ಸಾಯಿ ಕೃಷ್ಣ ಹೆಲ್ತ್ ಸೆಂಟರ್ ಬಣಕಲ್, ಜೇಸಿಐ ಬಣಕಲ್ ವಿಸ್ಮಯ ಹಾಗು ಗ್ರಾಮ ಪ೦ಚಾಯಿತ್ ಬಣಕಲ್ ಇವರ ಸ೦ಯುಕ್ತಾಶ್ರಯದಲ್ಲಿ ಉಚಿತ ವೈದ್ಯಕೀಯ ಶಿಬಿರವನ್ನು ಇತ್ತೀಚೆಗೆ ಸಾಯಿ ಕೃಷ್ಣ ಹೆಲ್ತ್ ಸೆಂಟರ್ ಬಣಕಲ್ ಇಲ್ಲಿ ಹಮ್ಮಿಕೊಳ್ಳಲಾಗಿತ್ತು.

ಆರೋಗ್ಯ ಶಿಬಿರದ ಸಮಪಾಲುದಾರರಾಗಿ ಜೇಸಿಐ ಬಣಕಲ್ ವಿಸ್ಮಯ ಸ೦ಸ್ಥೆಯ ಹಾಲಿ ಅಧ್ಯಕ್ಷರಾದ ಸುರೇ೦ದ್ರ, ಮಾಜಿ ಅದ್ಯಕ್ಷರಾದ ದಿನೇಶ್ ಎನ್. ಟಿ., ಮದನ್, ಗಜೇ೦ದ್ರ, ಮತ್ತು ಜೇಸಿಐ ಬಣಕಲ್ ವಿಸ್ಮಯ ಇದರ ಪದಾಧಿಕಾರಿಗಳು ಮತ್ತು ಸದಸ್ಯರುಗಳು, ಹಾಗು ಶಿಬಿರದ ಸಹ ಪ್ರಾಯೊಜಕಾರಾಗಿ ಗ್ರಾಮ ಪ೦ಚಾಯತ್ ಬಣಕಲ್ ಇದರ ಅಧ್ಯಕ್ಷರಾದ ಶ್ರೀಮತಿ ಜ಼ರೀನ ಮತ್ತು ಗ್ರಾಮ ಪ೦ಚಾಯತ್ ಬಣಕಲ್ ಇದರ ಸದಸ್ಯರು ಮತ್ತು ಸಿಬ್ಬ೦ದಿ ವರ್ಗದವರು ಹಾಜರಿದ್ದರು.
ಸಾಯಿ ಕೃಷ್ಣ ಆಸ್ಪತ್ರೆಯ ನುರಿತ ವೈದ್ಯರು ಮತ್ತು ಸಿಬ್ಬಂದಿ ವೈದ್ಯಕೀಯ ತಪಾಸಣೆ ನಡೆಸಿಕೊಟ್ಟರು. ಬಣಕಲ್ ಸುತ್ತಮುತ್ತಲ ಪ್ರದೇಶದ ನೂರಾರು ಮಂದಿ ಭಾಗವಹಿಸಿ ಶಿಬಿರದ ಸದುಪಯೋಗ ಪಡೆದರು.



