yoda1

 

 

ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸಿದ್ದ ಮೂಡಿಗೆರೆಯ ಹೆಮ್ಮೆಯ ಪುತ್ರ ಸಿ.ಎಸ್. ಜಯರಾಂ ಅವರು ಶನಿವಾರ ತಮ್ಮ ಸೇವೆಯಿಂದ ನಿವೃತ್ತಿ ಹೊಂದಿರುತ್ತಾರೆ.

ಸುದೀರ್ಘ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಜಯರಾಂ ಅವರು ಸೇನೆಯಲ್ಲಿ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

ಲೆಫ್ಟಿಂನೆಂಟ್ ಕರ್ನಲ್ . ಸಿ. ಎಸ್ ಜಯರಾಮ್ ರವರು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿಯ ಚಕ್ಕುಡಿಗೆ ಗ್ರಾಮದ ದಿವಂಗತ  ಶಿವಪ್ಪ ಗೌಡರ ಪುತ್ರ.

ಸಿ ಎಸ್ ಜಯರಾಂ ಭಾರತೀಯ ಸೇನೆಯಲ್ಲಿ ಅನೇಕ ಮಹತ್ವದ ಕಾರ್ಯಾಚರಣೆಗಳಲ್ಲಿ ಭಾಗವಹಿಸಿರುತ್ತಾರೆ. ಇತ್ತೀಚೆಗೆ ನಡೆದ ಆಪರೇಶನ್ ಸಿಂಧೂರ ಸೇನಾ ಕಾರ್ಯಾಚರಣೆಯಲ್ಲಿ ತಡೆ ರಹಿತ ಸುರಕ್ಷಿತ ಆಪರೇಷನ್ ಕಮ್ಯುನಿಕೇಷನ್, ಸಿಗ್ನಲ್ ಇಂಟೆಲಿಜೆನ್ಸ್, ಎಲೆಕ್ಟ್ರಾನಿಕ್ಸ್ ವಾರ್ಫೇರ್ , ಜಾಮ್ಮಿಂಗ್, ಸೈಬರ್ ಭದ್ರತೆ, ನೆಟ್ವರ್ಕ್ ಭದ್ರತೆ ನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಆಪರೇಷನ್ ಸಿಂಧೂರ್ ನಲ್ಲಿ ಇವರ ಪರಾಕ್ರಮಕ್ಕಾಗಿ ದೆಹಲಿ ಮುಖ್ಯಾಲಯದಲ್ಲಿ ಲೆಫ್ಟಿನೆಂಟ್ ಜನರಲ್ ವಿನೋದ್ ಕುಮಾರ್, ಡೈರೆಕ್ಟರ್ ಜನರಲ್, ಕೋರ್ ಆಫ್ ಸಿಗ್ನಲ್ಸ್ ಅವರಿಂದ ಗೌರವ ಸ್ವೀಕರಿಸಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ