ಮೂಡಿಗೆರೆ ತಾಲ್ಲೂಕಿನ ಬಣಕಲ್‍ನ ಸುಭಾಷ್ ನಗರ ಕಾರ್ಯಕ್ಷೇತ್ರದ ಭಾಂದವ್ಯ ಜ್ಞಾನವಿಕಾಸ ಕೇಂದ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಗ್ರಾಮಾಭೀವೃದ್ಧಿ ಯೋಜನೆವತಿಯಿಂದ ಬಾಲ್ಯ ವಿವಾಹ ನಿಷೇಧ, ಮಕ್ಕಳ ಶಿಕ್ಷಣ, ದುಶ್ಚಟಗಳ ಬಗ್ಗೆ ಜಾಗೃತಿ, ನೀರಿನ ಮಿತ ಬಳಕೆ ಪರಿಸರ ಸಂರಕ್ಷಣೆ ಬಗ್ಗೆ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಲಾಯಿತು.
ಬಣಕಲ್ ಜೇಸಿಐ ಭವನದಲ್ಲಿ ನಡೆದ ಕಾರ್ಯಕ್ರಮ ಸುವರ್ಣ ಕರ್ನಾಟಕ ಜನಜಾಗೃತಿ ಜಾನಪದ ಕಲಾತಂಡ ಶಿವನಿ ಇವರಿಂದ ನಡೆಯಿತು,
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಸಂಶುನ್ನೀಸಾ ವಹಿಸಿದ್ದರು. ಯೋಜನಾಧಿಕಾರಿಗಳಾದ ಸುಧೀರ್ ಜೈನ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಭಾರತಿ, ವಲಯ ಮೇಲ್ವಿಚಾರಕರಾದ ಸಂದೀಪ್, ಸೇವಾ ಪ್ರತಿನಿಧಿ ಕೇಂದ್ರ ಸದಸ್ಯರು, ಸ್ವ-ಸಹಾಯ ಸಂಘದ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು ಇದ್ದರು.



