jayaram2

 

 

ಮೂಡಿಗೆರೆ  ತಾಲ್ಲೂಕು ಭೂಮಾಪನಾ ಇಲಾಖೆಯಲ್ಲಿ 2 ವರ್ಷಗಳ ಹಿಂದೆ ಇದ್ದ ಗ್ರಾಮವೊಂದರ ಪ್ಲಾಂಟೇಶನ್ ಪ್ರತಿಗಳು ಮತ್ತು ಆಕಾರ್ ಬಾಂದ್‍ಗಳು ಕಳುವಾಗಿದೆ ಎಂದು ಅಧಿಕಾರಿಗಳು ತಿಳಿಸುತ್ತಿದ್ದು ರೈತರು ಕಂಗಲಾಗಿದ್ದಾರೆ.

ಈ ಸಂಬಂಧ ರೈತರು ಮೂಡಿಗೆರೆ ತಾಲ್ಲೂಕು ಕಛೇರಿ ಎದುರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಈ ಸಂದರ್ಭದಲ್ಲಿ ತಮಗಾಗಿರುವ ಅನ್ಯಾಯವನ್ನು ಮೂಡಿಗೆರೆ ತಾಲ್ಲೂಕು ಜೋಗಣ್ಣಕೆರೆ ಅಬಚೂರು ಗ್ರಾಮದ ರೈತರ ಎ.ಆರ್. ಜಯರಾಮೇಗೌಡ ಮಾಧ್ಯಮಕ್ಕೆ ವಿವರಿಸಿದ್ದಾರೆ.

ಕಸಬಾ ಹೋಬಳಿ ಜೋಗಣ್ಣನಕೆರೆ ಗ್ರಾಮದ ಸ.ನಂ 65/2 ರಲ್ಲಿ ತಾನು ಜಮೀನಿನ ಖಾತೆ ಹೊಂದಿದ್ದು, ಹೊಸದಾಗಿ ಪೋಡ್ ಒಟ್ಟುಗೂಡಿಸಲು ಪ್ಲಾಂಟೇಶನ್ ಪ್ರತಿ ಮತ್ತು ಆಖಾರ ಬಾಂದ್ ದಾಖಲೆಗಳನ್ನು ಒದಗಿಸಿ ಕೊಡುವಂತೆ 2021ರ ಸೆ.24 ರಂದು ಡಿಡಿಎಲ್ ಆರ್ ಅವರು ಮೂಡಿಗೆರೆ ಭೂದಾಖಲೆಗಳ ಸಹಾಯಕ ಉಪನಿರ್ದೇಶಕರಿಗೆ ಆದೇಶ ನೀಡಿದ್ದು, ಸಕಾರದ ನಿಯಮಾನುಸಾರ ದಾಖಲೆಯ ಬಾಬ್ತು ಹಣವನ್ನು ಜಮಾ ಮಾಡಿದ್ದೆ.

ಆದರೇ ಭೂಮಾಪಕರು ದಾಖಲೆಗಳನ್ನು ಕೊಡದೇ ದಿನ ದೂಡುತ್ತಿದ್ದು. ವರ್ಷಗಟ್ಟಲೆ ಕಚೇರಿಗೆ ಅಲೆದಾಡಿಸುವುದರೊಮದಿಗೆ ಈಗ ಜೋಗಣ್ಣನಕೆರೆಯ ದಾಖಲೆಗಳು ಕಳ್ಳತನವಾಗಿದೆ ಎಂದು ಮೌಖಿಕವಾಗಿ ತಿಳಿಸುತ್ತಿದ್ದಾರೆ ಎಂದು ರೈತ ಎ.ಆರ್.ಜಯರಾಮೇಗೌಡರು ಆರೋಪಿಸಿದ್ದಾರೆ.

ದಾಖಲೆಗಳು ಕಳುವಾಗಿರುವ ಬಗ್ಗೆ ಬರಹದಲ್ಲಿ ನೀಡದೆ ಬರಿ ಮೌಖಿಕವಾಗಿ ಹೇಳುತ್ತಿರುವ ಅಧಿಕಾರಿ ದೀಪಕ್ ಅವರು ದಾಖಲೆ ಗಳನ್ನು ನಾಶ ಪಡಿಸಿರಬಹುದೆಂಬ ಆತಂಕವನ್ನು ವ್ಯಕ್ತ ಪಡಿಸಿದ್ದಾರೆ. ಪತ್ರಿಕೆಗೆ ಮಾಹಿತಿ ನೀಡಿದ ಅವರು. ಮೇಲಾಧಿಕಾರಿಗಳ ಆದೇಶವನ್ನು ಉಲ್ಲಂಘಿಸಿರುವ ದೀಪಕ್ ಅವರ ವಿರುದ್ದ ಕ್ರಮ ಜರುಗಿಸುವುದರೊಂದಿಗೆ ದಾಖಲೆಗಳನ್ನು ಕೊಡಿಸುವಂತೆ ಲೋಕಾಯುಕ್ತರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.

ಜೊತೆಗೆ ತಮ್ಮ ಜಮೀನಿಗೆ ಸಂಬಂಧಿಸಿದಂತೆ ಇದ್ದ ಖರಾಬು ವಿಸ್ತೀರ್ಣ 3 ಗುಂಟೆ ಇದ್ದದ್ದನ್ನು 11 ಗುಂಟೆ ಖರಾಬು ಎಂದು ಮಾಡಿದ್ದಾರೆ. ಇದು ಕಾನೂನು ಬಾಹೀರವಾಗಿದ್ದು, ಖರಾಬು ವಿಸ್ತೀರ್ಣವನ್ನು ಬದಲು ಮಾಡುವ ಅಧಿಕಾರವಿಲ್ಲದಿದ್ದರೂ ಯಾವುದೋ ಆಮೀಷಕ್ಕೆ ಒಳಗಾಗಿ ಖರಾಬು ವಿಸ್ತೀರ್ಣವನ್ನು ಬದಲಾಯಿಸಿದ್ದಾರೆ. ಖರಾಬು ವಿಸ್ತೀರ್ಣವನ್ನು ಅಕ್ರಮವಾಗಿ ಬದಲಾಯಿಸಿರುವ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ತಮಗಾಗಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ