IMG-20251117-WA0257

 

 

ಪ್ರತಿಭೋತ್ಸವ ‘ಯುವ ಚೇತನ 2025-26’ ಸಮಗ್ರ ಪ್ರಶಸ್ತಿಯನ್ನು ಉಪ್ಪಳ್ಳಿಯ ಜ್ಞಾನರಶ್ಮಿ ಇಂಗ್ಲೀಷ್ ಪ್ರೌಢಶಾಲೆ ಮುಡಿಗೇರಿಸಿಕೊಂಡಿದೆ.

ಚಿಕ್ಕಮಗಳೂರು ರೋಟರಿ ಕ್ಲಬ್ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಏಳು ವಿಧದ ಸ್ಪರ್ಧೆಗಳನ್ನು ನಡೆಸಿತ್ತು. 21 ಪ್ರೌಢಶಾಲೆಗಳ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಯುವಚೇತನ ಉದ್ಘಾಟಿಸಿದ್ದರು.

ನಾಲ್ಕು ವಿಭಾಗದ ಪ್ರಥಮ ಬಹುಮಾನದ ಜೊತೆಗೆ ಟ್ರೋಫಿ ತನ್ನದಾಗಿಸಿಕೊಂಡಿದ್ದ ಜ್ಞಾನರಶ್ಮಿ ತಂಡ ಒಟ್ಟು 90 ಅಂಕ ಗಳಿಸುವ ಮೂಲಕ ಅಗ್ರಸ್ಥಾನ ಪಡೆದು ಸಮಗ್ರ ಪ್ರಶಸ್ತಿಗೆ ಭಾಜನವಾಯಿತು.

ಸಮೂಹ ನೃತ್ಯ ಸ್ಪರ್ಧೆಯಲ್ಲಿ ಸತತವಾಗಿ 4ನೆಯ ವರ್ಷದಲ್ಲಿ ಸಾಯಿಏಂಜೆಲ್ಸ್ ಶಾಲಾ ತಂಡ ಪ್ರಥಮಸ್ಥಾನ ಕಾಪಿಟ್ಟುಕೊಂಡು ಟ್ರೋಫಿ ತನ್ನದಾಗಿಸಿಕೊಂಡರೆ, ತೀವ್ರ ಪೈಪೋಟಿ ಒಡ್ಡಿದ್ದ ಸೆಂಟ್ ಮೇರೀಸ್ ಶಾಲಾತಂಡ ದ್ವಿತೀಯಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಜ್ಞಾನರಶ್ಮಿ ತಂಡ ತೃತೀಯಸ್ಥಾನ ಗಳಿಸಿದ್ದು ಫ್ರೈಡ್‍ಯೂರೋ ತಂಡ ಸಮಾಧಾನಕರ ಬಹುಮಾನ ಗಳಿಸಿತು.

ಪರಿಸರ ರಸಪ್ರಶ್ನೆ ವಿಭಾಗದಲ್ಲಿ ಐ.ಸಿ.ವಿಶ್ವಾಸ್ ನೇತೃತ್ವದ ಜ್ಞಾನರಶ್ಮಿ ತಂಡ ಪ್ರಥಮಸ್ಥಾನ ಗಳಿಸಿದ್ದು, 3ನೆಯ ವರ್ಷವೂ ಟ್ರೋಫಿ ತನ್ನದಾಗಿಸಿಕೊಂಡಿದೆ. ನರ್ಚರ್ ಇಂಟರನ್ಯಾಷನಲ್ ಶಾಲೆಯ ಧೃತಿ ತಂಡÀ ದ್ವಿತೀಯ ಬಹುಮಾನ ಗಳಿಸಿದರೆ, ಕುವೆಂಪು ವಿದ್ಯಾನಿಕೇತನದ ಪಕ್ಷಾಕೃಷ್ಣನ್ ತಂಡ ತೃತೀಯ ಬಹುಮಾನಕ್ಕೆ ತೃಪ್ತಿ ಪಡಬೇಕಾಯಿತು.

ಸಾಮಾನ್ಯ ರಸಪ್ರಶ್ನೆ ಸ್ಪರ್ಧೆಯಲ್ಲಿ ಅಂಬರ್‍ವ್ಯಾಲಿ ಶಾಲೆಯ ಪ್ರಣವ್‍ರೆಡ್ಡಿ ಪ್ರಥಮ, ಜ್ಞಾನರಶ್ಮಿ ಶಾಲೆಯ ಐ.ಸಿ.ವಿಶ್ವಾಸ ದ್ವಿತೀಯ ಮತ್ತು ಕುವೆಂಪು ವಿದ್ಯಾನಿಕೇತನದ ರಕ್ಷಿತ್‍ರಾವ್ ತೃತೀಯ ಬಹುಮಾನ ಗಳಿಸಿದರು.

ಚಿತ್ರಕಲಾ ಸ್ಪರ್ಧೆಯಲ್ಲಿ ಶಾಲಿನ್ ಬಲೀಸ್ ಪ್ರಥಮಸ್ಥಾನ ಗಳಿಸಿ ಸೆಂಟ್‍ಮೇರೀಸ್ ಶಾಲೆಗೆ ಟ್ರೋಫಿ ಗಳಿಸಿ ಕೊಟ್ಟಿದ್ದು, ಜೆವಿಎಸ್ ಶಾಲೆಯ ದೀಪ್ತಿಮನ್ನಾ ದ್ವಿತೀಯ, ಅಂಬರ್‍ವ್ಯಾಲಿ ತೃತೀಯ, ಸೆಂಟ್‍ಮೇರೀಸ್ ಶಾಲೆಯ ಅನಘಾರಶ್ಮಿ ಮತ್ತು ಜ್ಞಾನರಶ್ಮಿ ಶಾಲೆಯ ಅನ್ಸಿಯಾ ಸಮಾಧಾನಕರ ಬಹುಮಾನ ಗಳಿಸಿದರು.

ನಿಧಾನಗತಿ ಸೈಕಲ್ ಚಾಲನೆ ಸ್ಪರ್ಧೆಯಲ್ಲಿ ಜ್ಞಾನರಶ್ಮಿ ತಂಡ ಬಾಲಕ ಮತ್ತು ಬಾಲಕಿಯರ ಎರಡೂ ವಿಭಾಗದ ಪ್ರಥಮಸ್ಥಾನ ಪಡೆದು ಟ್ರೋಫಿ ತನ್ನದಾಗಿಸಿಕೊಂಡಿತು. ಐ.ಸಿ.ವಿಶ್ವಾಸ್ ಮತ್ತು ವಿ.ಸಿ.ಗಾನವಿ ಪ್ರಥಮಸ್ಥಾನ ಪಡೆದರು. ಮಾಡೆಲ್‍ಶಾಲೆಯ ಮಹಮ್ಮದ್‍ಹುಸೇನ್ ಮತ್ತು ಮಹಮ್ಮದ್‍ಹಂದೀನ್ ಹಾಗೂ ತೈಯಬ್ ಅನುಕ್ರಮವಾಗಿ ಬಹುಮಾನ ಪಡೆದರು.

ಬಾಕ್ಸ್ ಕ್ರಿಕೆಟ್‍ನಲ್ಲಿ ಸಾಯಿ ಏಂಜೆಲ್ಸ್ ತಂಡ ಪ್ರಥಮಸ್ಥಾನದೊಂದಿಗೆ ಟ್ರೋಫಿ ಗಳಿಸಿದರೆ, ಫ್ರೈಡ್‍ಯೂರೋ ತಂಡ ದ್ವಿತೀಯ ಬಹುಮಾನ ಗಳಿಸಿತೆಂದು ರೋಟರಿ ನಿಕಟಪೂರ್ವ ಅಧ್ಯಕ್ಷ ಎಂ.ಎಲ್.ಸುಜಿತ್ ತಿಳಿಸಿದ್ದಾರೆ.

ರೋಟರಿ ಅಧ್ಯಕ್ಷ ಎನ್.ಪಿ.ಲಿಖಿತ್, ಕಾರ್ಯದರ್ಶಿ ಹರ್ಷಿತ್‍ವಸಿಷ್ಠಿ ಯುವಚೇತನದ ಅಧ್ಯಕ್ಷ ಎಂ.ಎಸ್.ಕಿಶನ್, ಸಹ ಅಧ್ಯಕ್ಷ ಮನೋಜ್‍ಬೈಸಾನಿ, ರೋಟರಿ ಯುವಜನಸೇವಾ ನಿರ್ದೇಶಕ ಫಣೀಂದ್ರನಾಡಿಗ್ ಮತ್ತು ರೋಟರಿ ವಲಯ ನಾಯಕ ನಾಗೇಂದ್ರ ಜೊತೆಗೆ ಪ್ರಾಯೋಜಕರುಗಳು ಬಹುಮಾನ ವಿತರಿಸಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ