ಗಣೇಶ್
ಒಕ್ಕಲಿಗರ ಸಂಘದ ಚುನಾವಣೆ, ಹಳೇ ವೈಷ್ಯಮ್ಯ, ದತ್ತ ಜಯಂತಿ ಬ್ಯಾನರ್ ತೆರವಿನ ವೇಳೆ ಉಂಟಾದ ಕಿರಿಕ್ ವ್ಯಕ್ತಿಯೋರ್ವನ ಕೊಲೆಯಲ್ಲಿ ಅಂತ್ಯಗೊಂಡಿದೆ.
ಕಡೂರು ತಾಲ್ಲೂಕು ಸಖರಾಯಪಟ್ಟಣದಲ್ಲಿ ಕಾಂಗ್ರೆಸ್ ಗ್ರಾಮ ಪಂಚಾಯತಿ ಸದಸ್ಯ ಗಣೇಶನನ್ನು (35) ಗುಂಪೊಂದು ಬರ್ಬರವಾಗಿ ಹತ್ಯೆ ಮಾಡಿದೆ.
ಶುಕ್ರವಾರ ರಾತ್ರಿ ಸಂಜಯ್ ಗೌಡ ಹಾಗೂ ಗಣೇಶ್ ಗೌಡ ನಡುವೆ ರಾತ್ರಿ ಸಖರಾಯಪಟ್ಟಣದ ಬಾರ್ ಬಳಿ ಜಗಳ ನಡೆದಿತ್ತು.
ಬಾರ್ ಸಮೀಪ ಬ್ಯಾನರ್ ತೆರವಿನ ವೇಳೆ ಯಲ್ಲಿ ಇಬ್ಬರಿಗೂ ಮಾತಿನ ಚಕಮಕಿ ನಡೆದು ತದನಂತರ ಬಸ್ ನಿಲ್ದಾಣದ ಸಮೀಪ ಗಣೇಶ್ ಗೌಡ ಬಂದಿದ್ದ. ಬಸ್ ನಿಲ್ದಾಣದ ಸಮೀಪ ಸಂಜಯ್ ಗೌಡನ ಅನುಪಸ್ಥಿತಿಯಲ್ಲಿ ಮಿಥುನ್ ಸೇರಿದಂತೆ ಸಹಚರರು ಬ್ಯಾನರ್ ತೆರವುಗೊಳಿಸುತ್ತ ಇದ್ದರು .
ಮಿಥುನ್ ಸೇರಿದಂತೆ ಇತರೆ ಸ್ನೇಹಿತರಿಗೆ ಬಿಸ್ಕೆಟ್ ಕೊಡುತ್ತಿದ್ದ ವೇಳೆ ಟ್ಯಾಕ್ಟರ್ ನಲ್ಲಿ ಸಂಜಯ್ ಗೌಡ ಬಂದಿದ್ದಾನೆ ಟ್ಯಾಕ್ಟರ್ ನಲ್ಲಿ ಬಂದು ಗಣೇಶ್ ಇದ್ದಲ್ಲಿ ಬ್ರೇಕ್ ಹಾಕಿ ಗುರಾಯಿಸಿದ್ದು,ಆಗ ಅವರಿಬ್ಬರೂ ಕೈ ಮಿಲಾಯಿಸಿಕೊಂಡಿದ್ದಾರೆ ಗಣೇಶ್ ಶರ್ಟ್ ಹರಿದು ಹೋಗಿದೆ.
ಅಲ್ಲಿದ್ದ ಸ್ಥಳಿಯರು ಇಬ್ಬರ ಜಗಳ ಬಿಡಿಸಿ ವಾಪಸ್ ಕಳಿಸಿದ್ದರು,ಗಣೇಶ್ ಮತ್ತು ಸಂಜಯ್ ಇಬ್ಬರು ಒಕ್ಕಲಿಗರ ಸಂಘದ ಚುನಾವಣೆಗೆ ಪ್ರತಿಸ್ಪರ್ಧಿಯಾಗಿದ್ದರು.
ಸಂಜಯ್ ಗೌಡನ ವಿರುದ್ಧ ಗಣೇಶ್ ಗೌಡ ಅತ್ಯಧಿಕ ಮತಗಳ ಅಂತರದಿಂದ ಜಯಗಳಿಸಿದ್ದ.ಈ ದ್ವೇಷ ಸೇರಿದಂತೆ ಹಳೆಯ ರಾಜಕೀಯ ದ್ವೇಷವು ಸೇರಿ ಕೊಲೆಗೆ ಕಾರಣ ಎಂದು ಹೇಳಲಾಗಿದೆ.
ಕಿರಿಕ್ ಬಳಿಕ ಗಣೇಶ್ ಮನೆಗೆ ತೆರಳುತ್ತಿದ್ದ ,ಆಗ ಗಣೇಶ್ ಗೌಡನಿಗೆ ಕರೆ ಮಾಡಿ ಧಮ್ ಇದ್ರೆ ಬಾ ಎಂದು ಸಂಜಯ್ ಗೌಡ ಸವಾಲು ಹಾಕಿದ್ದಾನೆ
ಕಲ್ಮುರುಡಿ ಮಠದ ಸಮೀಪವಿರುವ ತೋಟದ ಜಾಗಕ್ಕೆ ಬರಲು ಹೇಳಿದ್ದು ಗಣೇಶ್ ಗೌಡನ ಜೊತೆ ಇಬ್ಬರು ಸ್ನೇಹಿತರೂ ಕಾರ್ ನಲ್ಲಿ ಆಗಮಿಸಿದ್ದಾರೆ.
ಸಂಜಯ್ ಗೌಡ ಜೊತೆಗೆ 8 ಜನ ಸ್ನೇಹಿತರು ಬೈಕ್ ಕಾರ್ ನಲ್ಲಿ ಆಗಮಿಸಿದ್ದರು ಎಂದು ತಿಳಿದುಬಂದಿದೆ. ಗಣೇಶ್ ಗೌಡ ಕಾರಿನಲ್ಲಿ ಆಗಮಿಸಿದ್ದಂತೆ ಬುಲೆಟ್ ಬೈಕ್ ನಲ್ಲಿ ಸಂಜಯ್ ಗೌಡ ಲೈಟ್ ಆನ್ ಮಾಡಿದ್ದು, ಸಂಜಯ್ ಗೌಡನ ಸಹಚರು ಕಲ್ಲುತೂರಾಟ ಮಾಡಿದ್ದಾರೆ.
ದೊಡ್ಡ ಕಲ್ಲು ಗಣೇಶ್ ಗೌಡನ ತಲೆಗೆ ಬಿದ್ದು ಗಂಭೀರ ಗಾಯವಾಗಿದೆ .ಬಳಿಕ ಸಂಜಯ್ ಹಾಗೂ ಸ್ನೇಹಿತರು ಮಾರಕಾಸ್ತ್ರಗಳಿಂದ ಹಲ್ಲೆ ಎಸಗಿದ್ದಾರೆ.
ಗಣೇಶ್ ಗೌಡನ ಜೊತೆ ಬಂದಿದ್ದ ಇಬ್ಬರು ಸ್ನೇಹಿತರು ಅಲ್ಲಿಂದ ಎಸ್ಕೇಪ್ ಆಗಿ ಇತರೆ ಸ್ನೇಹಿತರೊಂದಿಗೆ ಬರುವ ಹೊತ್ತಿಗೆ ಬರ್ಬರ ಹತ್ಯೆ ನಡೆಸಿ ಸಂಜಯ್ ಗೌಡ ಹಾಗೂ ಟೀಂ ಪರಾರಿಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಪಟನೆಯ ವಿವರವನ್ನು ತಿಳಿಸಿದ್ದಾರೆ.
ಘಟನೆ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಈ ಮಧ್ಯೆ ಸಖರಾಯಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು. ಬಿಗಿ ಬಂದೋಬಸ್ ಮಾಡಲಾಗಿತ್ತು .
ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಆರೋಪಿಗಳ ಪತ್ತೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಸಾಗರಾಯಪಟ್ಟಣದಲ್ಲಿ ಅಘೋಷಿತ ಬಂದ್ ನಡೆಯಿತು.
ಜಿಲ್ಲಾ ಉಸ್ತುವಾರಿ ಸಚಿವ ಜಾರ್ಜ್, ಶಾಸಕ ಎಚ್. ಡಿ. ತಮ್ಮಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತಗೌಡ, ಬಿ ಎಲ್. ಶಂಕರ್ ಇತರರು ಭೇಟಿ ನೀಡಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದರು.
ರಾಜಕೀಯ ದ್ವೇಷಕ್ಕಾಗಿ ಪಕ್ಷದ ಕಾರ್ಯಕರ್ತನನ್ನು ಕೊಲೆ ಮಾಡಿದ ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಜಿಲ್ಲಾ ರಕ್ಷಣಾಧಿಕಾರಿ ವಿಕ್ರಮ ಅಮಟೆ ಸ್ಥಳದಲ್ಲಿ ಮೊಕ್ಕಂ ಮಾಡಿದ್ದರು.
ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದು ಸಂಜೆ ಅಂತ್ಯ ಸಂಸ್ಕಾರ ಜರುಗಿತು.
ಕೊಲೆಗೆ ಸಂಬಂಧಿಸಿದಂತೆ ಸಂಜಯ್, ನಿತಿನ್, ನಾಗಭೂಷಣ್ ಸೇರಿದಂತೆ ಐವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಬಂಧಿತರು ಬಜರಂಗದಳ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ ಎನ್ನಲಾಗಿದೆ.



