ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಸೇರಿ ಐವರು ಹಿಂದೂ ಕಾರ್ಯಕರ್ತರ ವಿರುದ್ಧ ಪೊಲೀಸರು ಸ್ವಯಂಪ್ರೇರಿತಾ ದೂರು ದಾಖಲಿಸಿರುವ ಘಟನೆ ನಡೆದಿದೆ.
ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರಾದ ಸಂತೋಷ್, ಶಾಮ್, ಅಮಿತ್, ಪುನಿತ್, ದಿಲಿಪ್ ಶೆಟ್ಟಿ ಇವರುಗಳ ವಿರುದ್ಧ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮೋಟೋ ಕೇಸ್ ದಾಖಲಿಸಿಕೊಂಡ ಚಿಕ್ಕಮಗಳೂರು ನಗರ ಪೋಲೀಸರು.
ಗೋ ಹತ್ಯೆ ಖಂಡಿಸಿ ಬುಧವಾರ ಚಿಕ್ಕಮಗಳೂರು ನಗರದಲ್ಲಿ ಹಿಂದೂ ಕಾರ್ಯಕರ್ತರು ನಡೆಸಿದ್ದ ಬೃಹತ್ ಪ್ರತಿಭಟನೆ ವೇಳೆ ಖಡ್ಗದ ಚಿತ್ರ ಬಳಸಿ
ಬಲಿಗೆ ಹಸಿದಿಹ ಶಸ್ತ್ರ ಹಿಡಿಯುತ ಗೋ ಹಂತಕರೆದೆಯ ಸೀಳಿರಿ
ಗೋಮಾತೆ ರಕ್ಷಣೆಗೆ ಹಿಂದುಗಳೇ ಒಂದಾಗಿ ಬನ್ನಿ
ಎಂದು ಪೋಸ್ಟ್ ಹಾಕಿದ್ದರು.
ಪ್ರತಿಭಟನೆಗೆ ಕರೆ ನೀಡಿದಾಗ ಹಾಕಲಾಗಿದ್ದ ಈ ಪೋಸ್ಟ್ ಪ್ರಚೋದನಕಾರಿಯಾಗಿದೆ ಎಂದು ಆರೋಪಿಸಿ ಚಿಕ್ಕಮಗಳೂರು ನಗರ ಠಾಣಾ ಪೊಲೀಸರಿಂದ ಸುಮೋಟೋ ಕೇಸ್ ದಾಖಲಿಸಲಾಗಿದೆ.



