ತನಗೆ ಸಿಕ್ಕಿರುವ ವಿಧಾನಪರಿಷತ್ ಸದಸ್ಯತ್ವ ಸ್ಥಾನದಿಂದ ಚಿಕ್ಕಮಗಳೂರು ಜಿಲ್ಲೆಯ ಜನರ ಜ್ವಲಂತ ಸಮಸ್ಯೆಗಳ ಬಗ್ಗೆ ಸದನದಲ್ಲಿ ಧ್ವನಿ ಎತ್ತುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯೆ ಡಾ. ಆರತಿಕೃಷ್ಣ ಹೇಳಿದರು.
ಅವರು ಗುರುವಾರ ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಗ್ರಾಮದಲ್ಲಿ ಮಾಜಿ ಸಂಸದ ಡಿ.ಎಂ.ಪುಟ್ಟೇಗೌಡ ಅವರ ಮನೆಯಲ್ಲಿ ಡಿ.ಎಂ.ಪುಟ್ಟೇಗೌಡರ ಕುಟುಂಬ ಮತ್ತು ಡಿ.ಎಂ. ಪುಟ್ಟೇಗೌಡರ ಅಭಿಮಾನಿ ಬಳಗದ ಕಾಂಗ್ರೇಸ್ ಕಾರ್ಯಕರ್ತರು ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿ ಸ್ವೀಕರಿಸಿ ಮಾತನಾಡಿದರು.
ಸಾಧನೆ ಮಾತನಾಗಬೇಕೆ ಹೊರತು, ಮಾತು ಸಾಧನೆಯಾಗಬಾರದು. ಈ ನಿಟ್ಟಿನಿಲ್ಲಿ ಜನಪ್ರತಿನಿಧಿಗಳು ಕಾರ್ಯ ನಿರ್ವಹಿಸಿದರೆ ಜನರ ಸಮಸ್ಯೆಗಳು ನಿವಾರಣೆಯಾಗಲು ಸಾಧ್ಯವಿದೆ. ನನಗೆ ವಿವಾಹವಾದ ತಕ್ಷಣ ವಿವಿಧ ದೇಶಗಳ ರಾಯಬಾರಿ ಕಛೇರಿಯಲ್ಲಿ ಕಾರ್ಯನಿರ್ವಹಿಸುವ ಅವಕಾಶ ದೊರೆತ್ತದ್ದರಿಂದ ಜಿಲ್ಲೆಯ ಜನರೊಂದಿಗೆ ಹೆಚ್ಚು ಒಡನಾಟಕ್ಕೆ ಅವಕಾಶ ಆಗಿರಲಿಲ್ಲ. ಕಳೆದ 10 ವರ್ಷಗಳಿಂದ ನಾನು ರಾಯಬಾರಿ ಕಛೇರಿ ಹುದ್ದೆ ತ್ಯಜಿಸಿ ಕಾಂಗ್ರೇಸ್ ಪಕ್ಷದಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಕೃಷ್ಣಾ ಫೌಂಡೇಷನ್ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ. ರಾಜ್ಯ ಸರ್ಕಾರ ನನಗೆ ಅನಿವಾಸಿ ಭಾರತಿಯ ಸಮಿತಿ ಉಪಾಧ್ಯಕ್ಷ ಸ್ಥಾನ ನೀಡಿತ್ತು, ಹಾಗೆಯೇ ಕಾಂಗ್ರೇಸ್ ಪಕ್ಷವೂ ಸಹ ನನಗೆ ಅನಿವಾಸಿ ಭಾರತೀಯ ಸಂಘಟನೆಯ ಜವಾಬ್ದಾರಿ ನೀಡಿದ್ದು ಈ ಜವಾಬ್ದಾರಿಗಳಿಂದ ದೇಶದ ಜನರಿಗೆ ಮತ್ತು ಪಕ್ಷಕ್ಕೆ ನಾನು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ ಎಂದರು.

ಎಂಎಲ್ಸಿ ಸ್ಥಾನದ ಮೂಲಕ ನನ್ನ ತಂದೆ ಮಾಜಿ ಶಾಸಕರಾದ ಬೇಗಾನೆ ರಾಮಯ್ಯನವರು ಕಂಡ ಕನಸು ಈಡೇರಿಸಲು ಇದೀಗ ಒಂದು ಅವಕಾಶ ಸಿಕ್ಕಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಂಡು ಮುಂದಿನ ದಿನದಲ್ಲಿ ಎಲ್ಲಾ ಸಂಘಟನೆ ಹಾಗೂ ಪಕ್ಷದ ಮುಖಂಡರೊಂದಿಗೆ ನಿರಂತರ ಸಂಪರ್ಕ ಮಾಡುವ ಮೂಲಕ ಜಿಲ್ಲೆಯಲ್ಲಿರುವ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಶ್ರಮಿಸುವುದಾಗಿ ತಿಳಿಸಿದರು.
ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ಆರತಿ ಕೃಷ್ಣ ಅವರ ತಂದೆ ಬೇಗಾನೆ ರಾಮಯ್ಯ ಅವರು ಮಂತ್ರಿಯಾಗಿದ್ದಾಗ ಜಿಲ್ಲೆಯಾಧ್ಯಂತ ಹಳ್ಳಿ ಹಳ್ಳಿಗಳಲ್ಲಿ ಕುಡಿಯುವ ನೀರು ಒದಗಿಸಿದ್ದರು. ಇದರಿಂದ ಅವರು ಬೋರ್‍ವೆಲ್ ರಾಮಯ್ಯ ಎಂದೆ ಹೆಸರುವಾಸಿಯಾಗಿದ್ದರು. ಅವರ ಪುತ್ರಿ ಆರತಿಕೃಷ್ಣ ಅವರಿಗೆ ಎಂಎಲ್‍ಸಿ ಸ್ಥಾನ ದಕ್ಕಿರುವುದು ಶ್ಲಾಘನೀಯ. ಇವರು ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರೊಂದಿಗೆ ನೇರ ಒಡನಾಟ ಹೊಂದಿದ್ದರಿಂದ ಜಿಲ್ಲೆಯಲ್ಲಿ ರೈತರ, ಕಾರ್ಮಿಕರ ಸಮಸ್ಯೆ ಬಗೆಹರಿಸಲು ಸಹಕಾರಿಯಾಗಿದೆ ಎಂದು ಹೇಳಿದರು.
ಕೋಮಾರ್ಕ್ ಮಾಜಿ ಅಧ್ಯಕ್ಷ ಡಿ.ಎಸ್. ರಘು ಅವರು ಜಿಲ್ಲೆಯಲ್ಲಿ ರೈತರು ಎದುರಿಸುತ್ತಿರುವ ಹಲವು ಸಮಸ್ಯೆಗಳ ಬಗ್ಗೆ ಅದರಲ್ಲು ಮುಖ್ಯವಾಗಿ ಅರಣ್ಯ ಮತ್ತು ಕಂದಾಯ ಭೂಮಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಎಂಎಲ್ಸಿ ಆರತಿ ಕೃಷ್ಣಾ ಅವರ ಗಮನ ಸೆಳೆದರು.

ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಮಾಜಿ ಎಂಎಲ್‍ಸಿ ಗಾಯಿತ್ರಿಶಾಂತೇಗೌಡ, ಕಾಂಗ್ರೇಸ್ ಜಿಲ್ಲಾ ವಕ್ತಾರ ಹೆಚ್.ಹೆಚ್. ದೇವರಾಜು, ಬ್ಲಾಕ್ ಕಾಂಗ್ರೇಸ್ ಮಾಜಿ ಅಧ್ಯಕ್ಷ ಎಂ.ಪಿ. ಮನು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಎಸ್. ಜಯರಾಂ ಮುಂತಾದವರು ಮಾತನಾಡಿದರು.

ಮುಖಂಡರಾದ ಓ.ಎಸ್.ಗೋಪಾಲಗೌಡ, ಎಂ.ಎಲ್.ಮೂರ್ತಿ, ಡಾ.ವಿಜಯ್‍ಕುಮಾರ್, ಶಾಂತೇಗೌಡ, ಜಿ.ಹೆಚ್. ಹಾಲಪ್ಪಗೌಡ, ಎಚ್.ಆರ್.ಅಶೋಕ್, ಎ.ಜಿ.ಸುಬ್ರಾಯಗೌಡ,ಕಲ್ಯಾಣ್ ತೇಜಸ್, ಕೆ. ಮಹಮ್ಮದ್, ಸವಿತಾ ರಮೇಶ್, ನಿರ್ಮಲಾ ಮಂಚೇಗೌಡ, ಸಿ.ಕೆ.ಇಬ್ರಾಹಿಂ, ಅಯೂಬ್, ಸುರೇಶ್ ಆಲ್ದೂರು, ಕೆ.ಮಂಚೇಗೌಡ, ಯು.ಎನ್. ಚಂದ್ರೇಗೌಡ, ಕೆ.ಆರ್. ಸುಂದರೇಶ್, ಎಂ. ಎಂ. ಲಕ್ಷ್ಮಣಗೌಡ, ಯು.ಹೆಚ್. ಹೇಮಶೇಖರ್, ರಾಮಚಂದ್ರ ಒಡೆಯಾರ್, ಎಂ.ಎಸ್. ಅನಂತ್, ಮರಗುಂದ ಪ್ರಸನ್ನ, ಈರೇಗೌಡ, ಪವನ್, ದೇವದತ್, ಇರ್ಫಾನ್, ಜೋಹರ್, ನೈಜಿಲ್ ಸಾಲ್ದಾನಾ, ಮನು ಮರೆಬೈಲ್, ಇಮ್ತಿಯಾಜ್, ಸಂಪತ್, ಕುಮಾರ್, ಯು.ಪಿ. ಜಗದೀಶ್, ಲಕ್ಷ್ಮಣ್ ಹುಣಸೆಮಕ್ಕಿ ಮತ್ತಿತರರಿದ್ದರು.

ಕಾರ್ಯಕ್ರಮದಲ್ಲಿ ಕಾಂಗ್ರೇಸ್ ಪಕ್ಷದ ನೂರಾರು ಕಾರ್ಯಕರ್ತರು, ಮುಖಂಡರು, ವಿವಿಧ ಪಕ್ಷಗಳ ಮುಖಂಡರು, ಕೆಂಪೇಗೌಡ ಒಕ್ಕಲಿಗರ ವೇದಿಕೆ ಸದಸ್ಯರು, ಮುಸ್ಲೀಂ ವೆಲ್ಫೆರ್ ಅಸೋಸಿಯೇಷನ್ ಸದಸ್ಯರು ಭಾಗವಹಿಸಿದ್ದರು.

ಆರತಿ ಕೃಷ್ಣಾ ಅವರು ಮಾಜಿ ಸಂಸದ ಡಿ.ಎಂ. ಪುಟ್ಟೇಗೌಡರ ಅವರ ಕ್ಷೇಮ ವಿಚಾರಿಸಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಡಾ. ಅನಂತ ಪದ್ಮನಾಭ್, ಎಂ.ಬಿ. ಪ್ರಭಾಕರ್, ಎಂ.ಪಿ. ಮನು ದಂಪತಿಗಳು ಜೊತೆಗಿದ್ದರು.



