ಮೂಡಿಗೆರೆ ತಾಲ್ಲೂಕಿನ ಬಿ.ಹೊಸಹಳ್ಳಿ ಸಹಕಾರಿ ವ್ಯವಸಾಯ ಬ್ಯಾಂಕ್ ನಿಯಮಿತ ಫಲ್ಗುಣಿ ಇದರ ವಾರ್ಷಿಕ ಮಹಾಸಭೆ ಆಗಸ್ಟ್ 24ರ ಭಾನುವಾರ ನೆರವೇರಿತು. ಸಂಘವು ವರದಿ ಸಾಲಿನಲ್ಲಿ ರೂ. 53.52 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ 10 ಡೆವಿಡೆಂಟ್ ಘೋಷಣೆ ಮಾಡಿದೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಿ.ಎಂ. ರಮೇಶ್ ಮಾತನಾಡಿ : 1976ನೇ ಅಕ್ಟೋಬರ್ 5 ರಂದು ಸ್ಥಾಪನೆಗೊಂಡ ನಮ್ಮ ಸಂಘದ ವ್ಯಾಪ್ತಿಯಲ್ಲಿ 10 ಗ್ರಾಮಗಳನ್ನು, 2982 ಜನ ಸದಸ್ಯರು ಸದಸ್ಯತ್ವವನ್ನು ಹೊಂದಿರುತ್ತಾರೆ.
ಸಂಘದ ವರದಿ ಸಾಲಿನಲ್ಲಿ ರೂ 976.84 ಲಕ್ಷಗಳನ್ನು ಜಿಲ್ಲಾ ಬ್ಯಾಂಕ್ ಮತ್ತು ಇತರೆ ಸಂಘ ಸಂಸ್ಥೆಗಳಲ್ಲಿ ಷೇರು ಮತ್ತು ನಿಧಿಗಳು ಹಾಗೂ ಠೇವಣಿಗಳ ರೂಪದಲ್ಲಿ ಬಂಡವಳಿಸಿರುತ್ತದೆ. ಸಂಘದ ವರದಿ ಸಾಲಿನಲ್ಲಿ 782 ಸದಸ್ಯರಿಗೆ ಕೆ.ಸಿ.ಸಿ ಸಾಲವಾಗಿ ರೂ.1562.25 ಲಕ್ಷ ಮತ್ತು ಸ್ವಂತ ಬಂಡವಾಳ ಕೆ.ಸಿ.ಸಿ ಸಾಲವಾಗಿ 61 ಸದಸ್ಯರಿಗೆ 244.97 ಲಕ್ಷ ಸಾಲ ನೀಡಿದ್ದು ರೂ 1786.95 ಲಕ್ಷ ಸಾಲವು ಚಾಲ್ತಿಯಲ್ಲಿರುತ್ತದೆ. 7 ಸದಸ್ಯರಿಂದ ರೂ 20.27 ಲಕ್ಷ ಸುಸ್ತಿಯಾಗಿರುತ್ತದೆ.
ವರದಿ ಸಾಲಿನಲ್ಲಿ ಸಂಘವು 808.03 ಲಕ್ಷ ರೂಗಳನ್ನು, ಸದಸ್ಯರಿಗೆ, ಗೊಬ್ಬರ ಖರೀದಿ ಸಾಲ, ವ್ಯಾಪಾರ ಸಾಲ, ವಾಹನ ಖರೀದಿ ಸಾಲ, ಸ್ವ-ಸಹಾಯ ಸಂಘಗಳ ಲಿಂಕೇಜ್ ಸಾಲ, ಠೇವಣಿ ಆಧಾರಸಾಲ ಮತ್ತು ಸಿಬ್ಬಂದಿ ಸಾಲವಾಗಿ ವಿತರಣೆ ಮಾಡಿದ್ದು, ಇದರಲ್ಲಿ 11 ಜನರಿಂದ 8.08ಲಕ್ಷ ರೂ ಸುಸ್ತಿಯಾಗಿದ್ದು 799.95 ಲಕ್ಷ ರೂ ಸಾಲವು ಚಾಲ್ತಿಯಲ್ಲಿರುತ್ತದೆ ಎಂದರು.
ಸಂಘವು ವರದಿ ಸಾಲಿಗೆ ವ್ಯಾಪಾರ ಲಾಭವಾಗಿ ರೂ 30.10 ಲಕ್ಷ ಲಾಭ ಗಳಿಸಿರುತ್ತದೆ ಹಾಗು ಸಂಘದ ಒಟ್ಟು ನಿವ್ವಳ ಲಾಭ ರೂ.53.52 ಲಕ್ಷಗಳಾಗಿರುತ್ತದೆ. ಸಂಘವು ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿರುವುದಕ್ಕೆ ಸಂಘದ ಸದಸ್ಯರು ಪಾಲ್ಗೋಳ್ಳುವಿಕೆ, ಆಡಳಿತ ಮಂಡಳಿಯವರ ಬದ್ಧತೆ, ಸಿಇಓ ಮತ್ತು ಸಿಬ್ಬಂದಿ ವರ್ಗದವರ ಕರ್ತವ್ಯ ನಿಷ್ಠೆ ಪ್ರಮುಖವಾಗಿದೆ ಎಂದರು
ಸದಸ್ಯರುಗಳು ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರದ ಬಡ್ಡಿ ರಿಯಾಯಿತಿ ಯೋಜನೆಯನ್ನು ಸದುಪಯೋಗಿಸಿಕೊಂಡು ಸಕಾಲದಲ್ಲಿ ಸಾಲವನ್ನು ಮರುಪಾವತಿಸಿ ಸಂಘವು ಲಾಭಗಳಿಸಿ ಉತ್ತಮ ಸೇವೆಯನ್ನು ಪಡೆಯಬೇಕೆಂದು ಸಲಹೆ ನೀಡಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಹೆಚ್.ಕೆ. ಸಾವಿತ್ರಿ ಉಮೇಶ್, ಓ.ಜಿ. ರವಿ, ಕೆ.ಬಿ.ಗೋಪಾಲಗೌಡ, ಬಿ.ಎಸ್. ರಕ್ಷಿತ್, ಹೆಚ್.ಟಿ. ಪ್ರಸನ್ನ, ಹೆಚ್.ಎಂ. ಅರ್ಜುನ್, ಹೆಚ್.ವಿ. ಅಮೋಘ್, ಶ್ರೀಮತಿ ರಚನಾ ಅರುಣ್, ಶೇಖರ್ ಪೂಜಾರಿ, ಬಿ.ಎಂ. ರಮೇಶ್, ಎಸ್.ಸುಂದರ, ವೃತ್ತಿಪರ ನಿರ್ದೇಶಕರಾದ ಬಿ.ಎಲ್. ಉಪೇಂದ್ರ, ಹೆಚ್.ಎಂ. ದ್ಯಾವಣ್ಣಗೌಡ, ಡಿ.ಸಿ.ಸಿ.ಬ್ಯಾಂಕ್ ಮೇಲ್ವಿಚಾರಕರಾದ ಯು.ಸಿ. ಪ್ರಯಾಗ್ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ವೇಣುಗೋಪಾಲ್ ವಾರ್ಷಿಕ ವರದಿ ಮಂಡಿಸಿದರು. ಸಂಘದ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಸಭೆಯಲ್ಲಿ ಭಾಗವಹಿಸಿದ್ದರು.



