ಭಾನುವಾರ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ದೇವಲದಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಗುಂದ ಬೆಟ್ಟದ ಭೈರವೇಶ್ವರ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಹಸಿರು ಫೌಂಡೇಷನ್ ವತಿಯಿಂದ ಲಕ್ಷಾಂತರ ನೈಸರ್ಗಿಕ ಕಾಡು ಜಾತಿಯ ಮರಗಳ ಬೀಜ ಬಿತ್ತನೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.ಕಾರ್ಯಕ್ರಮದಲ್ಲಿ ಸಾಕಷ್ಟು ಪ್ರವಾಸಿಗರು ಹಾಗೂ ಸ್ಥಳೀಯರು ಹಾಗೂ ಹಸಿರು ಫೌಂಡೇಷನ್ ಪದಾಧಿಕಾರಿಗಳು ಭಾಗವಹಿಸಿದ್ದರು.
ಹಸಿರು ಫೌಂಡೇಷನ್ ಅಧ್ಯಕ್ಷರು ರತನ್ ಊರುಬಗೆ ಮಾತನಾಡಿ ಹಸಿರು ಫೌಂಡೇಷನ್ ಸಂಸ್ಥೆಯು ನಿರಂತರವಾಗಿ ಪರಿಸರ ಕಾಳಜಿ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದ್ದು ಮುಂದಿನ ದಿನಗಳಲ್ಲಿ ರಾಜ್ಯದ ಪ್ರತಿ ತಾಲ್ಲೂಕು, ಜಿಲ್ಲೆಗಳಿಗೆ ವಿಸ್ತರಿಸುವುದಾಗಿ ತಿಳಿಸಿದರು.
ದೇವಲದಕೆರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಹಾಗು ಸ್ಥಳೀಯ ಮುಖಂಡರು ಆದ ರವಿ ಮರಗುಂದ ಮಾತನಾಡಿ ಹಸಿರು ಫೌಂಡೇಶನ್ ಕಾರ್ಯಗಳನ್ನು ಶ್ಲಾಘಿಸಿದರು . ರಾಜ್ಯಾದ್ಯಂತ ಹಸಿರು ಫೌಂಡೇಷನ್ ಸೇವೆ ನಿರಂತರವಾಗಿ ನಡೆಯಲಿ ಎಂದರು.
ಬೆಟ್ಟದ ಭೈರವೇಶ್ವರ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾರ್ಯಕ್ರಮ ಮಾಡಿದ್ದಕ್ಕಾಗಿ ಹಸಿರು ಫೌಂಡೇಷನ್ ಸಂಸ್ಥೆಗೆ ಧನ್ಯವಾದಗಳನ್ನು ಅರ್ಪಿಸಿದರು.

ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಅಶ್ವಥ್ ಕಾರುಮಗೆ, ಹಸಿರು ಫೌಂಡೇಷನ್ ಉಪಾಧ್ಯಕ್ಷ ವಿನುಪ್ರಸಾದ್ ಹೆಗ್ಗುಡ್ಲು, ನಿರ್ದೇಶಕರಾದ ಶೋದನ್ ಹೊಸಕೆರೆ, ರತನ್ ದೇವರುಂದ, ಸಚಿನ್ ದುರ್ಗದಹಳ್ಳಿ ಮತ್ತಿಗರರು ಹಾಜರಿದ್ದರು..



