ದತ್ತಜಯಂತಿ ಉತ್ಸವ 2025ರ ಅಂಗವಾಗಿ ನವೆಂಬರ್ 29ರ ಶನಿವಾರದಂದು ಮೂಡಿಗೆರೆ ಪಟ್ಟಣ ವ್ಯಾಪ್ತಿಯಲ್ಲಿ ಬೃಹತ್ ಬೈಕ್ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಬಜರಂಗದಳ ಮೂಡಿಗೆರೆ ನಗರ ಪ್ರಖಂಡ ಸಂಚಾಲಕ ಧನು ತಿಳಿಸಿದ್ದಾರೆ.

ಈ ಸಂಬಂಧ ಮಾಹಿತಿ ನೀಡಿರುವ ಅವರು ಶ್ರೀ ದತ್ತಜಯಂತಿ ಉತ್ಸವ 2025 ಗೀತಾ ಜಯಂತಿ ಹಾಗೂ ದತ್ತಜಯಂತಿ ಪ್ರಯುಕ್ತ ನವೆಂಬರ್ 29 ರಂದು ಮೂಡಿಗೆರೆ ಪಟ್ಟಣದಲ್ಲಿ ಬಜರಂಗದಳ, ವಿಶ್ವಹಿಂದೂ ಪರಿಷತ್ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ನೂರಾರು ಬೈಕ್ ಗಳಲ್ಲಿ ಜಾಥಾ ನಡೆಸಲಿದ್ದಾರೆ.
ಶನಿವಾರ ಸಂಜೆ 3 ಗಂಟೆಗೆ ಪಟ್ಟಣದ ಹೊರವಲಯದ ಕೊಲ್ಲಿಬೈಲ್ ವೃತ್ತದಿಂದ ಬೈಕ್ ಜಾಥಾ ಪ್ರಾರಂಭವಾಗಲಿದೆ. ಮೂಡಿಗೆರೆ ಹ್ಯಾಂಡ್ ಪೋಸ್ಟ್ ವೃತ್ತವನ್ನು ತಲುಪಿ ನಂತರ ನಗರದ ಪ್ರಮುಖ ಬೀದಿಗಳಲ್ಲಿ ಬೈಕ್ ಜಾಥಾ ಸಂಚರಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.
ಜಾಥಾದಲ್ಲಿ ಸಾರ್ವಜನಿಕರು, ಸಂಘಟನೆಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿಕೊಡಬೇಕಾಗಿ ಕೋರಿದ್ದು, ಹೆಚ್ಚಿನ ಮಾಹಿತಿಗೆ 7338091375 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬೇಕೆಂದು ಕೋರಿದ್ದಾರೆ.




