IMG_20250807_114501

 

 

ಚಿಕ್ಕಮಗಳೂರು ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದು ಕೊರತೆ ಸಭೆಯನ್ನು ತಿಳುವಳಿಕೆ ಮೂಡಿಸಲು ಆಯೋಜನೆ ಮಾಡಲಾಗುತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ ವಿಕ್ರಮ್ ಅಮಟೆ ಹೇಳಿದರು.
ಅವರು ಇತ್ತೀಚೆಗೆ ಮೂಡಿಗೆರೆ ಪಟ್ಟಣದ ಪಂಡಿತ್ ದಿನ್ ದಯಾಳ್ ಸಭಾಂಗಣದಲ್ಲಿ ಮೂಡಿಗೆರೆ ಪೊಲೀಸ್ ವೃತ ಆಯೋಜಿಸಿದ್ದ ಎಸ್ಸಿ ಎಸ್ಟಿ ಕುಂದು ಕೊರತೆ ಸಭೆಯಲ್ಲಿ ಮಾತನಾಡಿ ಪೊಲೀಸ್ ಇಲಾಖೆ ಅತ್ಯಾಚಾರ ಮತ್ತು ಬಾಲ್ಯವಿವಾಹ ಸೈಬರ್ ಕ್ರೈಮ್, ಮಾದಕ ವಸ್ತುಗಳ  ಬಗ್ಗೆ ಹೆಚ್ಚು ತಿಳುವಳಿಕೆಯನ್ನು ಶಾಲೆಗಳಲ್ಲಿ ಮತ್ತು ಸಾರ್ವಜನಿಕರಿಗೆ  ಅರಿವು ಮೂಡಿಸುವ ಕಾರ್ಯದಲ್ಲಿ ನಿರತವಾಗಿದೆ. ಈ ಕಾರ್ಯಕ್ಕೆ   ಸಮುದಾಯದ ಮುಖಂಡರುಗಳು ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ಜನ ನಿವೇಶನ ಮತ್ತು ರುದ್ರ ಭೂಮಿ ಬಗ್ಗೆ ಮದ್ಯ ಮಾರಾಟ ಗಳ ಬಗ್ಗೆ ಸಭೆ ಗಮನಕ್ಕೆ ತಂದರು. ಮಾಕೋನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗಲಪುರ ದಲ್ಲಿ 40ಮನೆಗಳಿದ್ದು ಮಸಣ ಕೇವಲ 20/30 ಅಡಿ ಜಾಗದಲ್ಲಿ ಮಣ್ಣು ಮಾಡಬೇಕಾಗಿದೆ ಹಾಗೆ ಕಲ್ಲು ಹೊಲದಲ್ಲಿ ಸ್ಮಶಾನಕ್ಕೆ ಹೋಗಲು ರಸ್ತೆ ವ್ಯವಸ್ಥೆ ಇಲ್ಲ ಹಂಡುಗುಳಿಯಲ್ಲಿ 2 ಎಕರೆ ಜಾಗ ಒತ್ತುವರಿ ಆಗಿದೆ ಎಂದು ಸ್ಥಳೀಯರು ತಿಳಿಸಿದರು.
ಸಿ ಪಿ ಎಂ ಎಲ್ ಮುಖಂಡ ರುದ್ರಯ್ಯ ಮಾತನಾಡಿ ಹಳೇಮೂಡಿಗೆರೆ ಯಲ್ಲಿ ಹಲವಾರು ವರ್ಷದಿಂದ ನಿವೇಶನಕ್ಕೆ ಹೋರಾಟ ಮಾಡಿದರು ಸ್ಥಳೀಯರ ಪ್ರಭಾವದಿಂದ ನಿವೇಶನ ಕಟ್ಟಿಕೊಂಡಿರುವ ಸ್ಥಳಕ್ಕೆ ಹೋಗಲು ರಸ್ತೆ ಇಲ್ಲದಂತಾಗಿದೆ. ಹಳೆಮೂಡಿಗೆರೆಯಲ್ಲಿ ಒಂದು ಚರ್ಚ್ ಪ್ರಾರಂಭ ಮಾಡಿಕೊಂಡಿದ್ದಾರೆ ಅಲ್ಲಿಗೆ ಬಡವರು ಪ್ರಾರ್ಥನೆ ಮಾಡಲು ಹೋದರೆ ಅದನ್ನು ತಡೆಯುವ ಪ್ರಯತ್ನ ಹಿಂದೂ ಪರ ಸಂಘಟನೆಯವರು ಮಾಡುತ್ತಿದ್ದಾರೆ. ಪ್ರಾರ್ಥನೆ ಮಾಡಲು ಯಾರಿಂದ ಅನುಮತಿ ಪಡೆಯಬೇಕು ಎಂದು ತಿಳಿಸಿಕೊಡಿ ಹಾಗೆ ಹ್ಯಾಂಡ್ ಪೋಸ್ಟ್ ಸಮೀಪ ದಿನಸಿ ಅಂಗಡಿಯಲ್ಲಿ ಮದ್ಯ ಮಾರಾಟ ಜಾಸ್ತಿ ಆಗಿದೆ ತಕ್ಷಣಕ್ಕೆ ಅದನ್ನು ತಡೆಯಲು ಇಲಾಖೆ ಕ್ರಮ ಕೈಗೊಳಲು ಮನವಿ ಮಾಡಿದರು.
ಬಿಎಸ್ಪಿ ಮುಖಂಡ ಲೋಕವಳ್ಳಿ ರಮೇಶ್ ಮಾತನಾಡಿ  ಅಟ್ರಾಸಿಟಿ ಕೇಸ್ ಬಂದಾಗ ಅದನ್ನು ಕೂಲಂಕುಷವಾಗಿ ಅಧಿಕಾರಿಗಳು ಪರಿಶೀಲಿಸಿ ಸತ್ಯಾಸತ್ಯತೆ ಇದ್ದಾರೆ ಕೇಸ್ ದಾಖಲಿಸಿ ಸುಮ್ ಸುಮ್ ನೇ ಕೇಸ್ ಮಾಡುವುದು ಸರಿಯಲ್ಲ ಹಾಗೆ ಜಿಲ್ಲೆಯ ದೌರ್ಜನ್ಯ ಸಮಿತಿಗೆ ಇಲ್ಲಿಂದ ನಿವೃತ ಅಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಆದರೆ ಅವರಿಗೆ ಬಡವರ ಬಗ್ಗೆ ಹೆಚ್ಚು ತಿಳಿಯದೆ ಇರುವುದರಿಂದ ಬೇರೆಯವರನ್ನು ಸಭೆಗೆ ಕರೆದರೆ ಒಂದಷ್ಟು ಸ್ಥಳೀಯ ಸಮಸ್ಯೆ ಬಗ್ಗೆ ತಿಳಿಸಬಹುದು ಎಂದರು.
ಪೊಲೀಸ್ ವರಿಷ್ಟಧಿಕಾರಿಗಳು ಉತ್ತರಿಸುತ್ತ ಚರ್ಚಿನಲ್ಲಿ ಪ್ರಾರ್ಥನೆ ಮಾಡಲು ಅಡ್ಡಿಯಾಗುವುದಿಲ್ಲ ಆದರೆ ಸ್ಥಳೀಯ ಸಂಸ್ಥೆಯಿಂದ ಅನುಮತಿ ಪಡೆದಿರಬೇಕು ಅನುಮತಿ ಪಡೆಯದೆ ಮನೆಯಲ್ಲಿ ಬೇರೆಯವರನ್ನು ಸೇರಿಸಿಕೊಂಡು ಮಾಡಿದಾಗ ಕಾನೂನಾತ್ಮಕವಾಗಿ ತಪ್ಪಾಗುತ್ತದೆ ಹಾಗೆ ಪ್ರತಿ ಗ್ರಾಮದಲ್ಲೂ ಮದ್ಯ ಮಾರಾಟ ಹೆಚ್ಚಾಗುತ್ತಿರುವುದನ್ನು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುತ್ತದೆ ಅಲ್ಲದೆ ಸ್ಮಶಾನ ಭೂಮಿಗೆ ಹೋಗಲು ರಸ್ತೆ ಸಮಸ್ಯೆ ಭೂಮಿ ಒತ್ತುವರಿಯ ಬಗ್ಗೆ ಕಂದಾಯ ಇಲಾಖೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳುವುದು ಅದಕ್ಕೆ ಬೇಕಾಗುವ ಸಹಕಾರವನ್ನು ಪೊಲೀಸ್ ಇಲಾಖೆ ಸದಾ ನೀಡುತ್ತದೆ ಎಂದ ಅವರು ಬಂದೂಕು ತರಬೇತಿಯನ್ನು ಜಿಲ್ಲಾ ಕೇಂದ್ರದಲ್ಲಿ ಆಯೋಜನೆ ಮಾಡುತ್ತೇವೆ ಅದಕ್ಕೆ ಯಾರು ಅರ್ಹರಿದ್ದಾರೆ ಅವರನ್ನು ಸಮುದಾಯದವರೇ ಪಟ್ಟಿ ಮಾಡಿ ಕಳಿಸಿಕೊಡಿ ಎಂದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಶೈಲೆಂದ್ರ , ತಹಶೀಲ್ದಾರ್ ಅಶ್ವಿನಿ, ಸಮಾಜ ಕಲ್ಯಾಣ ಅಧಿಕಾರಿ ಸೋಮಶೇಖರ್, ಪಿಡಬ್ಲ್ಯೂಡಿ ಅಧಿಕಾರಿ ಚೆನ್ನಕೇಶವ, ವೃತ್ತ ನಿರೀಕ್ಷಕ ರಾಜಶೇಖರ್, ಪಿ ಎಸ್ ಐ ಶ್ರೀನಾಥ್ ರೆಡ್ಡಿ, ದಿಲೀಪ್, ಪ ಪಂ ಉಪಾಧ್ಯಕ್ಷ ರಮೇಶ್,  ಮುತ್ತಪ್ಪ, ಎಂ ಎಸ್ ಅನಂತ್, ಶಂಕರ್ ಭೇಟಿಗೆರೆ ಮುಂತಾದವರು ಇದ್ದರು

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ