ನಾನು ಅನ್ನುವಂತಹದು ಅಹಂಕಾರ ನಾವು ಅನ್ನುವುದು ಸಹಕಾರ ಇದು ನಾವು ಅನ್ನು ದಾರಿಯಲ್ಲಿ ಸಾಗಿ ಈ ಒಂದು ವ್ಯವಸ್ಥೆಯ ಅಡಿಯಲ್ಲಿ ಪ್ರತಿಯೊಂದು ಸಂದರ್ಭದಲ್ಲಿಯೂ ಕೂಡ ವಿಶ್ವಸ ಬಾವನೆಯಿಂದ ಕೆಲಸ ಮಾಡುವ ಕ್ಷೇತ್ರ ಎಂದರೆ ಅದು ಸಹಕಾರ ಕ್ಷೇತ್ರ ಎಂದು ವಿಧಾನಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ತಿಳಿಸಿದರು.
ಪಟ್ಟಣದ ಟಿಎಪಿಸಿ ಎಂಎಸ್ ರೈತಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳನಿ.ಬೆಂಗಳುರು, ಜಿಲ್ಲಾ ಸಹಕಾರ ಯೂನಿಯನ್ ನಿ.ಚಿಕ್ಕಮಗಳೂರು, ಜಿಲ್ಲಾ ಸಹಕಾರ ಖೇಂದ್ರ ಬ್ಯಾಂಕ್‌ನಿ ಚಿಕ್ಕಮಗಳೂರು, ಪ್ರಾಥಮಿಕ ಕೃಷಿ ಗ್ರಾಮೀಣಾಭಿವೃದ್ದಿ ಬ್ಯಾಂಕ್ ನಿ.ಮೂಡಿಗೆರೆ, ತಾಲ್ಳೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿ, ಮೂಡಿಗೆರೆ ಹಾಗೂ ಮೂಡಿಗೆರೆ ತಾಲ್ಲೂಕಿನ ಎಲ್ಲಾ ಸಹಕಾರ ಸಂಘ, ಬ್ಯಾಂಕ್ ಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ 72 ನೇ ಅಖಿಲ ಭಾರತ ಸಹಕಾರ ಸಪ್ತಾಹದ ತ್ರಿಭುವನ್ ಸಹಕಾರ ವಿಶ್ವವಿದ್ಯಾಲಯಸಂಶೋಧನೆ ಮತ್ತು ತರಬೇತಿಯಿಂದ ಸಹಕಾರ ಶಿಕ್ಷಣದಲ್ಲಿ ಪರಿವರ್ತನೆ ದಿನ ಆಚರಣೆಯ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನಿಸಿ ಮಾತನಾಡಿದ ಅವರು.
ಸಹಕಾರ ಕ್ಷೇತ್ರದಿಂದಾಗಿ ಕೃಷಿ ಸೇರಿ ಹಲವು ಕ್ಷೇತ್ರಗಳಿಗೆ ದೊಡ್ಡ ಚೈತನ್ಯ ಸಿಕ್ಕಿದೆ. ಲಕ್ಷಾಂತರ ಕುಟುಂಬಗಳು ಬದುಕುತ್ತಿವೆ. ಸಹಕಾರ ಕ್ಷೇತ್ರ ಗಟ್ಟಿಯಾದರೆ ಆರ್ಥಿಕ ಹಾಗೂ ಸಾಮಾಜಿಕ ಚೈತನ್ಯ ಹೆಚ್ಚಾಗಲಿದೆ ಎಂದು ಹೇಳಿದರು. ಸಹಕಾರ ಕ್ಷೇತ್ರದಿಂದಾಗಿ ಕೃಷಿ ಸೇರಿ ಹಲವು ಕ್ಷೇತ್ರಗಳಿಗೆ ದೊಡ್ಡ ಚೈತನ್ಯ ಸಿಕ್ಕಿದೆ. ಲಕ್ಷಾಂತರ ಕುಟುಂಬಗಳು ಬದುಕುತ್ತಿವೆ. ಸಹಕಾರ ಕ್ಷೇತ್ರ ಗಟ್ಟಿಯಾದರೆ ಆರ್ಥಿಕ ಹಾಗೂ ಸಾಮಾಜಿಕ ಚೈತನ್ಯ ಹೆಚ್ಚಾಗಲಿದೆ
ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲೋ ಸ್ವಲ್ಪ ದಿಕ್ಕನ್ನು ಬದಾಲಾಯಿಸುವ ವ್ಯವಸ್ಥೆಗಳು ಆಗುತ್ತಿವೆಯೇ ಎನ್ನುವ ಅನುಮಾನಗಳು ಮೂಡುತ್ತಿವೆ. ಸಹಕಾರಿ ಎಂದರೆ ಒಂದು ಅರ್ಥಪೂರ್ಣ ಇದೆ, ಇನ್ನೊಬ್ಬರಿಗೆ ಸಹಕಾರಿಯಾಗೇ ನಿಲ್ಲುವುದೇ ಸಹಕಾರಿಯಾಗುತ್ತದೆ. ಸಹಕಾರಿ ಕ್ಷೇತ್ರದದಲ್ಲಿ ಹಲವಾರು ದುರೀಣರು ಇದ್ದಾರೆ. ಈ ಸಹಕಾರಿ ಕ್ಷೇತ್ರದಲ್ಲಿ ಬಹಳಷ್ಟು ಉತ್ತಮ ಕಾರ್ಯವನ್ನು ಮಾಡಿದವರಿದ್ದಾರೆ. ರಾಜಕಾರಣ ಪ್ರವೇಶವಾಗಿದೆ ರಾಜಕಾರಣ ಪ್ರವೇಶ ಮಾಡಿದ್ರೆ ನಿಸ್ವಾರ್ಥದ ರಾಜಕಾರಣ ಮಾಡಿದ್ದೆ ಆದರೆ ಈ ಸಹಕಾರಿ ಕ್ಷೇತ್ರಕ್ಕೆ ದೊಡ್ಡ ಕೊಡುಗೆಯನ್ನೆ ಕೊಟ್ಟಂತಾಗಿತ್ತದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಸಂಶೋಧನೆ ಮತ್ತು ಮೌಲ್ಯೀಕರಣ ವಿಭಾಗ್ದ ಕರ್ನಾಟಕ ರಾಜ್ಯ ಸಹಕಾರ ಮಾಹಮಂಡಲ ನಿದೇಶಕರಾದ ಡಾ.ರೇಣುಕಾ ಆರ್.ಎಸ್. ದಿನದ ಮಹತ್ವ ಕುರಿತು ರಾಜ್ಯದ ಗದಗ ಜಿಲ್ಲೆಯ ಕಣಗಿನಾಳ್‌ನಲ್ಲಿ ಮೊಟ್ಟ ಮೊದಲ ಸಹಕಾರ ಬ್ಯಾಂಕ್ ಸ್ಥಾಪನೆ ಆಗಿತ್ತು. ಹೀಗಾಗಿ ಕರ್ನಾಟಕವನ್ನು ಭಾರತದ ಸಹಕಾರ ಕ್ಷೇತ್ರದ ರಾಜಧಾನಿ ಎಂದು ಕರೆಯುತ್ತಾರೆ. ಗ್ರಾಮೀಣ ಭಾರತದ ಪ್ರಗತಿಗಾಗಿ ಸಹಕಾರ ಕ್ಷೇತ್ರ ಬಹಳ ಮುಖ್ಯವಾಗಿದ್ದು, ಸಹಕಾರಿ ಚಳವಳಿ ಲಕ್ಷಾಂತರ ಕುಟುಂಬಗಳ ಆರ್ಥಿಕ ಮೂಲವಾಗಿದೆ. ನೆಹರೂ ಅವರು ಸಹಕಾರ ಕ್ಷೇತ್ರಕ್ಕೆ ಚೈತನ್ಯ ನೀಡಿದ್ದಾರೆ ಎಂದರು. ರಾಜ್ಯದಲ್ಲಿ ವಾರ್ಷಿಕ ವಹಿವಾಟು ೨೫ ಸಾವಿರ ಕೋಟಿ ರು.ನೊಂದಿಗೆ ಪ್ರತಿ ದಿನ ಒಂದು ಕೋಟಿ ಲೀಟರ್ ಹಾಲು ಉತ್ಪಾದನೆ ಆಗುತ್ತಿದ್ದು, ಇದು ಸಹಕಾರಿ ಚಳವಳಿ ಮೂಲಕ ಬೆಳೆದ ಹಾಲು ಮಹಾ ಮಂಡಳಗಳ ಮಹತ್ ಸಾಧನೆ. ಹಾಲು ಉತ್ಪಾದಕರ ಸಂಘಗಳು ಚಳವಳಿ ಸ್ವರೂಪದಲ್ಲಿ ನಡೆದು ಮಧ್ಯವರ್ತಿಗಳ ಹಾವಳಿ ಇಲ್ಲದೆ ರೈತರು ಹಾಲನ್ನು ನೇರವಾಗಿ ಉತ್ಪಾದಕರ ಸಂಘಗಳಿಗೆ ಸರಬರಾಜು ಮಾಡುವಂತಾಯಿತು ಎಂದು ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ತಾಲ್ಲೂಕಿನ ಹಿರಿಯ ಸಹಕಾರಿಗಳನ್ನು ಗೌರವಿಸಲಾಯಿತು.
ಅಧ್ಯಕ್ಷತೆಯನ್ನು ಜಿಲ್ಲಾ ಸಹಕಾರ ಯೂನಿಯನ್ ನಿ. ಅಧ್ಯಕ್ಷ ಡಾ|| ಜಿ.ಎಸ್. ಮಹಾಬಲವಹಿಸಿದ್ದರು. ಮುಖ್ಯಅತಿಥಿಗಳಾಗಿ ಬಿ.ಸಿ. ಲೋಕಪ್ಪಗೌಡ, ಹಳಸೆ ಬಿ. ಶಿವಣ್ಣ, ಜಿ.ಕೆ. ದಿವಾಕರ, ಹೆಚ್.ಕೆ. ದಿನೇಶ್, ಈ.ಆರ್. ಮಹೇಶ್, ಶ್ರೀಮತಿ ಭಾರತಿ ಎ.ಕೆ. ಶ್ರೀಮತಿ ಮೋಟಮ್ಮ, ಶ್ರೀಮತಿ ರಾಜಮ್ಮ, ಓ.ಎಸ್. ಗೋಪಾಲಗೌಡ, ಬಿ.ಆರ್. ಬಾಲಕೃಷ್ಣ ಎಂ.ಎಲ್.ಕಲ್ಲೇಶ್, ಕು| ರಂಜಿತ ಡಿ., ಅಧ್ಯಕ್ಷರು, ಶ್ರೀಮತಿ ಜ್ಯೋತಿಲಕ್ಷ್ಮಿ, ಡಿ.ಬಿ. ಜಯಪ್ರಕಾಶ್, ಎನ್.ಜೆ. ಜಯರಾಮ್, ಹೆಚ್.ಎಂ. ರವಿ, ಎಂ.ಎನ್. ಅಶ್ವತ್, ಹೆಚ್.ಜಿ. ಉತ್ತಮ್ ಕುಮಾರ್, ಎಂ.ಪಿ. ಗಿರೀಶ್, ಕೆ.ಬಿ. ಶಿವರಾಜ್, ಕೆ.ಎಂ. ಜಯರಾಮ್, ಬಿ.ಎಸ್. ನಾರಾಯಣಗೌಡ, ಡಿ.ಎಸ್. ಮಹೇಶ್, ಹೆಚ್.ಟಿ. ಪ್ರಸನ್ನ, ಹೆಚ್.ಎ. ಸುನಿಲ್ ಕುಮಾರ್, ಬಿ.ಎಸ್. ನಾಗರಾಜ್, ಹೆಚ್.ವಿ. ರಾಜೇಂದ್ರ ಪ್ರಸಾದ್, ಜಿ.ಎಂ. ಪ್ರಸನ್ನ, ಕೃಷ್ಣ ಆ. ಶ್ರೀಮತಿ ಎಸ್.ಸಿ. ಪುಟ್ಟಮ್ಮ, ಶ್ರೀಮತಿ ಟಿ. ಕಮಲಾಕ್ಷಿ, ಶ್ರೀಮತಿ ಬಿ.ಎಸ್. ಪೂರ್ಣೇಶ್ವರಿ ಲಕ್ಷ್ಮಣಗೌಡ, ಶ್ರೀಮತಿ ಹೆಚ್.ಬಿ. ಸರೋಜ, ಹೆಚ್.ಕೆ. ಪೂರ್ಣೇಶ್, ಎಂ.ಎ. ಯೋಗೇಶ್ ಮುಂತಾದವರು ಉಪಸ್ಥಿತರಿದ್ದರು.



