IMG-20251123-WA0008

 

 

ಒಂದು ಕಾಲದಲ್ಲಿ 1972 ರಲ್ಲಿ ಮಲೆನಾಡಿನ ಹಲವು ಯುವಕರು ಪೇಟೆಯ ಬೆನ್ನೇರಿ ಹೋಗಿದ್ದ ಸಂದರ್ಭದಲ್ಲಿ ಸಿದ್ದಲಿಂಗಯ್ಯ ನಿರ್ದೇಶನದ ಚಿಕ್ಕಮಗಳೂರು ಸುತ್ತಮುತ್ತ ಚಿತ್ರಿಕರಣಗೊಂಡು ಬಿಡುಗಡೆಯಾದ ಡಾ.ರಾಜಕುಮಾರ್ ನಟಿಸಿದ್ದ ಬಂಗಾರದ ಸಿನಿಮಾ ಎಂತಹ ಪ್ರಭಾವ ಬೀರಿತ್ತೆಂದರೆ ಅ ಸಿನಿಮವನ್ನು ನೋಡಿದ ಅನೇಕರು ಬೆಂಗಳೂರಿನಿಂದ ವಾಪಸ್ಸು ಮೂಡಿಗೆರೆಗೆ ಬಂದು ಕೃಷಿಯಲ್ಲೆ ತೊಡಗಿಕೊಂಡು ಅದರಲ್ಲೆ ಸಾಧನೆ ಮಾಡಿದರು ಮತ್ತು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಕಾಲತಸ್ಮೈ ನಮಃ ಎಂಬಂತೆ ನಂತರ 2000 ರದ ನಂತರ ಇಂದಿನ ಯುವ ಪೀಳಿಗೆ ಐಟಿ ಬೀಟಿಯತ್ತ ಮುಖ ಮಾಡಿದ್ದು, ಅಲ್ಲಿನ ಕಲುಷಿತ ವಾತಾವರಣ ನೋಡಿ ಬೇಸರಗೊಂಡು ಊರಿನಲ್ಲಿ ಕೃಷಿಯನ್ನು ಮಾಡೋಣ ಪಟ್ಟಣ ಸಹವಾಸವೇ ಸಾಕಪ್ಪ ಸಾಕು ಕೃಷಿಯೇ ಬೇಕು ಎಂದು ಮರುಳುತ್ತಾ ಭೂ ತಾಯಿಯ ಸೇವೆಯಲ್ಲಿ ತೊಡಗಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಕೃಷಿ ವಿಜ್ಞಾನಿ ಡಾ.ವೇಣುಗೋಪಾಲ್ ತಿಳಿಸಿದರು.

ಅವರು ಮೂಡಿಗೆರೆ ಬೇಲೂರು ಗಡಿಭಾಗದ ಗೌತಹಳ್ಳಿಯ ಲಕ್ಷ್ಮಣ್‌ಗೌಡ ಜಿ.ಎಂ ಮತ್ತು ಕರಣ್ ಅವರ ತೋಟಗಳಲ್ಲಿ ಹಸಿರು ಆರ್ಗಾನಿಕ್ಸ್ ರವರ ಹ್ಯಾಫಿ ಪಾರ್ಮಿಂಗ್ ಆತ್ಮವಿಶ್ವಾಸದಿಂದ ಬೆಳೆಯಿರಿ, ಸಂತೋಷದಿಂದ ಕೃಷಿ ಮಾಡಿ ಎಂಬ ಘೋಷವಾಕ್ಯದೊಂದಿಗೆ ಬ್ಲೂಮ್ ಜೈವಿಕ ತಂತ್ರಜ್ಞಾನದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಅರೇಬಿಕಾ ಕಾಫಿ ಮತ್ತು ಕಾಳು ಮೆಣಸಿನ ಆರೈಕೆಯ ಬಗ್ಗೆ ತರಭೇತಿ ಕಾರ್ಯದಲ್ಲಿ ಭಾವಹಿಸಿ ಮಾತನಾಡಿದರು.

ಸಾವಯವ ಗೊಬ್ಬರದಿಂದ ಭೂಮಿಯ ಮಣ್ಣಿನ ಸತ್ವವನ್ನು ಹೆಚ್ಚಿಸುವುದರೊಂದಿಗೆ ಸಮಯಕ್ಕೆ ಸರಿಯಾಗಿ ಸಾವಯವ ಗೊಬ್ಬರ ಮತ್ತು ನೀರನ್ನು ನೀಡಿದಲ್ಲಿ ಆರೋಗ್ಯಕರ ಮತ್ತು ಉತ್ತಮ ಬೆಳೆಯನ್ನು ಬೆಳೆಯುವದರೊಂದಿಗೆ ಅಧಿಕ ಲಾಭವನ್ನು ಗಳಿಸಬಹುದು ಎಂದರು.

ತೋಟದ ಮಾಲೀಕ ಲಕ್ಷ್ಮಣಗೌಡ ಜಿ.ಎಂ. ರೈತರಿಗೆ ಮಾಹಿತಿಯನ್ನು ನೀಡುತ್ತಾ. ಕಾಳು ಮೆಣಸಿನ ಸಮಗ್ರ ಕೃಷಿ ವಿಧಾನಗಳನ್ನು  ಅನುಸರಿಸಿದರೆ ಅಧಿಕ ಇಳುವರಿಯನ್ನು ಪಡೆಯಬಹುದು. ತಾವು ಕೃಷಿಯಲ್ಲಿ ತೊಡಗಿಸಿಕೊಂಡಿದ್ದರ ಪರಿಣಾಮ ಇಂದು ಕೃಷಿಯಬಗ್ಗೆ ಸಂಪೂರ್ಣ ಅನುಭವ ಹೊಂದುವುದರೊಂದಿಗೆ ಲಾಭದಾಯಕದಲ್ಲೆ ಇದ್ದೇನೆ ಮತ್ತು ಯಾವುದೇ ಕ್ಷಣದಲ್ಲೂ ಯಾರೆ ಬಂದು ಕೃಷಿಯ ಬಗ್ಗೆ ಕೇಳಿದರೆ ತಮಗಿರುವ ಅನುಭವವನ್ನು ಅವರಿಗೂ ಹಂಚುಕೊಳ್ಳುವುದರೊಂದಿಗೆ ಲಾಭದಾಯಕ ಕೃಷಿಕ ನನ್ನಾಗಿಸುತ್ತೇನೆ ಎಂದರು.

ಹಂಚಿನ ಮನೆ ಎಸ್ಟೇಟಿನ ಮಾಲೀಕ ಕರಣ್ ಅವರು ತಮ್ಮ ತೋಟದಲ್ಲಿ ಅತ್ಬೆಯುತ್ತಮ ರೀತಿಯಲ್ಲಿ  ಬೆಳೆದಿರುವ ರೋಬಷ್ಟ ಗಿಡಗಳು ಹಾಗೂ ಕಾಳು ಮೆಣಸಿನ ಬಗ್ಗೆ ಪ್ರಾತಿಕ್ಷಿತೆ ತೋರಿಸಿದರು. ಮತ್ತು ಅದನ್ನು ಬೆಳೆಸುವ ವಿಧಾನವನ್ನು ತಿಳಿಸಿದರು.

ಕಾಳು ಮೆಣಸು ಬೆಳೆದು ಅಂತರ್ ರಾಷ್ಟ್ರೀಯ ಪ್ರಶಸ್ತಿ ಪಡೆದ ವೈ.ಎನ್.ಕೃಷ್ಣೆಗೌಡರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಹಸಿರು ಆರ್ಗಾನಿಕ್ ಮಾಲೀಕ ಬಿ.ಸಿ.ಅರವಿಂದ್, ಕೃಷಿಕ ನರೇಶ್ ಹಂಜಗೊಂಡನಹಳ್ಳಿ, ದಿನೇಶ್, ಸುಶ್ಮಿತ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಚಿಕ್ಕಮಗಳೂರು, ಕೊಡಗು,ಮಂಡ್ಯ, ತಮಿಳುನಾಡು ಕೇರಳ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ 400 ಕ್ಕೂ ಅಧಿಕ ಯುವ ರೈತರು ಆಗಮಿಸಿ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ