ಮೂಡಿಗೆರೆ ತಾಲ್ಲೂಕು ಗೋಣಿಬೀಡು ರೋಟರಿ ಸಂಸ್ಥೆ ವತಿಯಿಂದ ರಸ್ತೆ ಬದಿ ಸೂಚನಾ ಫಲಕ ಅಳವಡಿಸಲಾಯಿತು.
ಜನ್ನಾಪುರ ಸಕಲೇಶಪುರ ರಸ್ತೆಯ ಬೆಟ್ಟದಮನೆ ಸೇತುವೆ ಬಳಿ ಸೂಚನಾ ಫಲಕ ಅಳವಡಿಸಲಾಯಿತು.
ಈ ಪ್ರದೇಶದಲ್ಲಿ ಅಪಘಾತಗಳು ನಿರಂತರ ಸಂಭವಿಸುತ್ತಿದ್ದು, ಇದರ ಬಗ್ಗೆ ಸಾರ್ವಜನಿಕರಿಗೆ ಸೂಚನೆ ನೀಡಲು ಅಪಘಾತ ವಲಯ ನಿದಾನವಾಗಿ ಚಲಿಸಿ ಎಂಬ ಸೂಚನೆಯನ್ನು ಒಳಗೊಂಡ ಫಲಕವನ್ನು ಅಳವಡಿಸಲಾಯಿತು.
ಸೂಚನಾ ಫಲಕವನ್ನು ಗೋಣಿಬೀಡು ಪೊಲೀಸ್ ಠಾಣಾಧಿಕಾರಿ ಹರ್ಷವರ್ಧನ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ ವಾಹನ ಸವಾರರು ತಮ್ಮ ವಾಹನಗಳನ್ನು ಜಾಗರೂಕತೆಯಿಂದ ಚಾಲನೆ ಮಾಡಬೇಕು. ಮಳೆಗಾಲದಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸುವ ಸಾಧ್ಯತೆ ಇದ್ದು, ತಿರುವುಗಳಲ್ಲಿ ಮತ್ತು ಅಪಾಯಕಾರಿ ಸ್ಥಳಗಳಲ್ಲಿ ವಾಹನವನ್ನು ನಿಯಂತ್ರಿತ ವೇಗದಲ್ಲಿ ಚಲಾಯಿಸಬೇಕು. ಓವರ್ ಟೇಕ್ ಮಾಡುವಾಗ ಅತ್ಯಂತ ಜಾಗರೂಕರಾಗಿರುಬೇಕು. ರೋಟರಿ ಸಂಸ್ಥೆ ಬೆಟ್ಟದಮನೆ ಸೇತುವೆ ಬಳಿ ಸೂಚನಾ ಫಲಕ ಅಳವಡಿಕೆಗೆ ಕೊಡುಗೆ ನೀಡಿರುವ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಗೋಣಿಬೀಡು ರೋಟರಿ ಸಂಸ್ಥೆ ಅಧ್ಯಕ್ಷ ಪ್ರಸನ್ನ ಚಂದ್ರಾಪುರ, ಕಾರ್ಯದರ್ಶಿ ರತನ್ ಮರಾಬೈಲ್, ಕಿರುಗುಂದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಸ್ವಾತಿಶ್ರೀ, ಗ್ರಾಮ ಪಂಚಾಯಿತಿ ಸದಸ್ಯರು, ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು ಮತ್ತು ಸದಸ್ಯರು, ಲ್ಯಾಂಪ್ಸ್ ಮಹಾಮಂಡಲಿ ಅಧ್ಯಕ್ಷ ಮುತ್ತಪ್ಪ ಮುಂತಾದವರು ಉಪಸ್ಥಿತರಿದ್ದರು.



