30Mudigere1A

 

 

ಕನ್ನಡ ಭಾಷೆ, ಸಾಹಿತ್ಯ, ಸಂಸ್ಕøತಿ ಉಳಿಸುವ ಕಾರ್ಯಕ್ರಮದಲ್ಲಿ ಕನ್ನಡದ ಸಾಹಿತಿಗಳು, ಪ್ರಾಧ್ಯಾಪಕರು, ಚಿಂತಕರು ಭಾಷಣ ಮಾಡಲು ಸಂಭಾವನೆ ತೆಗೆದುಕೊಳ್ಳುವುದನ್ನು ಮೊದಲು ಬಿಡಬೇಕು. ಕನ್ನಡ ಭಾಷೆ ಸಂಸ್ಕøತಿ ಉಳಿಸುವುದು ತನ್ನ ಕರ್ತವ್ಯವೆಂದು ಭಾವಿಸಿ ಭಾಗವಹಿಸಬೇಕೆಂದು ಸಾಹಿತಿ ಸಂಪತ್ ಬೆಟ್ಟಗೆರೆ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಶನಿವಾರ ಸಂಜೆ ಮೂಡಿಗೆರೆ ಪಟ್ಟಣದ ಅಡ್ಯಂತಾಯ ರಂಗಮಂದಿರದ ವಿಶ್ವಮಾನವ ವೇದಿಕೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿ, ಆಟೋ ಚಾಲಕರ ಮತ್ತು ಮಾಲೀಕರ ಸಂಘ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನ ರುದ್ಯಾನವೆಂದು ಕುವೆಂಪು ರಚಿಸಿದ ನಾಡಗೀತೆಯನ್ನು ಎಲ್ಲರೂ ದ್ವನಿ ಸೇರಿ ಹೇಳುತ್ತೇವೆ. ಅಲ್ಲದೇ ಅಂಬೇಡ್ಕರ್ ಅವರು ಜಾತ್ಯಾತೀತ ಸಂವಿಧಾನ ಕೊಟ್ಟಿದ್ದಾರೆಂದು ಹೇಳುತ್ತೇವೆ. ಆದರೆ ನಮ್ಮ ಮನೆಯಲ್ಲಿ, ಧಾರ್ಮಿಕ, ಸಾಮಾಜಿಕ, ಸಾಸ್ಕøತಿಕ ಆಚರಣೆಯಲ್ಲಿ ಜಾತೀವಾದಿಗಳಾಗಿ ತೊಡಗಿಸಿಕೊಳ್ಳುತ್ತಿರುವುದು ದುರಂತ. ನಿಜವಾಗಿಯೂ ಸಂವಿಧಾನ ಹಾಗೂ ಕುವೆಂಪು ಅವರ ಆಶಯವನ್ನು ನಿತ್ಯ ಅನುಸರಿಸುತ್ತಿರುವುದು ಆಟೋ ಚಾಲಕರೆಂದರೆ ತಪ್ಪಾಗಲಾರದೆಂದು ಹೇಳಿದರು.

ಮೂಡಿಗೆರೆ ಬಸ್ ನಿಲ್ದಾಣದ ಜೂನಿಯರ್ ಕಾಲೇಜು ಕಾಂಪೌಂಡ ಬಳಿ ಹಿಂದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಕನ್ನಡದ ಕವಿಗಳ ನುಡಿಗಳಿರುವ ನಾಪಫಲಕ ಹಾಕಿದೆ. ಆದರೆ ನಾಮಫಲಕ ತುಕ್ಕು ಹಿಡಿಯದೇ ಹಾಗೆಯೆ ಉಳಿದಿದ್ದು, ಕನ್ನಡದ ಅಕ್ಷರ ಸಂಪೂರ್ಣ ಅಳಿಸಿ ಹೋಗಿದೆ. ಇದನ್ನು ಮತ್ತೆ ಸರಿಪಡಿಸುವ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.

ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆ ಉಳಿವಿಗೆ ಕೇವಲ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿದರೆ ಸಾಲದು. ಬದಲಾಗಿ ಎಲ್ಲಾ ಭಾಷೆಯನ್ನು ಗೌರವಿಸುವ ಜತೆಗೆ ಕನ್ನಡ ಭಾಷೆಯನ್ನು ಪ್ರಧಾನ ಭಾಷೆಯನ್ನಾಗಿ ಪ್ರತಿ ಮನೆಯಲ್ಲಿ ನಿತ್ಯ ಬಳಸಿದರೆ ಕನ್ನಡ ಭಾಷೆ ತಾನಾಗಿಯೇ ಉಳಿಯುತ್ತದೆ ಎಂದ ಅವರು, ಉತ್ತಮ ಸಮಾಜ ನಿರ್ಮಾಣ ಮಾಡುವುದರಲ್ಲಿ ಆಟೋ ಚಾಲಕರು ಮುಂಚೂಣಿಯಲ್ಲಿದ್ದಾರೆ. ತಾಲೂಕಿನಾಧ್ಯಂತ ಅನೇಕ ಆಟೋ ಸಂಘಟನೆಗಳಿದ್ದು, ಭಿನ್ನಾಭಿಪ್ರಾಯ ಬಿಟ್ಟು ಏಕಾಭಿಪ್ರಾಯ ಮೂಡಿಸಿಕೊಳ್ಳಬೇಕು. ಜತೆಗೆ ಆಟೋ ಚಾಲಕರು ಒಳ್ಳೆಯ ನಡವಳಿಕೆ ಮೈಗೂಡಿಸಿಕೊಂಡು ಜನರಲ್ಲಿ ವಿಶ್ವಾಸ ಗಳಿಸಬೇಕೆಂದು ಸಲಹೆ ನೀಡಿದರು.

ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ರಸ್ತೆಯಲ್ಲಿ ವೀರಗಾಸೆ, ಡೊಳ್ಳುಕುಣಿತ, ಸುಗ್ಗಿ ಕುಣಿತ, ನಾಸಿಕ್ ಡೋಲ್ ಮತ್ತು ಡಿಜೆ ಮೂಲಕ ಕನ್ನಡ ನಾಡಿನ ಮಹತ್ವ ಸಾರುವ ಬಗ್ಗೆ ಸ್ತಬ್ಧಚಿತ್ರಗಳೊಂದಿಗೆ ಮೆರವಣಿಗೆ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯೋತ್ಸವ ಆಚರಣ ಸಮಿತಿ ಅಧ್ಯಕ್ಷ ಜಿ.ಪ್ರಕಾಶ್ ವಹಿಸಿದ್ದರು. ಆಟೋ ಸಂಘದ ಗೌರವಾಧ್ಯಕ್ಷ ಎಂ.ಎಚ್.ಅಮರ್‍ನಾಥ್, ಕರ್ತವ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್, ಕರುನಾಡು ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ರುದ್ರೇಶ್ ಕಹಳೆ, ಸ್ವತಶ್ಚಲಿ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಗಣೇಶ್, ತಾಲೂಕು ಅಧ್ಯಕ್ಷ ಯು.ಬಿ.ನಾಗೇಶ್, ಕಾರ್ಯದರ್ಶಿ ಚಂದ್ರೇಶ್, ಆಟೋ ಚಾಲಕಿ ಬಾರತಿ ದಿನಕರ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ