2Mudigere1A (2)

 

 

ಎಲ್ಲಾ ಮಹನೀಯರ ಆದರ್ಶವನ್ನು ಪ್ರತಿಯೊಬ್ಬರೂ ಜೀವನದುದ್ದಕ್ಕೂ ಅಳವಡಿಸಿಕೊಂಡು ಬಾಳಿದಾಗ ಮಾತ್ರ ಸಾಮರಸ್ಯದ ಸಮಾಜ ಉಂಟಾಗಲು ಸಾಧ್ಯವಿದೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.

ಅವರು ಗುರುವಾರ ಮೂಡಿಗೆರೆ ಪಟ್ಟಣದ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಹಾಗೂ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಾನವನ ಉಡುಪು ಸ್ವಚ್ಛತೆಯಿಂದಿದ್ದರೆ ಸಾಲದು. ಬದಲಾಗಿ ಮನಸ್ಸು ಸ್ವಚ್ಛವಾಗಿರಬೇಕು. ಈ ಸಮಾಜದಲ್ಲಿ ಎಲ್ಲಾ ಧರ್ಮದ ಜನರು ಸತ್ಯದ ಹಾದಿಯಲ್ಲಿ ನಡೆಯುವಂತಾಗಬೇಕು. ಸಹನೆ, ತಾಳ್ಮೆ, ಪ್ರೀತಿಯಿಂದ ಎಲ್ಲರೊಂದಿಗೆ ಬೆರೆಯಬೇಕು. ಆಗ ಈ ಸಮಾಜ ಸಾಮರಸ್ಯದ ನೆಲೆಯಲ್ಲಿ ಸಾಗುತ್ತದೆ ಎಂದು ಹೇಳಿದರು.

ತಾನು ವಿದೇಶಗಳಲ್ಲಿ ಪ್ರವಾಸ ಮಾಡಿದಾಗ, ಅಲ್ಲಿನ ಹಾಗೂ ಇಲ್ಲಿನ ವ್ಯವಸ್ಥೆ ಭಿನ್ನವಾಗಿದೆ. ನಮ್ಮ ದೇಶದ ಜನರು ಇಂದಿಗೂ ಸಂಕಷ್ಟದಲ್ಲಿದ್ದಾರೆ. ಸಮಾನತೆ ಹಾಗೂ ಅರ್ಥಿಕವಾಗಿ ದೂರವಿದ್ದಾರೆ. ಹಾಗಾಗಿ ತಾನು ಶಾಸಕಿಯಾದಾಗಿನಿಂದ ಈ ಸಮಾಜ ಶಾಂತಿಯಿಂದ ಸಾಗುವಂತೆ ಎಲ್ಲಾ ಜಾತಿ, ಧರ್ಮದ ಜನರನ್ನು ಒಟ್ಟಿಗೆ ಕೊಂಡೊಯ್ಯುವ ಸಂಕಲ್ಪದೊಂದಿಗೆ ಶ್ರಮಿಸುತ್ತಿದ್ದೇನೆ. ಇಂದು ಮಹಾತ್ಮಾ ಗಾಂಧೀಜಿ ಅವರ ಜನ್ಮ ದಿನದ ಜತೆಗೆ ವಿಜಯದಶಮಿ ಹಬ್ಬ ಕೂಡ ಒಟ್ಟಿಗೆ ಬಂದಿದೆ. ಎಲ್ಲರ ಮನದಲ್ಲಿರುವ ದುಷ್ಟತನವನ್ನು ಹೋಗಲಾಡಿಸಿ ಶಾಂತಿಯಿಂದ ಬದುಕು ಸಾಗಿಸುವಂತಹ ವಾತಾವರಣ ನಿರ್ಮಾಣವಾಗಬೇಕಿದೆ ಎಂದು ಹೇಳಿದರು.

ತಹಸೀಲ್ದಾರ್ ಎಸ್.ಅಶ್ವಿನಿ, ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನ ಅರ್ಚಕ ಮಹಬಲ ಕಾರಂತ್, ಮೂಡಿಗೆರೆ ಸಂತ ಆಂತೋನಿ ಚರ್ಚ್ ಧರ್ಮಗುರು ಸುನೀಲ್ ಗೋಡ್ರಿಗಸ್, ಚಕಮಕ್ಕಿ ಆಶ್ರಮ ಶಾಲೆ ಧರ್ಮಗುರು ಸಿನಾನ್ ಪೈಜಿ ಖಲಂದರ್ ಮಾತನಾಡಿದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ