ಮಲೆನಾಡು ಭಾಗದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತದಿಂದ ಸಾರ್ವಜನಿಕರಿಗೆ ಎಚ್ಚರಿಕೆಯ ನೀಡಲಾಗಿದೆ.
ಕಾಫಿನಾಡಿಗೆ ನಾಳೆ ಬುಧವಾರ ರೆಡ್ ಅಲರ್ಟ್, ನಾಡಿದ್ದು ಗುರುವಾರ ಆರೆಂಜ್ ಅಲರ್ಟ್ ಘೋಷಣೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತದಿಂದ ಕಂಟ್ರೋಲ್ ರೂಂ ತೆರೆಯಲಾಗಿದೆ.
ಸಾರ್ವಜನಿಕರು ಹಳ್ಳ, ನದಿ, ತಗ್ಗು ಪ್ರದೇಶಗಳ ಬಳಿ ಹೋಗದಂತೆ ಎಚ್ಚರಿಕೆ ನೀಡಲಾಗಿದೆ.
ಜಾನುವಾರು, ಬಟ್ಟೆ ತೊಳೆಯಲು ಹಳ್ಳ-ಕೆರೆಕಟ್ಟೆ ಬಳಿ ಹೋಗದಂತೆ ಸೂಚನೆ ನೀಡಲಾಗಿದೆ.
ಧರೆ, ಗುಡ್ಡ ಕುಸಿಯುವ ಸಾಧ್ಯತೆಯಿದ್ದು ಜನ ಎಚ್ಚರಿಕೆಯಿಂದಿರಬೇಕೆಂದು ಎಚ್ಚರಿಸಲಾಗಿದೆ.
ಮಲೆನಾಡಲ್ಲಿ ಸೋಮವಾರ ರಾತ್ರಿಯಿಂದಲೂ ನಿರಂತರವಾಗಿ ಮಳೆ ಸುರಿಯುತ್ತಿದು ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ.



