.
ಚಿಕ್ಕಮಗಳೂರು ತಾಲ್ಲೂಕಿನ ತೊಂಡವಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಶ್ರೀ ಶನೇಶ್ವರ ದೇವಾಲಯ ಪ್ರವೇಶೋತ್ಸವ ಹಾಗೂ ನೂತನ ವಿಗ್ರಹ ಪ್ರಾಣ ಪ್ರತಿಷ್ಟಾಪನಾ ಮಹೋತ್ಸವದಲ್ಲಿ ದಿವ್ಯಸಾನಿಧ್ಯ ವಹಿಸಿ ಅವರು ಆರ್ಶೀವಚನ ನೀಡಿ ಮಾನವರು ಕೆಲಸ ಕಾರ್ಯಗಳಲ್ಲಿ ಕೇವಲ ಆರ್ಥಿಕ ಸದೃಢರಾಗಬಹುದು. ಮನಸ್ಸಿಗೆ ಶಾಂತಿ ಲಭಿಸಲು ದೇವಾಲಯದ ಶ್ರದ್ದಾಕೇಂದ್ರಗಳು ಅವಶ್ಯಕತೆಯಿದೆ. ಆ ನಿಟ್ಟಿನಲ್ಲಿ ದೃಢ ಸಂಕಲ್ಪದೊಂದಿಗೆ ಮನುಷ್ಯನು ಮು ನ್ನೆಡೆದರೆ ಭಗವಂತನ ಪ್ರಭಾವದಿಂದ ವೈಯಕ್ತಿಕ ಬದುಕು ಹಸನಾಗಲಿದೆ ಎಂದು ಹೇಳಿದರು
ಕೌಟುಂಬಿಕ ಚಿಂತೆ, ಮಕ್ಕಳ ಪಾಲನೆ, ಕೆಲಸದೊತ್ತಡದಿಂದ ಮಾನವರಿಗೆ ಹಲವಾರು ಸಂಕಷ್ಟಗಳು ಎ ದುರಾಗಲಿದ್ದು ಮಾನಸಿಕವಾಗಿ ಕುಗ್ಗುವ ಜೊತೆಗೆ ಶಾಂತಿ, ನೆಮ್ಮದಿ ಕಳೆದುಕೊಂಡು ಬದುಕೆಂಬ ಬಂಡಿಯ ನ್ನು ನಡೆಸಲಾಗದು, ಹೀಗಾಗಿ ಶ್ರದ್ದಾಕೇಂದ್ರ ಹಾಗೂ ಗುರುಗಳ ಆರ್ಶೀವಾದದಿಂದ ಕಳೆದುಕೊಂಡ ನೆಮ್ಮದಿ ಹಿಂಪಡೆಯಲು ಸಾಧ್ಯ ಎಂದರು.
ಮನುಷ್ಯನ ಹುಟ್ಟಿನಿಂದ ಸಾಯುವವರೆಗೂ ಜೀವನದಲ್ಲಿ ಜಂಜಾಟ ಕೊನೆಗೊಳ್ಳದು. ಒಂದಿಲ್ಲೊಂದು ಚಿಂತೆಯಲ್ಲಿ ಸಿಲುಕಿಕೊಳ್ಳುತ್ತಾನೆ. ಸುಡುವ ಚಿಂತೆಯಿಂದ ಮಣ್ಣಾಗದೇ, ಸದೃಢ ಆತ್ಮಶಕ್ತಿ ಬೆಳೆಸಿಕೊಂಡು ಗುರುಗಳ ಮಾರ್ಗದರ್ಶನದಲ್ಲಿ ದೇವರ ಕಾರ್ಯಗಳಲ್ಲಿ ಸಾಗಿದರೆ ಹೊಸಜೀವನ ದೊರೆಯಲಿದೆ ಎಂದು ತಿಳಿಸಿದರು.
ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ ಭಗವಂತನು ಸುಖಸುಮ್ಮನೆ ಒಲಿಯುವುದಿಲ್ಲ. ದೇವಾಲಯಗಳಲ್ಲಿ ಶ್ರದ್ದೆ, ವಿನಯತೆ ಹಾಗೂ ಆರಾಧಿಸುವ ಗುಣ ಮೈಗೂಡಿಕೊಂಡರೆ ತಾನಾಗಿಯೇ ಆ ರ್ಶೀವದಿಸುವನು ಎಂದ ಅವರು ಸಮಾಜದ ಎಲ್ಲಾ ಕಡೆ ತಲೆಎತ್ತುವ ಮನುಷ್ಯನಿಗೆ ದೇವಾಲಯದಲ್ಲಿ ಮಾ ತ್ರ ತಲೆತಗ್ಗಿಸುವ ಪವಿತ್ರ ಸ್ಥಳ ಎಂದು ಹೇಳಿದರು.
ಮನುಷ್ಯ ಪ್ರಕೃತಿಯ ಪಂಚಭೂತಗಳನ್ನು ದೇವರ ರೂಪದಲ್ಲಿ ಕಾಣಬೇಕು. ಮಲೀನಗೊಳಿಸುವ ಹಕ್ಕು ಯಾರಿಗೂ ಇರುವುದಿಲ್ಲ. ಹಾಗೆಯೇ ಮಂದಿರಗಳನ್ನು ನಿರ್ಮಿಸಿ ಸುಮ್ಮನಾಗದೇ ದೈನಂದಿನವು ಆರಾಧಿಸು ತ್ತಿರಬೇಕು. ಬಹಳ ವರ್ಷಗಳ ನಂತರ ದೇಗುಲದ ಕನಸು ಈಡೇರುವ ಜೊತೆಗೆ ಗ್ರಾಮಸ್ಥರ ಜವಾಬ್ದಾರಿಯು ಹೆಚ್ಚಾಗಿದೆ ಎಂದರು.
ದೇವಾಲಯ ಸಮಿತಿ ಅಧ್ಯಕ್ಷ ಹಾಲಪ್ಪ ಮಾತನಾಡಿ ಅನೇಕ ವರ್ಷಗಳಿಂದ ನೆನೆಗುದಿಗೆಯಲ್ಲಿದ್ದ ಶ್ರೀ ಶನೇಶ್ವರ ದೇವಾಲಯ ಗ್ರಾಮಸ್ಥರು, ದಾನಿಗಳು ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ಸಂಪನ್ನಗೊಂ ಡಿದ್ದು ಮುಂಜಾನೆಯಿಂದ ಹೋಮ-ಹವನ ನಡೆಯಿತು. ಬೃಹ್ನಮಠದ ಶ್ರೀಗಳಿಂದ ಪ್ರಾಣ ಪ್ರತಿಷ್ಟಾಪನೆಯು ಪೂರ್ಣಗೊಳ್ಳುವ ಜೊತೆಗೆ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಎಸ್ಸಿಎಸ್ಟಿ ದೌರ್ಜನ್ಯ ನಿಯಂತ್ರಣ ಸಮಿತಿ ಸದಸ್ಯ ಹುಣಸೇಮಕ್ಕಿ ಲಕ್ಷ್ಮಣ್, ದೇವಾ ಲಯ ಸಮಿತಿ ಅಧ್ಯಕ್ಷ ಟಿ.ಎಸ್.ರಾಜು, ಪಿಸಿಎಲ್‌ಡಿ ಬ್ಯಾಂಕ್ ನಿರ್ದೇಶಕ ದಿನೇಶ್, ಗ್ರಾ.ಪಂ. ಮಾಜಿ ಅಧ್ಯಕ್ಷ ರಾದ ಆನಂದ್, ರುದ್ರಮ್ಮ, ವಿಎಸ್‌ಎಸ್ ಎನ್ ಸದಸ್ಯ ಪ್ರಶಾಂತ್, ವಿಗ್ರಹ ದಾನಿ ಟಿ.ಹೆಚ್.ಸೋಮ ಯ್ಯ, ದಾನಿ ಟಿ.ಎಸ್.ಚಂದ್ರಯ್ಯ, ಗ್ರಾಮಸ್ಥರಾದ ಟಿ.ಆರ್.ಶಿವಯ್ಯ, ಈರಯ್ಯ, ಮಂಜುನಾಥ್, ಪರಮೇಶ್, ಸತೀಶ್, ಮಲ್ಲೇಶ್, ಕಂಡಪ್ಪ, ಪುರುಷೋತ್ತಮ್, ಈರೇಶ್, ಗಂಗಾಧರ್ ಅರ್ಚಕ ಧರ್ಮೇಶ್ ಮತ್ತಿತರರು ಉಪಸ್ಥಿತರಿದ್ದರು.



