ಉನ್ನತ ಶಿಕ್ಷಣ ಹಾಗೂ ಸಾಂಸ್ಕೃತಿಕ ಬೆಳವಣಿಗೆಯಿಂದ ಶಿಕ್ಷಣ ಸಂಸ್ಥೆಗಳು ಮೇಲ್ಮಟ್ಟಕ್ಕೆ ಸಾಗಲು ಹಾದಿಯಾಗಿದೆ’ಎಂದು ನವಾಜ್ ಮನ್ನಾಣಿ ಪಣವೂರು ಹೇಳಿದರು.
ಅವರು ಮೂಡಿಗೆರೆ ತಾಲ್ಲೂಕಿನ ಬಣಕಲ್ ಸಮೀಪದ ಚಕ್ಕಮಕ್ಕಿಯ ದಾರುಲ್ ಬಯಾನ್ ಖಲಂದರಿಯ ಶಿಕ್ಷಣ ಸಂಸ್ಥೆಯ ಬೆಳ್ಳಿ ಮಹೋತ್ಸವದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಶಿಕ್ಷಣ ನಮ್ಮ ಬದುಕಿಗೆ ಮುಖ್ಯ ಪಾತ್ರ ವಹಿಸುತ್ತದೆ. ನಾವು ಕಲಿತ ವಿದ್ಯಾ ಸಂಸ್ಥೆಗಳನ್ನು ಮರೆಯಬಾರದು. ಶಿಕ್ಷಣವು ಮಾನವನ ವ್ಯಕ್ತಿ ವಿಕಸನಕ್ಕೆ ಮುಖ್ಯ ವಾಹಿನಿಯಾಗಿ ಕೆಲಸ ಮಾಡುತ್ತದೆ’ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಚುಂಗತರ ಉಸ್ತಾದ್ ನೆರವೇರಿಸಿ ಮಾತನಾಡಿ’ಇಪ್ಪತ್ತೈದು ವರ್ಷಗಳ ಸಾಧನೆ ವಿದ್ಯಾರ್ಥಿಗಳ ಏಳಿಗೆಗೆ ಪಾಲಕರ ವಿಶ್ವಾಸಕ್ಕೆ ಮತ್ತು ಶಿಕ್ಷಕರ ತ್ಯಾಗಕ್ಕೆ ಸಾಕ್ಷಿಯಾಗಿದೆ’ಎಂದರು.
ಇರ್ಷಾದ್ ಧಾರೀಮಿ ಮಿತ್ತಬೈಲ್ ಮಾತನಾಡಿ’ ಶಿಕ್ಷಣವು ಬರೀ ಅಕ್ಷರ ಗುರಿಯಲ್ಲ,ಇದು ಮಾನವೀಯತೆ, ಶಿಸ್ತು ಮತ್ತು ಜವಾಬ್ದಾರಿತನವನ್ನು ರೂಪಿಸುವ ಮಹಾ ಪ್ರಕ್ರೀಯೆಯಾಗಿದೆ. ಸಮುದಾಯದ ಬೆಳವಣಿಗೆಗೆ ದೀಪದಂತೆ ದಾರಿ ತೋರಿಸುವುದು ಸಂಸ್ಥೆಯ ನೈಜ ಶಕ್ತಿಯಾಗಿದೆ’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟಿನ ಅಧ್ಯಕ್ಷ ನಾಸೀರ್ ಹಾಜಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಝೈದ್ ಫೈಝಿ ಖಲಂಧರಿ ಸ್ವಾಗತಿಸಿ, ಸಿನಾನ್ ಉಸ್ತಾದ್ ವಂದಿಸಿದರು. ಕಾರ್ಯಕ್ರಮದಲ್ಲಿ ಮೊಯ್ದು ಫೈಝಿ ಕೊಡಗು, ಶೈಕುನಾ ಉಸ್ಮಾನ್ ಫೈಝಿ ತೊಡಾರ್, ಸಲೀಂ ಅರ್ಷಾದೀ, ಸ್ಥಳೀಯ ಮುಖಂಡರಾದ ಸಿ.ಕೆ.ಇಬ್ರಾಹಿಂ, ಅಕ್ರಂ ಹಾಜಿ, ನಜೀರ್, ಉಮ್ಮರ್, ಎ.ಸಿ.ಅಯೂಬ್, ಆಸೀಫ್, ಮಜೀದ್ ಹಾಗೂ ಸಂಸ್ಥೆಯ ಸರ್ವ ಸದಸ್ಯರು ಇದ್ದರು



