29Mudigere1A_copy_1024x386

 

 

ಮುಂದಿನ ಡಿಸೆಂಬರ್ ಅಂತ್ಯದೊಳಗೆ ರಾಜ್ಯದ ಎಲ್ಲಾ ಗ್ರಾಮಗಳನ್ನು ಪೋಡಿ ಮುಕ್ತ ಗ್ರಾಮಗಳನ್ನಾಗಿ ಮಾಡುವ ಬಗ್ಗೆ ಕಂದಾಯ ಸಚಿವರು ಘೋಷಣೆ ಮಾಡಿದ್ದಾರೆ. ಆದರೆ ಮೂಡಿಗೆರೆ ತಾಲೂಕಿನಲ್ಲಿ ಸಾವಿರಾರು ಪೋಡಿ ಪ್ರಕರಣಗಳನ್ನು ಇತ್ಯರ್ಥಪಡಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಮಂಜುನಾಥಗೌಡ ದೂರಿದರು.

ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ವ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ರಾಜ್ಯದಲ್ಲಿ 1ಲಕ್ಷಕ್ಕೂ ಅಧಿಕ ರೈತರ ಪೋಡಿ ಪ್ರಕರಣಗಳು ಬಾಕಿ ಉಳಿದಿವೆ. ಇದನ್ನೆಲ್ಲ ಗಮನಿಸಿದ ಕಂದಾಯ ಆಯುಕ್ತ ಮುನಿಶಾ ಮುದ್ದೀಲ್ ಅವರು 2018ರಲ್ಲಿ ಪೋಡಿ ತಕರಾರು ಪ್ರಕರಣಗಳನ್ನು ಬಗೆಹರಿಸುವ ವಿಧಾನ ವಿವರಿಸಿ 22 ಪುಟದ ಸುತ್ತೋಲೆ ಹೊರಡಿಸಿ ವಿವರಿಸಿದ್ದಾರೆ. ಆದರೆ ಅಧಿಕಾರಿಗಳು ಸುತ್ತೋಲೆಯಂತೆ ಕಾರ್ಯನಿರ್ವಹಿಸಿಲ್ಲ.

ನಂತರ 2025ರಲ್ಲಿ ತುರ್ತಾಗಿ ಪೋಡಿ ಮಾಡಿ ವರದಿ ನೀಡಲು ತಹಸೀಲ್ದಾರರು ಸರ್ವೆ ಇಲಾಖೆಗೆ ಆದೇಶಿಸಿದ್ದರು. ಆದರೆ ಕಳೆದ 6 ತಿಂಗಳ ಹಿಂದೆ ಸರ್ವೇಯರ್ ಹಾಗೂ ಮೇಲ್ವಿಚಾರಕರು ಸ್ಥಳಕ್ಕೆ ಬಂದಿದ್ದು, ರೈತರ ಹಿಸ್ಸೆಗಳನ್ನು ಅಳತೆ ಮಾಡಿ ನಕ್ಷೆ ತಯಾರಿಸುವ ಬದಲು, ಅನುಭವದಂತೆ ಅಳತೆ ಮಾಡಿ ನಕ್ಷೆ ತಯಾರಿಸಿ ಸರಕಾರಕ್ಕೆ ತಪ್ಪು ವರದಿ ನೀಡಿದ್ದಾರೆ. ಸರಕಾರದ ಸುತ್ತೋಲೆಯಲ್ಲಿ ಅನುಭವದಂತೆ ಅಳತೆ ಮಾಡಿ ನಕ್ಷೆ ತಯಾರಿಸಲು ಅವಕಾಶವಿಲ್ಲವೆಂದು ಹೇಳಿದರು.

ಪೋಡಿ ಪ್ರಕ್ರಿಯೆಯಲ್ಲಿ ಪ್ರತಿ ರೈತರ ಹಿಸ್ಸೆ, ಪಹಣಿ ದಾಖಲೆಗೆ ಅನುಸಾರ ಅಳತೆ ಮಾಡಿ ನಕ್ಷೆ ತಯಾರಿಸಲು ಭೂ ಕಂದಾಯ ನಿಯಮ 50 ರಲ್ಲಿ ಸ್ಪಷ್ಟಪಡಿಸಿದೆ. ಆದರೂ ಸರಕಾರದ ನಿರ್ದೇಶನದಂತೆ ಪೋಡಿ ಮುಕ್ತ ಗ್ರಾಮವನ್ನಾಗಿಸಲು ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ. ಬದಲಾಗಿ ಸರ್ವೆ ಅಧಿಕಾರಿಗಳು ಸರಕಾರ ನಿಯಮ ಗಾಳಿಗೆ ತೂರಿ ಅನುಭವದಂತೆ ನಕ್ಷೆ ತಯಾರಿಸುವ ಮೂಲಕ ಅಕ್ಕಪಕ್ಕದ ತೋಟದ ಮಾಲೀಕರೊಂದಿಗೆ ಘರ್ಷಣೆ ಉಂಟು ಮಾಡುವ ಹಾಗೂ ಕೋರ್ಟ್, ಕಚೇರಿಗೆ ಅಲೆದಾಡುವಂತೆ ಮಾಡುತ್ತಿದ್ದಾರೆ.

ಇದನ್ನೆಲ್ಲ ಪ್ರಶ್ನಿಸಲು ಹಾಗೂ ಪರಿಹಾರ ಕಂಡುಕೊಳ್ಳಲು ಅ.3ರಂದು ರೈತರು ನೇಗಿಲ ಹೊತ್ತು, ಹೊಲಕ್ಕೆ ಹೋಗದೆ ಸರ್ವೇ ಇಲಾಖೆಗೆ ತೆರಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ರೈತ ಮುಖಂಡರಾದ ವನಶ್ರೀಗೌಡ, ರಘು ಬಿಳ್ಳೂರು, ಚಂದ್ರೇಗೌಡ ಕೆಲ್ಲೂರು, ರಾಜ್‍ಮೋಹನ್, ಬಿ.ಸಿ.ರವಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ