10-MDG-1

 

 

ಮೂಡಿಗೆರೆ ತಾಲ್ಲೂಕು ಮಾಕೋನಹಳ್ಳಿ ಗ್ರಾ.ಪಂ.ನ ನೂತನ ಅಧ್ಯಕ್ಷರಾಗಿ ಜೆಡಿಎಸ್ ಪಕ್ಷದ ಕೆ.ಎನ್.ಪುಟ್ಟರಾಜು ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನ ಅಲಂಕರಿಸಿದ ಬಳಿಕ ಮಾತನಾಡಿದ ಅವರು ಸ್ನೇಹಿತರು, ಬೆಂಗಲಿಗರು ಗ್ರಾ.ಪಂ.ಸದಸ್ಯರು ನನ್ನ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷ ಸ್ಥಾನ ನೀಡಿ ಈ ಜವಾಬ್ದಾರಿಯುತ ಸ್ಥಾನದಲ್ಲಿ ಕುಳ್ಳಿರಿಸಿದ್ದಾರೆ. ಅವರೆಲ್ಲರ ವಿಶ್ವಾಸ ನಂಬಿಕೆ ಉಳಿಸಿ ಗ್ರಾಮದ ಕುಂದುಕೊರತೆಯನ್ನು ತನ್ನ ಕೈಲಾದಷ್ಟು ಮಟ್ಟಿಗೆ ಪ್ರಾಮಾಣಿಕವಾಗಿ ಮತ್ತು ಪಾರದರ್ಶಕವಾಗಿ ಈಡೇರಿಸಲು ನನ್ನ ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡುತ್ತೇನೆ. ಗ್ರಾಮದ ಅಭಿವೃದ್ದಿಗೆ ಮೊದಲ ಆದ್ಯತೆ ನೀಡುವುದು ನನ್ನ ಕರ್ತವ್ಯವಾಗಿದೆ. ಮೂಲ ಸೌಕರ್ಯಗಳಾದ ಕುಡಿಯುವ ನೀರು ರಸ್ತೆ ಅಭಿವೃದ್ದಿಗೆ ಪ್ರಥಮ ಪ್ರಾಶಸ್ತ್ಯ ನೀಡುವುದಾಗಿ ತಿಳಿಸಿದ ಅವರು ಗ್ರಾಮದ ಸರ್ವತೋಮುಖ ಅಭಿವೃದ್ದಿಗೆ ಎಲ್ಲ ಸದಸ್ಯರು ಮತ್ತು ಗ್ರಾಮಸ್ಥರು ಪಕ್ಷಭೇದ ಮರೆತು ಸಹಕರಿಸಲು ಮನವಿ ಮಾಡಿದ ಅವರು ಮಾಕೋನಹಳ್ಳಿ ಗ್ರಾಮ ಪಂಚಾಯಿತಿ ಜಿಲ್ಲೆಯಲ್ಲೇ ಅತ್ಯುತ್ತಮ ಗ್ರಾ.ಪಂ.ಆಗಿ ಮಾಡುವ ಆಶಯವನ್ನು ವ್ಯಕ್ತಪಡಿಸಿದರು.

ಈ ವೇಳೆ ಜೆಡಿಎಸ್ ಮುಖಂಡ ಗಬ್ಬಳ್ಳಿ ಚಂದ್ರೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಕಲ್ಲೇಶ್, ಅಶ್ವಥ್ ಮೂಡಸಸಿ, ಕೆ.ಎನ್. ಕೃಷ್ಣೇಗೌಡ, ಎಂ.ಸಿ. ಹೂವಪ್ಪ, ರೆಹಮಾನ್ ಇಂದ್ರವಳ್ಳಿ, ಮನು ಮಾಲಹಳ್ಳಿ, ಸತ್ಯ ತುದಿಯಾಲ, ನಿಧಿ, ಮದನ್, ಪ್ರಸನ್ನ, , ಕಿರಣ್, ಸುಂದರೇಶ್, ಅನಿಲ್, ಗ್ರಾ.ಪಂ.ಸದಸ್ಯರಾದ ರಮೇಶ್, ಪ್ರಸನ್ನ, ಮಂಜುಳ, ಸೀತು,ಪ್ರಕಾಶ್, ಲೋಲಾಕ್ಷಿ, ರಕ್ಷಿತಾ ಮತ್ತು ಪಿಡಿಒ ಸುಧೀರ್ ಮತ್ತಿತರರು ಇದ್ದರು.

ಚುನಾವಣಾಧಿಕಾರಿಯಾಗಿ ತಾಲ್ಲೂಕು ಪಂಚಾಯಿತಿ ಇಓ ಶ್ರೀಮತಿ ದಯಾವತಿ ಕರ್ತವ್ಯ ನಿರ್ವಹಿಸಿದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ