ದಿನಾಂಕ 28/11/2025 ರಂದು ಬಿ.ಎಸ್ ಜಯರಾಮ್ ಅಧ್ಯಕ್ಷರು ಮೂಡಿಗೆರೆ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಇವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆಯ ನಡಾವಳಿ.
ಸ್ವಾಗತ: ಶ್ರೀಮತಿ ದಯಾವತಿ ಎಂ.ಕಾರ್ಯನಿರ್ವಾಹಕ ಅಧಿಕಾರಿಗಳು ತಾಲ್ಲೂಕು ಪಂಚಾಯಿತಿ ಮೂಡಿಗೆರೆ ರವರು ಹಾಜರಿದ್ದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರುಗಳಿಗೆ ಹಾಗೂ ಅನುಷ್ಠಾನ ಇಲಾಖೆಯ ಅಧಿಕಾರಿಗಳಿಗೆ ಸ್ವಾಗತ ಕೋರುತ್ತಾ, ಸಭೆಯನ್ನು ನಡೆಸಿಕೊಡುವಂತೆ ಮಾನ್ಯ ಅಧ್ಯಕ್ಷರನ್ನು ಕೋರಿದರು.
ಬಿ.ಎಸ್. ಜಯರಾಮ್ ಮಾನ್ಯ ಅಧ್ಯಕ್ಷರು ಹಾಜರಿದ್ದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರುಗಳಿಗೆ, ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಅನುಷ್ಠಾನ ಇಲಾಖೆಯ ಅಧಿಕಾರಿಗಳಿಗೆ ಸ್ವಾಗತ ಕೋರಿದರು.
ಉಪಸ್ಥಿತಿ:
1. ಬಿ.ಎಸ್. ಜಯರಾಮ್ ಮಾನ್ಯ ಅಧ್ಯಕ್ಷರು, ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
2. ಶ್ರೀಮತಿ ದಯಾವತಿ ಎಂ. ಸದಸ್ಯ ಕಾರ್ಯದರ್ಶಿ ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
3. ಹೆಚ್.ಪಿ. ರಮೇಶ್, ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
4. ನಾರಾಯಣ, ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
5. ಶ್ರೀನಿವಾಸ್, ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
6. ನವೀನ್, ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
7. ಶ್ರೀಮತಿ ಜಯಮ್ಮ, ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
8. ಅರುಣ್, ಮಾನ್ಯ ಸದಸ್ಯರು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ
9. ಉಮೇಶ್, ಪ್ರಾಂಶುಪಾಲರು, ಸರ್ಕಾರಿ ಕೈಗಾರಿಕಾ ತರಭೇತಿ ಕೇಂದ್ರ ಮೂಡಿಗೆರೆ
10. ಶ್ರೀಮತಿ ರಂಜಿತಾ ಸೂಪರ್ ವೈಸರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಮೂಡಿಗೆರೆ
11. ಮಂಜುನಾಥ್, ಮೆಸ್ಕಾಂ ಇಲಾಖೆ ಮೂಡಿಗೆರೆ
12. ಇಂದ್ರೇಶ್, ಶಿರಸ್ತೆದಾರ್, ಆಹಾರ ಇಲಾಖೆ ಮೂಡಿಗೆರೆ
13. ಮಂಜುನಾಥ್, ಕೆ.ಎಸ್.ಆರ್.ಟಿ.ಸಿ. ಮೂಡಿಗೆರೆ
ಅನ್ನಭಾಗ್ಯ ಯೋಜನೆ:
ಆಹಾರ ಶಿರಸ್ತೇದಾರರು ಸಭೆಗೆ ಪ್ರಗತಿ ವರದಿ ಮಂಡಿಸಿದರು. ತಾಲ್ಲೂಕಿನಲ್ಲಿ ಒಟ್ಟು 18212 ಬಿ.ಪಿ.ಎಲ್. ಕಾರ್ಡ್‌ಗಳು ಇದ್ದು, ಸರ್ಕಾರದ ಮಾನದಂಡದಂತೆ ಈವರೆಗೂ ತಾಲ್ಲೂಕಿನಲ್ಲಿ ಒಟ್ಟು 843 ಬಿಪಿಎಲ್ ಪಡಿತರಚೀಟಿಯನ್ನು ರದ್ದುಪಡಿಸಿ ಎಪಿಎಲ್ ಕಾರ್ಡಿಗೆ ವರ್ಗಾಯಿಸಲಾಗಿದೆ. ತಾಂತ್ರಿಕ ಸಮಸ್ಯೆಯಿಂದ ಎಪಿಎಲ್ ಕಾರ್ಡಿಗೆ ವರ್ಗಾಯಿಸುವ ಪ್ರಕ್ರಿಯೆ ವಿಳಂಭವಾಗಿರುತ್ತದೆ. ಹಾಗೂ ಅನ್ನಭಾಗ್ಯ ಯೋಜನೆಯಡಿ NFSA, OSD, ಅನ್ನಭಾಗ್ಯ ಮೂರು ವಿಭಾಗಗಳಿದ್ದು, ಎಲ್ಲದಕ್ಕೂ ಬಿಲ್ ಆದಲ್ಲಿ ಮಾತ್ರ ಪಡಿತರ ವಿತರಣೆ ಮಾಡಬಹುದು ಮತ್ತು ಭಾನುವಾರವೂ ಪಡಿತರ ವಿತರಣೆ ಮಾಡುತ್ತಿರುವುದಾಗಿ ಸಭೆಗೆ ಮಾಹಿತಿ ನೀಡಿದರು.
ಮಾನ್ಯ ಅಧ್ಯಕ್ಷರು ನ್ಯಾಯಬೆಲೆ ಅಂಗಡಿ ಮುಂದೆ ಬಿಪಿಎಲ್ ಕಾರ್ಡ್ ರದ್ದುಪಡಿಸುವ ಕುರಿತು ಸರ್ಕಾರದ ಮಾನದಂಡದ ಫಲಕ ಹಾಕುವಂತೆ ಸೂಚಿಸಿದರು. ವಿವಾಹವಾದ ಹೆಣ್ನುಮಕ್ಕಳ ಹಾಗೂ ಹೊರಗಡೆ ಹೋದವರ ಹೆಸರು ಪಡಿತರ ಚೀಟಿಯಲ್ಲಿದ್ದು, ಅವರ ಆದಾಯವನ್ನು ಪರಿಗಣಿಸಿ ಬಿ.ಪಿ.ಎಲ್. ಕಾರ್ಡ್ ರದ್ದುಪಡಿಸಲಾಗಿದೆ. ಹಾಗೂ ನಮ್ಮ ಮಲೆನಾಡು ಭಾಗದಲ್ಲಿ ಕೂಲಿ ಕಾರ್ಮಿಕರಾಗಿದ್ದು, ಒಟ್ಟಾಗಿ ಕೆಲಸಕ್ಕೆ ಹೋಗಲು ಹಳೆಯ 4 ಚಕ್ರದ ವಾಹನವನ್ನು ಖರೀದಿಸಿದ್ದು, ಇವರ ಬಿ.ಪಿ.ಎಲ್. ಕಾರ್ಡ್ ರದ್ದುಪಡಿಸಲಾಗಿದೆ. ಇವರುಗಳು ಬಿ.ಪಿ.ಎಲ್. ಕಾರ್ಡಿಗೆ ಅರ್ಹರಾಗಿದ್ದು ಇಂತಹ ಪ್ರಕರಣವನ್ನು ಸರ್ಕಾರದ ಗಮನಕ್ಕೆ ತಂದು ವಿನಾಯಿತಿ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಲು ಸಭೆಯಲ್ಲಿ ಚರ್ಚಿಸಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.
ಗೃಹಲಕ್ಷ್ಮಿ ಯೋಜನೆ:
ಇಲಾಖಾಧಿಕಾರಿಗಳು ಗೃಹಲಕ್ಷ್ಮಿ ಯೋಜನೆ ಬಗ್ಗೆ ಪ್ರಗತಿ ವರದಿ ಮಂಡಿಸಿದರು. ತಾಲ್ಲೂಕಿನಲ್ಲಿ ಒಟ್ಟು 29032 ಗೃಹಲಕ್ಷ್ಮಿ ಫಲಾನುಭವಿಗಳು ಇದ್ದು, ಇದರಲ್ಲಿ 28654 ಫಲಾನುಭವಿಗಳಿಗೆ ಯೋಜನೆಯ ಹಣ ಬರುತ್ತಿರುವುದಾಗಿ ಹಾಗೂ ಯೋಜನೆಯಿಂದ ಬಾಕಿ ಉಳಿದ ರೇಷನ್ ಕಾರ್ಡ್ NPCI 24, IT/GST 210, ತಿದ್ದುಪಡಿ/ಮರಣ 144 ಒಟ್ಟು 378 ರೇಷನ್ ಕಾರ್ಡ್ ಇರುತ್ತದೆ. ತಿದ್ದುಪಡಿ/ಮರಣ 144 ಹೊಸ ಪಡಿತರ ಚೀಟಿಗೆ ಅವಕಾಶ ಬಂದ ನಂತರ ಯೋಜನೆಗೆ ಒಳಪಡಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು. ಹಾಗೂ ಜುಲೈ-2025 ರ ಮಾಹೆಯವರೆಗೆ ಗೃಹಲಕ್ಷ್ಮೀ ಹಣ ಫಲಾನುಭವಿಗಳ ಖಾತೆಗೆ ಜಮೆ ಆಗಿರುವುದಾಗಿ ತಿಳಿಸಿದರು.
ಗೃಹಜ್ಯೋತಿ ಯೋಜನೆ:
ಇಲಾಖಾಧಿಕಾರಿಗಳು ಗೃಹಜ್ಯೋತಿ ಯೋಜನೆ ಬಗ್ಗೆ ಪ್ರಗತಿ ವರದಿ ಮಂಡಿಸಿದರು. ತಾಲ್ಲೂಕಿನಲ್ಲಿ ಒಟ್ಟು 21990 ಗೃಹಜ್ಯೋತಿ ಫಲಾನುಭವಿಗಳು ಇದ್ದು, ಸರ್ಕಾರದಿಂದ ರೂ. 8274707/- ಅನುದಾನ ಬಿಡುಗಡೆಯಾಗಿರುತ್ತದೆ. ಹಾಗೂ ಸರ್ಕಾರದ ಆದೇಶದಂತೆ 128 ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಹಾಗೂ ಗೃಹಜ್ಯೋತಿ ಯೋಜನೆಯಲ್ಲಿ ಅಧಿಕ ವಿದ್ಯುತ್ ಬಳಸಿರುವ ಫಲಾನುಭವಿಗಳ ಸಂಖ್ಯೆ 6589 ಇದ್ದು, ರೂ. 1918934/- ಬಿಲ್ ಪಾವತಿಸಿಕೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ತಾಲ್ಲೂಕು ಪಂಚಾಯಿತಿ ಅನುದಾನದಲ್ಲಿ ಮಾನ್ಯ ಶಾಸಕರು ತಾಲ್ಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಿಯಾಯೋಜನೆ ರೂಪಿಸಿದ್ದು, ಅಂಗನವಾಡಿ ಕೇಂದ್ರಗಳನ್ನು ಗೃಹಜ್ಯೋತಿ ಯೋಜನೆಗೆ ಒಳಪಡಿಸಲು ಸಭೆಯಲ್ಲಿ ಚರ್ಚಿಸಿ, ತೀರ್ಮಾನಿಸಲಾಯಿತು. ಬಿದರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಶಾಲನಗರದಲ್ಲಿ ಕಾಂಕ್ರೀಟ್ ರಸ್ತೆಗೆ ರೂ. 25.00 ಲಕ್ಷ ಅನುದಾನ ಮಂಜೂರಾಗಿದ್ದು, ಕಾಮಗಾರಿ ಮಾಡಲು ವಿದ್ಯುತ್ ಕಂಬ ಅಡ್ಡಲಾಗಿದ್ದು, ಸದರಿ ವಿದ್ಯುತ್ ಕಂಬವನ್ನು ತೆರವುಗೊಳಿಸುವಂತೆ ಸೂಚಿಸಲಾಯಿತು.
ಯುವನಿಧಿ ಯೋಜನೆ:
2024-25ರ ಆಯವ್ಯಯದಲ್ಲಿ ಯುವನಿಧಿ ಯೋಜನೆಗೆ ಕೈಗಾರಿಕಾ ತರಭೇತಿ ಸಂಸ್ಥೆಯನ್ನು ಗುರುತಿಸಲಾಗಿರುತ್ತದೆ. ಹಾಗೂ ಈವರೆಗೂ ಎಲೆಕ್ಟ್ರಾನಿಕ್ ಮೆಕಾನಿಕಲ್ ಮತ್ತು ಆಟೋಮೊಬೈಲ್ ಸೆಕ್ಟರ್ ನಿಂದ 383 ವಿಧ್ಯಾರ್ಥಿಗಳು ನೊಂದಣಿಯಾಗಿರುತ್ತಾರೆ. ಇವರಿಗೆ ತರಭೇತಿ ನೀಡುವ ವ್ಯವಸ್ಥೆ ಇದ್ದು ವಿಧ್ಯಾರ್ಥಿಗಳು ದಾಖಲಾತಿಗಳನ್ನು ಸಲ್ಲಿಸಿದ್ದಲ್ಲಿ ನೊಂದಣಿ ಮಾಡಲಾಗುವುದೆಂದು ಪ್ರಾಂಶುಪಾಲರು ಸರ್ಕಾರಿ ಕೈಗಾರಿಕಾ ತರಭೇತಿ ಸಂಸ್ಥೆ ರವರು ಸಭೆಗೆ ಮಾಹಿತಿ ನೀಡಿದರು.
ಆಸಕ್ತಿ ಇಲ್ಲದಿರುವ 94 ವಿದ್ಯಾರ್ಥಿಗಳು ಇದ್ದು, 10 ವಿದ್ಯಾರ್ಥಿಗಳಿಗೆ 1 ತಂಡವನ್ನು ಮಾಡಿ ತರಭೇತಿಯನ್ನು ನೀಡಬಹುದೆಂದು ಹಾಗೂ ಆನ್ ಲೈನ್ ನಲ್ಲಿಯೂ ತರಭೇತಿ ನೀಡುವ ವ್ಯವಸ್ಥೆ ಇರುವುದಾಗಿ ಸಭೆಗೆ ಮಾಹಿತಿ ನೀಡಿದರು.
ಶಕ್ತಿ ಯೋಜನೆ:
ಇಲಾಖಾಧಿಕಾರಿಗಳು ಶಕ್ತಿ ಯೋಜನೆ ಬಗ್ಗೆ ಪ್ರಗತಿ ವರದಿ ಮಂಡಿಸಿದರು. ತಾಲ್ಲೂಕಿನಲ್ಲಿ ನವಂಬರ್-2025 ರ ಮಾಹೆಯಲ್ಲಿ 248465 ಫಲಾನುಭವಿಗಳು ಪ್ರಯಾಣಿಸಿದ್ದು, ರೂ.11470206/- ಸರ್ಕಾರದಿಂದ ಅನುದಾನ ಬಿಡುಗಡೆಯಾಗಿರುವುದಾಗಿ ಸಭೆಗೆ ತಿಳಿಸಿದರು.




