ಚಿಕ್ಕಮಗಳೂರು ಜಿಲ್ಲಾ ಕಾಫಿ ವ್ಯಾಪಾರಿಗಳ ಸಂಘದ ವತಿಯಿಂದ ನಗರದ ಅನ್ನಪೂರ್ಣ ವೃದ್ದಾಶ್ರಮದ ನಿವಾಸಿಗಳಿಗೆ ಒಂದು ಹೊತ್ತಿನ ಭೋಜನವನ್ನು ಹಾಗೂ ಹಣ್ಣು ಹಂಪಲನ್ನು ವಿತರಣೆ ಮಾಡಲಾಯಿತು.
ಶನಿವಾರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ವೃದ್ಧಾಶ್ರಮಕ್ಕೆ ತೆರಳಿ ಅಲ್ಲಿದ್ದ ವೃದ್ದರ ಯೋಗಕ್ಷೇಮ ವಿಚಾರಿಸಿ ನಂತರ ಒಂದು ಹೊತ್ತಿನ ಊಟವನ್ನು ಕೊಡುಗೆಯಾಗಿ ನೀಡಿದರು. ಜೊತೆಗೆ ಹಣ್ಣುಹಂಪಲು ವಿತರಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಪರಮೇಶ್ ಕೋಡುವಳ್ಳಿ, ಉಪಾಧ್ಯಕ್ಷರಾದ ಲಕ್ಷ್ಮಣಗೌಡ, ಪದಾಧಿಕಾರಿಗಳಾದ ಎ.ಹೆಚ್. ಹಾಲೇಗೌಡ, ಸ್ವಾಮಿಗೌಡ, ಮಂಜುನಾಥ್, ಕೃಷ್ಣಕುಮಾರ್ ಅರಸ್, ಶ್ರೀನಿವಾಸ್, ಬಾಲರಾಜ್ ಅರಸ್, ಮೋಹಿನ್ ಅಹಮದ್, ರಂಗಸ್ವಾಮಿ ಅರಸ್, ಮನೋಹರ್ ಉಪಸ್ಥಿತರಿದ್ದರು. ಸಂಘದ ಸೇವಾ ಮನೋಭಾವನೆಯನ್ನು ಆಶ್ರಮದ ಮುಖ್ಯಸ್ಥರು ಪ್ರಶಂಸಿಸಿ, ಅಭಿನಂದಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲಾ ಕಾಫಿ ವ್ಯಾಪಾರಿಗಳ ಸಂಘದ ವತಿಯಿಂದ ಪ್ರತಿವರ್ಷ ವಿವಿಧ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ ಬರಲಾಗುತ್ತಿದ್ದು, ವಿಶೇಷವಾಗಿ ವೃದ್ಧಾಶ್ರಮ ಮತ್ತು ಅನಾಥಶ್ರಮಗಳಿಗೆ ಸಹಾಯ ನೀಡುತ್ತಾ ಬರುತ್ತಿದ್ದಾರೆ.



