sravan 22

 

 

ಕನ್ನಡ ಸಾಹಿತ್ಯ ಪರಿಷತ್ ಮೂಡಿಗೆರೆ ತಾಲ್ಲೂಕು ಘಟಕದ ವತಿಯಿಂದ ಶ್ರಾವಣ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಡಿ.ಕೆ. ಲಕ್ಷ್ಮಣಗೌಡ ಅವರ ಅಧ್ಯಕ್ಷತೆಯಲ್ಲಿ ಅವರ ಮೇಗಲಪೇಟೆ ಪುನರ್ವಿ ನಿಲಯದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಶ್ರಾವಣ ಸಂಜೆ ಕಾರ್ಯಕ್ರಮವನ್ನು ಕ.ಸಾ.ಪ. ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ನಿರ್ಮಲ ಮಂಚೇಗೌಡ ಉದ್ಘಾಟಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ವರ್ಷದಲ್ಲಿ ಶ್ರಾವಣ ಮಾಸ ಬಹು ವಿಶೇಷವಾಗಿದೆ. ಮಳೆಗಾಲ ಮುಗಿಯುತ್ತಾ ಬಂದು ಹಬ್ಬಗಳು ಆರಂಭವಾಗುವ ಮಾಸ ಇದಾಗಿದೆ. ಪ್ರಕೃತಿಯಲ್ಲಿ ಬದಲಾವಣೆಯ ಪರ್ವ ಶ್ರಾವಣ ಮಾಸದಿಂದ ಪ್ರಾರಂಭವಾಗುತ್ತದೆ. ಇದು ಮಹಿಳೆಯರಿಗೂ ವಿಶೇಷ ಸಂಭ್ರಮದ ಮಾಸವಾಗಿದೆ ಎಂದರು.

ಸುಗ್ರಾಮ ಸಂಘದ ತಾಲ್ಲೂಕು ಸಂಯೋಜಕ, ಕ.ಸಾ.ಪ. ಸಾಂಸ್ಕೃತಿಕ ಕಾರ್ಯದರ್ಶಿ ನವೀನ್ ಆನೆದಿಬ್ಬ ಮುಖ್ಯ ಭಾಷಣಕಾರರಾಗಿ ಮಾತನಾಡಿ ; ಭಾರತದಲ್ಲಿ ಹಲವು ಸಂಸ್ಕೃತಿಗಳು ಸಮ್ಮಿಳಿತವಾಗಿ ಸಹಬಾಳ್ವೆಯಿಂದ ಬದುಕುತ್ತಿರುವುದು ವಿಶೇಷವಾಗಿದೆ. ನಾವು ನಮ್ಮಲ್ಲಿರುವ ಅಹಂ ಅನ್ನು ಬಿಟ್ಟು ಎಲ್ಲರೊಡನೆ ಒಂದಾಗಿ ಬದುಕಿದಾಗ ಸಾರ್ಥಕ ಜೀವನವಾಗುತ್ತದೆ. ಪ್ರಕೃತಿಯೇ ನಮಗೆ ಜೀವನ ಪಾಠವಾಗಿದೆ. ಶ್ರಾವಣ ಮಾಸದಲ್ಲಿ ನಾವೆಲ್ಲಾ ಒಟ್ಟಾಗಿ ಕೂಡಿ ಕಲೆತು ಹಬ್ಬದ ಸಂಭ್ರವನ್ನು ಆಚರಿಸುವುದು ವಿಶೇಷ ಎಂದರು.

ಈ ಸಂದರ್ಭದಲ್ಲಿ ಕ.ಸಾ.ಪ. ಜಿಲ್ಲಾ ಸಮಿತಿ ಸದಸ್ಯ ಹೆಚ್.ಎಂ. ಶಾಂತಕುಮಾರ್, ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ನವೀನ್, ಕ.ಸಾ.ಪ. ತಾಲ್ಲೂಕು ಪ್ರಧಾನ ಕಾರ್ಯದರ್ಶಿಗಳಾದ ಸುಚಿತ್ರ ಪ್ರಸನ್ನ, ಪ್ರಕಾಶ್ ಬಕ್ಕಿ, ಕಸಬಾ ಹೋಬಳಿ ಅಧ್ಯಕ್ಷ ರವಿ ಕುನ್ನಹಳ್ಳಿ, ಬಣಕಲ್ ಹೋಬಳಿ ಅಧ್ಯಕ್ಷ ಲೋಕೇಶ್, ಬಾಳೂರು ಹೋಬಳಿ ಅಧ್ಯಕ್ಷ ಸೋಮೇಶ್ ಗೌಡ, ಕ.ಸಾ.ಪ. ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಅಂಬಾವತಿ, ಹರಿಣಾಕ್ಷಿ, ಕ.ಸಾ.ಪ. ತಾಲ್ಲೂಕು ಸಹಕಾರ್ಯದರ್ಶಿಗಳಾದ ಪವನ ವಿಜಯ್, ಇಂಪಾ ಸವಿನ್ , ಸಂಘಟನಾ ಕಾರ್ಯದರ್ಶಿ ಬೆಟ್ಟಗೆರೆ ಮಂಜುನಾಥ್, ಸಾಮಾಜಿಕ ಜಾಲತಾಣಗಳು ಪ್ರತಿನಿಧಿ, ವಿಜಯಲಕ್ಷ್ಮಿ, ಮಹಿಳಾ ಪ್ರತಿನಿಧಿ ಕಮಲಾ ಸತೀಶ್, ತಾಲ್ಲೂಕು ಯುವ ಘಟಕದ ಅಧ್ಯಕ್ಷ ಚಂದ್ರು ಒಡೆಯಾರ್, ಮಹಿಳಾ ಘಟಕದ ಅಧ್ಯಕ್ಷೆ ಅನಿತಾ ಜಗದೀಪ್, ಮಹಿಳಾ ಘಟಕದ ನಿಯೋಜಿತ ಅಧ್ಯಕ್ಷೆ ರೇಖಾ ರವಿರಾಜ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ವಿನೋದ್ ಬಿದರಹಳ್ಳಿ, ಪ್ರಕಾಶ್, ವಿ.ಪಿ. ನಾರಾಯಣ, ಕ.ಸಾ.ಪ. ಪದಾಧಿಕಾರಿಗಳು,  ವಿವಿಧ ಸಂಘಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು ಭಾಗವಹಿಸಿದ್ದರು.

ಕರ್ನಾಟಕ ಸಾಹಿತ್ಯ ಸಂಭ್ರಮ ಘಟಕದ ರಾಜ್ಯಾಧ್ಯಕ್ಷ ಎಂ.ಎಸ್. ನಾಗರಾಜು ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ವಿವಿಧ ಗಾಯಕರ ಭಾವಗೀತೆಗಳನ್ನು ಹಾಡಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ