banalli 1

 

 

ತನ್ನ ಜೀವನದಲ್ಲಿ ನಡೆದಂತಹ ದೊಡ್ಡ ಅಪಘಾತದಿಂದ ಬೆನ್ನುಹುರಿಗೆ ಪೆಟ್ಟುಬಿದ್ದು ನೆಡೆದಾಡಲು ಆಗದ ಹಾಗೂ ಇನ್ನು ಮುಂದೆ ಚೇತರಿಸಿಕೊಳ್ಳಲು ಆಗದ ಸ್ಥಿತಿಯಲ್ಲಿ ಇದ್ದಾಗಿಯೂ ತಾನು ಓದುತ್ತಿರುವ ಶಾಲೆ, ಶಾಲೆಯ ಸಹಪಾಠಿಗಳ ಬಗ್ಗೆ ಕುಮಾರಿ ನಿಶಿತಾ  ಒಲವು ಎಲ್ಲರೂ ಮೆಚ್ಚುವಂತದ್ದು.

ಮೂಡಿಗೆರೆ ತಾಲ್ಲೂಕಿನ ಬಣಕಲ್ ಹೋಬಳಿ ಬಾನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ನಿಶಿತಾ ಕಳೆದ ವರ್ಷ ಮನೆಯ ಬಳಿ ಕಾಲುಜಾರಿ ಬಿದ್ದು ಬೆನ್ನುಹುರಿ ಮೂಳೆ ಮುರಿತಕ್ಕೆ ಒಳಗಾಗಿದ್ದಾಳೆ. ಬಾನಹಳ್ಳಿ ಸಮೀಪದ ಹಾರ್ಗೋಡು ಗ್ರಾಮದ ಕೂಲಿ ಕಾರ್ಮಿಕರಾದ ಶ್ರೀಧರ್ ಮತ್ತು ಗೀತಾ ಅವರ ಪುತ್ರಿ ಪೋಷಕರ ಪರಿಶ್ರಮ ಕಾಳಜಿ, ದಾನಿಗಳ ನೆರವಿನಿಂದ  ಕೊಂಚ ಮಟ್ಟಿಗೆ ಸುಧಾರಿಸಿಕೊಂಡಿದ್ದಾಳೆ. ಆದರೂ ಅವಳು ತನ್ನ ಪೋಷಕರ ನೆರವು ಇಲ್ಲದೆ ನಡೆದಾಡಲು ಯಾವುದೇ ಕೆಲಗಳನ್ನು ಮಾಡಲು ಸಾಧ್ಯವಿಲ್ಲದಂತಹ ಸ್ಥಿತಿಯಿದೆ. ಎಡಭಾಗ ಸಂಪೂರ್ಣ ಸ್ವಾಧೀನವಿಲ್ಲದಂತಾಗಿದೆ. ಈಗ ಆರನೇ ತರಗತಿ ಓದುತ್ತಿದ್ದು, ಪ್ರತಿದಿನ ಅವರ ತಂದೆಯೇ ಶಾಲೆಗೆ ಕರೆತಂದು, ಅವಳೊಂದಿಗೆಯೇ ಇದ್ದು ಮನೆಗೆ ವಾಪಾಸ್ಸು ಕರೆದೊಯ್ಯುತ್ತಾರೆ.

ಓದಿನಲ್ಲಿ, ಬುದ್ದಿಯಲ್ಲಿ ಚುರುಕಾಗಿರುವ ಮುದ್ದಿನ ಮಗಳ ವಿದ್ಯಾಭ್ಯಾಸ ನಿಲ್ಲಬಾರದು ಎಂಬ ಕಾಳಜಿ ನಿಶಿತಾಳ ಪೋಷಕರದ್ದು. ನಿಶಿತಾಳ ವಿಚಾರ ಮಾಧ್ಯಮಗಳಲ್ಲಿ ಪ್ರಚಾರವಾದಾಗ ಅವಳ ಚಿಕಿತ್ಸೆಗೆ ಹಲವಾರು ಮಂದಿ ದಾನಿಗಳು ನೆರವು ನೀಡಿದ್ದರು. ಆ ಸಂದರ್ಭದಲ್ಲಿ ತನ್ನ ಆರೋಗ್ಯ ಸುಧಾರಣೆಗೆ ಸಹಕಾರ ನೀಡಲು ಬಂದ ದಾನಿಗಳಲ್ಲಿ ಅವಳು ಕೇಳಿದ್ದು, ನನ್ನ ಸಹಪಾಠಿಗಳಿಗೊಂದು ನಿಮ್ಮ ಸಹಕಾರ ನೀಡಿ ಎನ್ನುವ ಹೃದಯ ವಿಶಾಲತೆಯ ಮಾತು.

ಇದರಿಂದ ಬಾನಹಳ್ಳಿ ಶಾಲೆಯ ಮಕ್ಕಳಿಗೆ ಸುಂದರವಾದ ಸಮವಸ್ತ್ರ ಬರಲು ಸಾಧ್ಯವಾಯಿತು. ಸುಮಾರು 45 ಸಾವಿರ ವೆಚ್ಚದಲ್ಲಿ  ಶಾಲೆಯ 52 ಮಕ್ಕಳಿಗೆ ಶಾಲಾಸಮವಸ್ತ್ರವನ್ನು(ಟ್ರಾಕ್ ಪ್ಯಾಂಟ್, ಟೀ ಶರ್ಟ್) ಪುಟಾಣಿ ನಿಶಿತಾ ಇವಳ ಸಹಕಾರದಿಂದ ಶಾಲೆಗೆ ಪಡೆಯಲಾಗಿದೆ.

ಧರ್ಮಸ್ಥಳ ಸಂಘ ವಿಪತ್ತು ನಿರ್ವಹಣಾ ಕಮಿಟಿ ಸದಸ್ಯರು ಚಂದ್ರಶೇಖರ್ ಜಾವಳಿ.  ರಾಕೇಶ್ ಪೂಜಾರಿ ಪಿ ಎಫ್ ಕಚೇರಿ, ಕೇಂದ್ರ ಸರಕಾರಿ ನೌಕರರು, ಮೈಸೂರು ಇವರು ಶಾಲಾ ಮಕ್ಕಳಿಗೆ ನಿಶಿತಾಳ ಹೃದಯ ವೈಶಾಲ್ಯತೆಗಾಗಿ ಸಮವಸ್ತ್ರವನ್ನು ಖುದ್ದು ಅವರೇ ಬಂದು ನಿಶಿತಾಳಿಂದ ಎಲ್ಲ ಮಕ್ಕಳಿಗೆ ವಿತರಿಸಿರುತ್ತಾರೆ .

ನಿಶಿತಾ ತನ್ನ ನೋವಿನ ನಡುವೆಯೂ ತನ್ನ ಸಹಪಾಠಿಗಳಿಗಾಗಿ ಮಿಡಿದು ಶಾಲೆಗೆ ಉತ್ತಮ ಸಮವಸ್ತ್ರ ಸಿಗಲು ಪ್ರೇರಣೆಯಾಗಿದ್ದಾಳೆ. ನಿಶಿತಾಳ ಕಷ್ಟದ ದಿನಗಳಲ್ಲಿ ಶಾಲಾ ಶಿಕ್ಷಕರುಗಳ ಪ್ರೋತ್ಸಾಹ ಮತ್ತು ಪ್ರೇರಣೆ ಅವಳಲ್ಲಿ ಹೊಸ ಉತ್ಸಾಹವನ್ನು ತುಂಬಿತ್ತು.

ಬಾನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಇಂಪಾ ಸವಿನ್ ಮತ್ತು ಸಹಶಿಕ್ಷಕರ ಕಾಳಜಿಯಿಂದ ಶಾಲೆ ಜಿಲ್ಲೆಯ ಮಾದರಿ ಶಾಲೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಕಿರಿಯ ಪ್ರಾಥಮಿಕ ಶಾಲೆಯಾಗಿದ್ದರೂ ಶಾಲೆಯಲ್ಲಿ 50 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ದಾನಿಗಳಿಗೂ ಹಾಗೂ ಇದಕ್ಕೆ ಮೂಲ ಕಾರಣಕರ್ತರಾಗಿರುವಂತಹ ಕುಮಾರಿ ನಿಶಿತಾ ಹಾಗೂ ಅವಳ ಪೋಷಕರಿಗೆ ಶಾಲಾ ಶಿಕ್ಷಕವೃಂದ ಮತ್ತು ಎಸ್.ಡಿ.ಎಂ.ಸಿ., ಪೋಷಕರು ಮತ್ತು ವಿದ್ಯಾರ್ಥಿಗಳು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ