ಮಲೆನಾಡಿನದ್ಯಂತ ಮುಂಗಾರು ಪೂರ್ವ ಮಳೆ ಹಬ್ಬದ ಜನಜೀವನ ಅರ್ಥವ್ಯಸ್ತಗೊಂಡಿದೆ.
ಹಲವೆಡೆ ಅನಾಹುತಗಳು ಸಂಭವಿಸಿವೆ. ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಸುಂಕಸಾಲೆ ಬಳಿ ರಸ್ತೆಗೆ ಬೃಹತ್ ಮರವೊಂದು ಮಿನಿ ಬಸ್ ಮತ್ತು ಬೈಕ್ ಮೇಲೆ ಉರುಳಿ ಬಿದ್ದಿದೆ. ಮಿನಿ ಬಸ್ ಮುಂಬಾಗ ಜಖಂಗೊಂಡಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೈಕ್ ಸವಾರನಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಮರ ಬಿದ್ದಿದ್ದರಿಂದ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು.



