IMG-20250605-WA0033_copy_1016x592_1

 

 

ಪರಿಸರವನ್ನು ಅನಗತ್ಯವಾಗಿ ದುರುಪಯೋಗ ಮಾಡಿಕೊಳ್ಳದೆ ಸರಿಯಾದ ರೀತಿಯಲ್ಲಿ ಬಳೆಸಿದರೆ, ಅದು ಕೂಡ ಮುಂದಿನ ಪೀಳಿಗೆಗೆ ಮಾಡಿಟ್ಟಂತ ದೊಡ್ಡ ಆಸ್ತಿ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟಿ ಪ್ರಶಾಂತ್ ಚಿಪ್ರಗುತ್ತಿ ಹೇಳಿದರು.

ಅವರು ಗುರುವಾರ ಗೌಡಹಳ್ಳಿ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವರ್ಷದಲ್ಲಿ ಒಮ್ಮೆ ಪರಿಸರ ದಿನಾಚರಣೆ ಮಾಡುವುದು ಇತ್ತೀಚಿನ ದಿನಗಳಲ್ಲಿ ಕಾಣುತ್ತಿವೆ. ಭಾರತೀಯ ಆಧ್ಯಾತ್ಮಿಕ ಚಿಂತನೆಯಲ್ಲಿ ಪ್ರತಿದಿನವೂ ಭೂಮಿ, ಗಿಡ ಮರ ಪ್ರಾಣಿ, ಪಕ್ಷಿ, ಸೂರ್ಯ, ಚಂದ್ರ ನಕ್ಷತ್ರ ಸೇರಿದಂತೆ ಜಲ ರಾಶಿಗೆ ಶ್ರದ್ದೆ ಭಕ್ತಿಯಿಂದ ಕೈಮುಗಿದು ಅದನ್ನು ಆರಾಧಿಸಿ ಕಾಪಾಡಿಕೊಂಡು ಬರುವಂತಹ ಸಂಸ್ಕøತಿ ನಮ್ಮದು. ಹಾಗಾಗಿ ಭಾರತೀಯರಿಗೆ ಕೇವಲ ವರ್ಷದಲ್ಲಿ ಒಂದು ದಿನ ಮಾತ್ರವಲ್ಲ, ನಿತ್ಯವೂ ಪರಿಸರ ದಿನಾಚರಣೆಯ ದಿನ ಆಗಿರುತ್ತದೆ. ಶ್ರೀ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯಿಂದ ಡಾ,ಡಿ.ವೀರೇಂದ್ರ ಹೆಗ್ಗಡೆ ಅವರು ಉಪಯುಕ್ತವಾದ ಲಕ್ಷಾಂತರ ಮರಗಳನ್ನು ಬೆಳೆಸುವ ಕಾರ್ಯಕ್ರಮ ಮಾಡಿದ್ದಾರೆ ಎಂದು ಹೇಳಿದರು.

ಪತ್ರಕರ್ತ ಗೌಡಹಳ್ಳಿ ಪ್ರಸನ್ನ ಮಾತನಾಡಿ, ಪರಿಸರ ಜಾಗೃತಿ ನಮ್ಮೆಲ್ಲರ ಕರ್ತವ್ಯ. ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬಳಸಬೇಕು, ನೀರನ್ನು ಹಿತಮಿತವಾಗಿ ಬಳಸುವ ಬಗ್ಗೆ ಅರಿವು ಮೂಡಿಸಬೇಕು, ಮನುಷ್ಯನ ದುರಾಸೆಯಿಂದ ಪರಿಸರ ನಾಶವಾಗುತ್ತಾ ಲೋಕಕಂಟಕವಾಗುತ್ತಿದೆ. ಇದನ್ನು ತಡೆಯಬೇಕಾಗಿದೆ ಎಂದು ಹೇಳಿದರು.

ಯೋಜನಾಧಿಕಾರಿ ಸುಧೀರ್ ಜೈನ್, ಒಕ್ಕೂಟ ಅಧ್ಯಕ್ಷ ದುಗ್ಗೆಗೌಡ, ಶಾಲೆ ಮುಖ್ಯಶಿಕ್ಷಕ ಪ್ರಕಾಶ್, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರುಗಳು ಮತ್ತು ಎಸ್ ಡಿ ಎಂ ಸಿ ಸದಸ್ಯರುಗಳು, ಗ್ರಾಮಸ್ಥರು, ಯೋಜನೆಯ ಕಾರ್ಯಕರ್ತರು, ವಿದ್ಯಾರ್ಥಿಗಳು ಮತ್ತಿತರರಿದ್ದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಬಗ್ಗೆ ಭಾಷಣ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನ ವಿತರಣೆ ಮಾಡಲಾಯಿತು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ