ಮೂಡಿಗೆರೆ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (TAPCMS) ಚುನಾವಣೆಗೆ ತಾಲ್ಲೂಕಿನ ಹದಿನಾಲ್ಕು ಸಹಕಾರ ಸಂಘಗಳ ವತಿಯಿಂದ ಒಟ್ಟು ಐದು ನಿರ್ದೇಶಕರುಗಳ ಆಯ್ಕೆಗೆ ಶನಿವಾರ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಿದರು.
ಬಿಜೆಪಿ ಅಭ್ಯರ್ಥಿಗಳಾಗಿ ಬಣಕಲ್ ಸಹಕಾರ ಸಂಘದಿಂದ ಟಿ.ಎಂ. ಗಜೇಂದ್ರ ಕೊಟ್ಟಿಗೆಹಾರ, ಗೋಣಿಬೀಡು ಸಹಕಾರ ಸಂಘದಿಂದ ವಿ.ಕೆ. ಶಿವೇಗೌಡ ವಾಲೆಕರಟ್ಟಿ, ಮಾಕೋನಹಳ್ಳಿ ಸಹಕಾರ ಸಂಘದಿಂದ ಎಂ.ಎಲ್. ಕಲ್ಲೇಶ್ ಮಾಕೋನಹಳ್ಳಿ ಮತ್ತು ಬಿದರಹಳ್ಳಿ ಸಹಕಾರ ಸಂಘದಿಂದ ಎಂ.ಎಸ್. ಪ್ರಸನ್ನ ಮುಗ್ರಳ್ಳಿ ಹಾಗೆಯೇ ಜೆಡಿಎಸ್ ಅಭ್ಯರ್ಥಿಯಾಗಿ ನಂದೀಪುರ ಸಹಕಾರ ಸಂಘದಿಂದ ಪ್ರಸನ್ನ ಗೌತುವಳ್ಳಿ ಇವರುಗಳು ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್, ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹಳಸೆಶಿವಣ್ಣ, ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವರುಂದ, ಬಿ.ಜೆ.ಪಿ. ಮುಖಂಡ ದೀಪಕ್ ದೊಡ್ಡಯ್ಯ. ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷ ಜಿ.ಕೆ. ದಿವಾಕರ್ ಗೌಡಹಳ್ಳಿ ಸೇರಿದಂತೆ ಬಿಜೆಪಿ ಜೆಡಿಎಸ್ ಪಕ್ಷದ ಹಲವು ಮುಖಂಡರು, ವಿವಿಧ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಉಪಸ್ಥಿತರಿದ್ದರು.
ಬೇರೇ ಯಾರೂ ನಾಮಪತ್ರ ಸಲ್ಲಿಸದ ಕಾರಣ ಈ ಐದೂ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಲಿದ್ದಾರೆ. ಇದರಿಂದ ಮೂಡಿಗೆರೆ ಟಿಎಪಿಸಿಎಂಎಸ್ ನಲ್ಲಿ ಬಿಜೆಪಿ ಜೆಡಿಎಸ್ ಮೇಲುಗೈ ಸಾಧಿಸಿದ್ದು, ಉಳಿದ 8 ಸ್ಥಾನಗಳಿಗೆ ಚುನಾವಣೆ ಪ್ರಕ್ರಿಯೆ ನಡೆಯುತ್ತಿದೆ. ಇದರಲ್ಲಿ ಇನ್ನು 2 ಸ್ಥಾನಗಳನ್ನು ಗಳಿಸಿದರೆ ಬಿಜೆಪಿ ಜೆಡಿಎಸ್ ಮೈತ್ರಿ ಸಂಸ್ಥೆಯಲ್ಲಿ ಬಹುಮತ ಗಳಿಸಲಿದೆ.




