matha yachane

 

 

ಮೂಡಿಗೆರೆ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ ಸಂಘದ ಏಳಿಗೆಗೆ ಪಣತೊಟ್ಟು ಕಣಕ್ಕಿಳಿದಿರುವ ಟಿಎಪಿಸಿಎಂಎಸ್ ಅಭಿವೃದ್ದಿ ವೇದಿಕೆಯ ಅಭ್ಯರ್ಥಿಗಳನ್ನು ಬಹುಮತದಿಂದ ಗೆಲ್ಲಿಸಿ ಎಂದು ಚುನಾವಣೆ ಅಭ್ಯರ್ಥಿ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್ ಹೇಳಿದರು.

ಅವರು ಶುಕ್ರವಾರ ತಾಲ್ಲೂಕಿನ ದಾರದಹಳ್ಳಿ, ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಮ್ಮ ತಂಡದೊಂದಿಗೆ ಮತಯಾಚನೆ ನಡೆಸಿದ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದರು.

ಅಭಿವೃದ್ಧಿ ವೇದಿಕೆಯಿಂದ ಕಣ್ಣಕ್ಕಿಳಿದಿರುವ ರಂಜನ್ ಅಜಿತ್‌ಕುಮಾ‌ರ್, ಎಂ.ಎಂ. ಲಕ್ಷ್ಮಣ ಗೌಡ, ಕೆ.ಪಿ.ಭಾರತಿ, ಎಂ.ಎಸ್.ಅನಂತ್, ಯು.ಎಚ್.ಹೇಮಶೇಖರ್, ಶಾಂತಲಾ ನಾಗೇಶ್, ಸುರೇಶ್, ಎಂ.ಎನ್.ಮನು ಮಾಲಹಳ್ಳಿ ಕಣಕ್ಕಿಳಿದಿದ್ದು, ಎಲ್ಲಾ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ಬಹುಮತದಿಂದ ನಮ್ಮ ತಂಡವನ್ನು ಆಶೀರ್ವದಿಸಬೇಕು ಎಂದು ಕೋರಿದ್ದಾರೆ.

ಸಹಕಾರ ಕ್ಷೇತ್ರದಲ್ಲಿ ರಾಜಕೀಯ ನುಸುಳಬಾರದು, ಇದು ರೈತರಿಗಾಗಿ, ಸಾರ್ವಜನಿಕರ ಸೇವೆಗಾಗಿ ಇರುವ ಕ್ಷೇತ್ರ. ಮೂಡಿಗೆರೆ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ನಾವು ಪಕ್ಷಾತೀತವಾಗಿ ಹೊಂದಾಣಿಕೆ ಮಾಡಿಕೊಂಡು ಉತ್ತಮ ಅನುಭವಿ ತಂಡವನ್ನು ಕಣಕ್ಕಿಳಿಸಿದ್ದೇವೆ. ಈಗಾಗಲೇ ಸಹಕಾರ ಕ್ಷೇತ್ರದಲ್ಲಿ, ವಿವಿಧ ಸಾರ್ವಜನಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರು ನಮ್ಮ ತಂಡದಲ್ಲಿದ್ದಾರೆ.

ನಮ್ಮ ತಂಡ ಅಧಿಕಾರಕ್ಕೆ ಬಂದರೆ ಭವಿಷ್ಯದ ದೃಷ್ಟಿಯಿಂದ ಸಂಘದ ಎಂ.ಜಿ.ರಸ್ತೆಯ ವಾಣಿಜ್ಯಮಳಿಗೆ ಕಟ್ಟಡ ಎರಡು ಅಂತಸ್ತಿಗೆ ಅಂದಾಜು ಮಾಡಿರುವುದನ್ನು ಕೆಡವಿ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣ, ಆಡಳಿತ ಮಂಡಳಿಯ ಕಛೇರಿಯನ್ನು ಈ ಕಟ್ಟಡದ ನಾಲ್ಕನೇ ಅಂತಸ್ತಿಗೆ ವರ್ಗಾಯಿಸಿಕೊಂಡು ಹಳೆಯ ಆಡಳಿತ ಕಚೇರಿ ಮತ್ತು ಅದಕ್ಕೆ ಹೊಂದಿಕೊಂಡಿರುವ ಗೋಡೌನ್ಗಳನ್ನು ಕೆಡವಿ, ಅಗತ್ಯ ಸಂಪನ್ಮೂಲ ಕ್ರೋಢೀಕರಿಸಿ ನಾಲ್ಕು ಅಂತಸ್ತಿನ ಹೊಸಕಟ್ಟಡ ನಿರ್ಮಾಣಮಾಡುವುದು, ರೈತರಿಗೆ ಬೇಕಾದ ಎಲ್ಲ ಸಲಕರಣೆಗಳನ್ನು ಒಂದೇಕಡೆ ಸಿಗುವಂತೆ ವ್ಯವಸ್ಥೆ ಮಾಡುವುದು ಸೇರಿದಂತೆ ಈ ಎಲ್ಲ ಕಾರ್ಯಯೋಜನೆಗಳನ್ನು ಕ್ರಮಬದ್ಧವಾಗಿ ಒಂದು ಯೋಜನೆ ಪರಿಪೂರ್ಣವಾಗಿ ಪೂರ್ಣಗೊಂಡನಂತರ ಮತ್ತೊಂದನ್ನು ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಅಭ್ಯರ್ಥಿಗಳಾದ ಎಂ. ಲಕ್ಷ್ಮಣಗೌಡ, ಎಂ.ಎಸ್. ಅನಂತ, ಕೆ.ಪಿ. ಭಾರತಿ, ಶಾಂತಲಾ ನಾಗೇಶ್, ಸುರೇಶ್, ಎಂ.ಎನ್. ಮನು ಮಾಲಹಳ್ಳಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ