ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮೂಡಿಗೆರೆ ತಾಲೂಕು ಘಟಕದ 7 ನಿರ್ದೇಶಕರ ಸ್ಥಾನಕ್ಕೆ ಶುಕ್ರವಾರ ಪಟ್ಟಣದ ಎಂಎಚ್‍ಪಿಎಸ್ ಶಾಲೆಯಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಿತು. ಶುಕ್ರವಾರ ಸಂಜೆಯೇ ಮತ ಎಣಿಕೆ ಪ್ರಕ್ರಿಯೆ ನಡೆಯಿತು.
5 ಮಂದಿ ಪುರುಷ ವಿಭಾಗದ ಸಾಮಾನ್ಯ ಕ್ಷೇತ್ರದಲ್ಲಿ 9 ಮಂದಿ ಶಿಕ್ಷಕರು ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಅದರಲ್ಲಿ ಎಚ್.ಮಂಜಪ್ಪ 236, ಜಿ.ಎಲ್.ಗಂಗಾಧರಪ್ಪ 199, ಎಂ.ಎಂ.ಪೂರ್ಣೇಶ್ 188, ಬಿ.ಆರ್.ನವೀನ್ 178, ಎಚ್.ಎಲ್.ಮಂಜನಾಯ್ಕ್ 139 ಮತ ಗಳಿಸಿ ಗೆಲುವು ಸಾಧಿಸಿದ್ದಾರೆ.
ಮಹಿಳಾ ಮೀಸಲು ಕ್ಷೇತ್ರದಲ್ಲಿ 2 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 5 ಮಂದಿ ಮಹಿಳಾ ಶಿಕ್ಷಕಿಯರು ಸ್ಪರ್ಧಿಸಿದ್ದು, ಎಂ.ಕೆ.ವೀಣಾ 142, ಎಚ್.ಎಂ.ನಿರಂಜನ 140 ಮತ ಪಡೆದು ಗೆಲುವು ಸಾಧಿಸಿದ್ದಾರೆ.
ಫಲಿತಾಂಶ ಪ್ರಕಟಗೊಂಡ ಬಳಿಕ ಗೆಲುವು ಸಾಧಿಸಿದ ಶಿಕ್ಷಕರು ಹಾಗೂ ಬೆಂಬಲಿಗರು ಸಂಭ್ರಮಿಸಿದರು.





