Screenshot_2025-07-23-07-32-54-46_6012fa4d4ddec268fc5c7112cbb265e7_copy_1039x762_1

 

 

ಲಾಸ್ಟ್ ಬೆಂಚ್ ಎಂಬ ಪರಿಕಲ್ಪನೆಯನ್ನು ತೊಡೆದುಹಾಕಲು ಕೇರಳದಲ್ಲಿ ಜಾರಿಗೆ ತಂದಿರುವ ಹೊಸ ಮಾದರಿಯನ್ನು  ಇದೀಗ ಕಾಫಿನಾಡಿನ ಶಾಲೆ ಒಂದರಲ್ಲಿ ಅಳವಡಿಸಲಾಗಿದೆ.
ಮೂಡಿಗೆರೆ ತಾಲೂಕಿನ ಬಣಕಲ್ ಪ್ರೌಢ ಶಾಲೆಯಲ್ಲಿ ಈ ಹೊಸ ಮಾದರಿಯ ತರಗತಿಗಳಿಗೆ ಮುನ್ನುಡಿ ಬರೆದಿದ್ದಾರೆ.
ಬಣಕಲ್ ಪ್ರೌಢ ಶಾಲೆಯಲ್ಲಿ “ಲಾಸ್ಟ್ ಬೆಂಚ್ ಸ್ಟೂಡೆಂಟ್ಸ್” ಎಂಬುದನ್ನು ಅಳಿಸಲು ವಿಶಿಷ್ಟ ಶಿಕ್ಷಣ ಮಾದರಿಯನ್ನು ಪ್ರಾಯೋಗಿಕವಾಗಿ ಆರಂಭಿಸಿದ್ದು, ಆರಂಭಿಕ ಹಂತದಲ್ಲಿ 8ನೇ ತರಗತಿಯಲ್ಲಿಯೇ ಈ ಮಾದರಿ ಅನುಷ್ಠಾನಗೊಂಡಿದೆ.
ತರಗತಿಯನ್ನು ವೃತ್ತಾಕಾರದ ಮಾದರಿಯಲ್ಲಿ ರೂಪಿಸಲಾಗಿದ್ದು, ವಿದ್ಯಾರ್ಥಿಗಳು ಅರ್ಧ ವೃತ್ತಾಕಾರದ (ಸೆಮಿ ಸರ್ಕಲ್) ಮಾದರಿಯಲ್ಲಿ ಕುಳಿತುಕೊಳ್ಳುತ್ತಾರೆ.
ಈ ಹೊಸ ತರಗತಿ ಮಾದರಿ ಶಿಕ್ಷಕರಿಗೆ ಎಲ್ಲಾ ಮಕ್ಕಳ ಮೇಲೂ ಸಮಾನ ಗಮನಹರಿಸಲು ಅನುಕೂಲವಾಗಲಿದ್ದು, “ಲಾಸ್ಟ್ ಬೆಂಚ್ ಟು ಫಸ್ಟ್ ಬೆಂಚ್” ಎಂಬ ಉದ್ದೇಶದೊಂದಿಗೆ ಎಲ್ಲ ಮಕ್ಕಳಲ್ಲಿ ಚರ್ಚೆ ಮತ್ತು ಗ್ರಹಿಕೆ ಶಕ್ತಿ ವೃದ್ಧಿಸುವಲ್ಲಿ ಸಹಾಯಕವಾಗಲಿದೆ.
ಪಠ್ಯಚಟುವಟಿಕೆಗಳ ಜೊತೆಗೆ ಮಕ್ಕಳಲ್ಲಿ ಶೈಕ್ಷಣಿಕ ಚಟುವಟಿಕೆಯಲ್ಲಿ ಭಾಗವಹಿಸುವ ಉತ್ಸಾಹ ಹೆಚ್ಚಾಗಿದ್ದು, ಪೋಷಕರಲ್ಲಿಯೂ ಈ ಹೊಸ ಪರಿಕಲ್ಪನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಬಣಕಲ್ ಪ್ರೌಢ ಶಾಲೆಯ ಈ ವಿಶಿಷ್ಟ ಪ್ರಯತ್ನ ಇತರೆ ಶಾಲೆಗಳಿಗೂ ಮಾದರಿಯಾಗುವ ನಿರೀಕ್ಷೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ