ಕಲೆ, ಸಂಸ್ಕøತಿ, ನಾಡು, ನುಡಿ ಬಗ್ಗೆ ಯುವಕರು ಹೆಚ್ಚಾಗಿ ಒಲವು ತೋರಿಸಬೇಕೆಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಯುವ ಘಟಕದ ಜಿಲ್ಲಾಧ್ಯಕ್ಷೆ ಪ್ರಿಯಾಂಕ ಭರತ್ ಹೇಳಿದರು.
ಅವರು ಮಂಗಳವಾರ ಸಂಜೆ ಮೂಡಿಗೆರೆ ಪಟ್ಟಣದ ಜೇಸಿ ಭವನದಲ್ಲಿ ಏರ್ಪಡಿಸಿದ್ದ ಕಸಾಪ ಯುವ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂಗ್ಲೀಷ್ ವ್ಯಾಮೋಹದಿಂದಾಗಿ ಕನ್ನಡ ಭಾಷೆ ಅಪಾಯಕ್ಕೆ ಸಿಲುಕಿದೆ. ಕನ್ನಡ ಭಾಷೆಯನ್ನು ಪ್ರತಿ ಮನೆಯಲ್ಲಿ ಬಳಕೆ ಮಾಡಿದರೆ ಸಾಕು ಕನ್ನಡ ಭಾಷೆ ತಾನಾಗಿಯೇ ವಿಜೃಂಬಿಸುತ್ತದೆ ಎಂದು ಹೇಳಿದರು.
ಯುವ ಘಟಕದ ನೂತನ ಅಧ್ಯಕ್ಷ ಚಂದ್ರು ಒಡೆಯರ್ ಅಧಿಕಾರ ಸ್ವೀಕರಿಸಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ನಮ್ಮ ನಾಡಿನ ಹೆಮ್ಮೆ ಸಂಘಟನೆಯಾಗಿದೆ. ಇದನ್ನು ಇನ್ನಷ್ಟು ಬಲ ಪಡಿಸಲು ಕನ್ನಡ ಭಾಷೆ ಸೇರಿದಂತೆ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸುವಲ್ಲಿ ನಿರತರಾಗಬೆಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ತಾಲ್ಲೂಕು ಅಧ್ಯಕ್ಷ ಡಿ.ಕೆ. ಲಕ್ಷ್ಮಣಗೌಡ ವಹಿಸಿದ್ದರು, ಕಸಾಪ ಜಿಲ್ಲಾ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ಪ್ರಧಾನ ಸಂಚಾಲಕ ಮಗ್ಗಲಮಕ್ಕಿ ಗಣೇಶ್, ಹೆಚ್.ಎಂ. ಶಾಂತಕುಮಾರ್, ವಿಶಾಲ ನಾಗರಾಜ್, ಬಕ್ಕಿ ಮಂಜುನಾಥ್, ರವಿ ಕುನ್ನಹಳ್ಳಿ, ಎಂ.ಹೆಚ್. ಅಮರನಾಥ್, ಹೊರಟ್ಟಿ ರಘು, ಹಸೈನಾರ್, ವಸಂತ್ ಹಾರ್ಗೋಡು ಮತ್ತಿತರರಿದ್ದರು.



