tdr 1

 

 

ತೀವ್ರ ಕುತೂಹಲ ಕೆರಳಿಸಿದ್ದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರೇ ಗೆಲುವು ಸಾಧಿಸಿದ್ದಾರೆ. ಗಮನಾರ್ಹ ಸಂಗತಿಯೆಂದರೆ ಮರುಮತ ಎಣಿಕೆಯಲ್ಲಿ 2 ಮತ ಹೆಚ್ಚಾಗಿದ್ದು, ರಾಜೇಗೌಡ ಅವರು ಗೆಲುವಿನ ಅಂತರ ಹೆಚ್ಚಿಸಿಕೊಂಡಿದ್ದಾರೆ.

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ (Postal Ballots) ಮರು ಎಣಿಕೆ ಕಾರ್ಯ ಇಂದು ಐಡಿಎಸ್‌ಜಿ ಕಾಲೇಜಿನಲ್ಲಿ ನಡೆಯಿತು. ಈ ಹಿಂದೆ ಸಾಮಾನ್ಯ ಮತ ಎಣಿಕೆ ಬಳಿಕ 201 ಮತಗಳಿಂದ ಗೆಲುವು ಸಾಧಿಸಿದ್ದ ರಾಜೇಗೌಡ ಅವರು, ಮರು ಮತ ಎಣಿಕೆ ಬಳಿಕ 203 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

 ಹಿನ್ನೆಲೆ
2023 ರಲ್ಲಿ 12 ಜನ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಕಾಂಗ್ರೆಸ್ಸಿನ ಟಿ.ಡಿ ರಾಜೇಗೌಡ 201 ಮತಗಳ ಅಂತರದಿಂದ ಗೆಲುವು ಕಂಡಿದ್ದರು. 1822 ಅಂಚೆ ಮತಗಳಲ್ಲಿ 279 ಮತಗಳು ತಿರಸ್ಕಾರಗೊಂಡಿದ್ದವು. ಮೊದಲು 279 ಮತಪತ್ರ ಎಣಿಕೆ ಕಾರ್ಯ, ನಂತರ 1540 ಮತಗಳ ಎಣಿಕೆ ಕಾರ್ಯ, 3 ನೋಟಾ ಮತಗಳು ಸೇರಿ ಒಟ್ಟು 1822 ಅಂಚೆ ಮತಗಳು ಬಿದ್ದಿದ್ದವು.

ಅಂಚೆ ಮತಗಳ ಮರು ಎಣಿಕೆಗೆ ಒತ್ತಾಯಿಸಿ ಬಿಜೆಪಿ ಅಭ್ಯರ್ಥಿ ಡಿಎನ್ ಜೀವರಾಜ್ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ಅಂಚೆ ಮತಗಳ ಮರುವೆಣಿಕೆಗೆ ಆದೇಶ ನೀಡಿದ್ದರಿಂದ ಇಂದು ಆ ಪ್ರಕ್ರಿಯೆಯನ್ನು ನಡೆಸಲಾಯಿತು.

ಮರು ಎಣಿಕೆಯಲ್ಲಿ ರಾಜೇಗೌಡರು ಹೆಚ್ಚುರಿಯಾಗಿ ಎರಡು ಮತಗಳನ್ನು ಪಡೆದಿದ್ದಾರೆ ಫಲಿತಾಂಶದಲ್ಲಿ ತನಗೆ ಅನುಕೂಲ ಆಗಬಹುದು ಎಂಬ ದೂರದ ಆಸೆ ಇಟ್ಟುಕೊಂಡಿದ್ದ ಡಿಎನ್ ಜೀವರಾಜ್ ಅವರಿಗೆ ಇದೀಗ ನಿರಾಶೆಯಾಗಿದೆ.

ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಹರ್ಷೋದ್ಗಾರಗಳೊಂದಿಗೆ ಸಂಭ್ರಮಾಚರಣೆ ಮಾಡಿದ್ದಾರೆ

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ